ಮಾನವೀಯ “ದರ್ಶನ’
ಕಿಡ್ನಿ ವೈಫಲ್ಯಗೊಂಡ ಪುಟ್ಟ ಅಭಿಮಾನಿ ಭೇಟಿ ಮಾಡಿದ ದಾಸ
Team Udayavani, Jan 13, 2020, 7:00 AM IST
ದರ್ಶನ್ ಅವರ ಸಹಾಯ ಗುಣ ಬಹಳಷ್ಟು ಮಂದಿಗೆ ಗೊತ್ತಿಲ್ಲ. ಅವರು ಬಲಗೈಯಲ್ಲಿ ಕೊಟ್ಟಿದ್ದು ತಮ್ಮ ಎಡಗೈಗೂ ಗೊತ್ತಿರದ ಹಾಗೆ ಸಹಾಯ ಮಾಡುತ್ತ ಬಂದವರು. ಅವರೆಂದೂ ತಾವು ಮಾಡಿದ ಸಹಾಯದ ಬಗ್ಗೆ ಹೇಳಿಕೊಂಡವರಲ್ಲ. ಬದಲಾಗಿ, ಅವರಿಂದ ಸಹಾಯ ಪಡೆದ ಅದೆಷ್ಟೋ ಮಂದಿ, ಅವರನ್ನು ಗುಣಗಾನ ಮಾಡಿದ ಉದಾಹರಣೆ ಸಾಕಷ್ಟಿದೆ. ತಾವು ಎಷ್ಟೇ ಬಿಝಿ ಇದ್ದರೂ, ಕೆಲಸದ ಒತ್ತಡದಲ್ಲಿದ್ದರೂ, ದರ್ಶನ್ ಮಾತ್ರ ತಮ್ಮನ್ನು ನೋಡಲು ಬರುವ ಅಭಿಮಾನಿಗಳಿಗೆ ಎಂದೂ ನಿರಾಸೆ ಮಾಡಿದವರಲ್ಲ.
ಅದರಲ್ಲೂ, ಅನೇಕ ಕಾಯಿಲೆಗಳಿಂದ ಬಳಲುತ್ತಿರುವ ಅಭಿಮಾನಿಗಳು ತಮ್ಮನ್ನು ನೋಡಲು ಬಯಸಿದರೆ, ಖಂಡಿತ ದರ್ಶನ್ ಅವರು ಹಾಜರಾಗುತ್ತಾರೆ ಅಥವಾ ಅವರನ್ನು ತಮ್ಮ ಬಳಿಯೇ ಕರೆಸಿಕೊಳ್ಳುತ್ತಾರೆ. ಈಗ ಅಂತಹ ಮಾನವೀಯ ಗುಣದ ಮತ್ತೂಂದು ಮುಖ ಇಲ್ಲಿದೆ. ಕಿಡ್ನಿ ವೈಫಲ್ಯದಿಂದ ಸಾವು-ಬದುಕಿನ ನಡುವೆ ಹೋರಾಟ ಮಾಡುತ್ತಿರುವ ಬಾಲಕ ರತನ್, ದರ್ಶನ್ ಅವರ ಅಪ್ಪಟ ಅಭಿಮಾನಿ. ಆ ಪುಟ್ಟ ಅಭಿಮಾನಿ, ದರ್ಶನ್ ಅವರನ್ನೊಮ್ಮೆ ನೋಡಿ ಮಾತನಾಡಿಸಬೇಕು, ಥ್ಯಾಂಕ್ಸ್ ಕೊಡಬೇಕು ಎಂಬ ಆಸೆ ವ್ಯಕ್ತಪಡಿಸಿದ್ದಾನೆ.
ಆ ಪುಟ್ಟ ಅಭಿಮಾನಿಯ ಆಸೆಯ ವಿಷಯ ದರ್ಶನ್ ಅವರಿಗೂ ತಲುಪಿದೆ. ತಡಮಾಡದೆ, ದರ್ಶನ್ ಅವರು, ಆ ಪುಟ್ಟ ಅಭಿಮಾನಿ ರತನ್ ಅವರನ್ನು ಕರೆಸಿ, ಭೇಟಿ ಮಾಡುವ ಮೂಲಕ ಆ ಬಾಲಕನ ಆಸೆಯನ್ನು ಈಡೇರಿಸಿದ್ದಾರೆ. ಒಂದಷ್ಟು ಮಾತನಾಡಿ, ಅವನನ್ನು ಎತ್ತಿಕೊಂಡು ಫೋಟೋ ತೆಗೆಸಿಕೊಂಡಿದ್ದಲ್ಲದೆ, ಕೆಲ ಹೊತ್ತು ಹರಟಿದ್ದಾರೆ. ಆ ಹುಡುಗನ ಮೊಗದಲ್ಲಿ ಮಂದಹಾಸ ಮೂಡಿಸಿ, ಶುಭಹಾರೈಸಿದ್ದಾರೆ ದರ್ಶನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Upendra: ʼಯುಐʼಗೆ ಸ್ಯಾಂಡಲ್‌ವುಡ್ ಸಾಥ್; ಉಪೇಂದ್ರ ಚಿತ್ರ ನೋಡಲು ಕಾತುರ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.