‘ಹುಟ್ಟುಹಬ್ಬ’ದ ಟ್ರೇಲರ್ ಬಂತು: ಡಿ.31 ಸಿನಿಮಾ ರಿಲೀಸ್
Team Udayavani, Dec 26, 2021, 12:00 PM IST
ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಮೂಲಕ ಟಿ.ಆರ್.ಚಂದ್ರಶೇಖರ್ ಹಾಗೂ ಸಿ.ನಂದಕಿಶೋರ್ ನಿರ್ಮಿಸಿರುವ, ದಿಗಂತ್ ನಾಯಕರಾಗಿ ನಟಿಸಿರುವ ಹುಟ್ಟುಹಬ್ಬದ ಶುಭಾಶಯಗಳು ಚಿತ್ರದ ಟ್ರೇಲರನ್ನು ರಿಯಲ್ ಸ್ಟಾರ್ ಉಪೇಂದ್ರ ಬಿಡುಗಡೆ ಮಾಡಿದರು.
ಬಳಿಕ ಮಾತನಾಡಿದ ಉಪೇಂದ್ರ, “ನಾನು ಈ ಸಂಸ್ಥೆಯ ಬುದ್ಧಿವಂತ 2 ಚಿತ್ರದಲ್ಲಿ ನಟಿಸಿದ್ದೇನೆ. ಆದರೆ ನಿಜವಾದ ಬುದ್ಧಿವಂತರು ಎಂದರೆ ಈ ಚಿತ್ರದ ನಿರ್ಮಾಪಕರು. ಈಗ ಅವರ ಮತ್ತೂಂದು ಚಿತ್ರ ಬಿಡುಗಡೆಯಾಗುತ್ತಿದೆ. ವರ್ಷದ ಕೊನೆಗೆ ಬರುತ್ತಿರುವ ಈ ಚಿತ್ರಕ್ಕೆ ಒಳ್ಳೆಯದಾಗಲಿ’ ಎಂದರು.
ನಿರ್ಮಾಪಕ ಟಿ.ಆರ್.ಚಂದ್ರಶೇಖರ್ ಮಾತನಾಡಿ, ನಮ್ಮ ಸಂಸ್ಥೆಯ ಮೊದಲ ಚಿತ್ರ ಚಮಕ್ ಸಹ ಡಿಸೆಂಬರ್ ನಲ್ಲಿ ಬಿಡುಗಡೆ ಮಾಡಿದ್ದೆವು. ಈಗ ಈ ಚಿತ್ರ ಸಹ ಇದೇ ತಿಂಗಳಲ್ಲಿ ಬಿಡುಗಡೆ ಮಾಡುತ್ತಿದ್ದೇವೆ. ಮೂಲತಃ ಎಂಜಿನಿಯರ್ ಆಗಿರುವ ನಾಗರಾಜ್ ಬೆತ್ತುರ್ ಅವರ ಸಾರಥ್ಯದಲ್ಲಿ ಚಿತ್ರ ಉತ್ತಮವಾಗಿ ಮೂಡಿಬಂದಿದೆ’ ಎನ್ನುತ್ತಾ ಉಪ್ಪಿಗೊಂದು ಥ್ಯಾಂಕ್ಸ್ ಹೇಳಿದರು. ಜೊತೆಗ ನಮ್ಮ ರಾಜ್ಯದಲ್ಲಿ ನಮ್ಮ ಚಿತ್ರಗಳಿಗೆ ಚಿತ್ರಮಂದಿರ ಸಿಗುತ್ತಿಲ್ಲ. ನಮ್ಮ ಚಿತ್ರಗಳಿಗೆ ಚಿತ್ರಮಂದಿರ ದೊರಕುವಂತೆ ಮಾಡಿ ಎಂದು ಮನವಿ ಮಾಡಿದರು.
ಇದು ನನ್ನ ಮೊದಲ ಚಿತ್ರ. ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿರುವುದರಿಂದ ಹೆಚ್ಚು ಕಥೆ ಹೇಳುವ ಹಾಗಿಲ್ಲ ಎನ್ನುತ್ತಾ ಅವಕಾಶ ನೀಡಿದ ನಿರ್ಮಾಪಕರಿಗೆ, ಸಹಕಾರ ನೀಡಿದ ಚಿತ್ರತಂಡಕ್ಕೆ ಧನ್ಯವಾದ ಹೇಳಿದರು ನಿರ್ದೇಶಕ ನಾಗರಾಜ್.
ಇದನ್ನೂ ಓದಿ:ಯಶ್ ಬರ್ತ್‌ಡೇಗೆ ‘ಕೆಜಿಎಫ್ 2’ ಟ್ರೇಲರ್ ಬರಲ್ಲ
ನಾಯಕ ದಿಗಂತ್ ಮಾತನಾಡಿ, ಉಪೇಂದ್ರ ಅವರು ಅವರದೇ ನಿರ್ದೇಶನದ ಚಿತ್ರವೊಂದರ ಸ್ಕ್ರಿಪ್ಟ್ನಲ್ಲಿ ಬ್ಯುಸಿಯಿದ್ದರೂ, ನನ್ನ ಮನವಿಗೆ ಸ್ಪಂದಿಸಿ ಬಂದಿದ್ದಾರೆ. ನಿರ್ದೇಶಕರು ಹೇಳಿದ ಹಾಗೆ ಸಸ್ಪೆನ್ಸ್, ಥ್ರಿಲ್ಲರ್ ಜಾನರ್ ಚಿತ್ರ ಆಗಿರುವುದರಿಂದ ಹೆಚ್ಚು ಹೇಳುವ ಹಾಗಿಲ್ಲ. ಒಟ್ಟಿನಲ್ಲಿ ಉತ್ತಮ ಚಿತ್ರ ಅಂತ ಹೇಳಬಹುದು. ಡಿಸೆಂಬರ್ 31 ರಂದು ಚಿತ್ರ ತೆರೆಗೆ ಬರುತ್ತಿದೆ’ ಎಂದರು.
ನಾಯಕಿ ಕವಿತಾ ಗೌಡ, ಶರಣ್ಯ ಶೆಟ್ಟಿ, ಮನು, ಸಂಗೀತ ನಿರ್ದೇಶಕ ಶ್ರೀಧರ್ ವಿ ಸಂಭ್ರಮ್ ಮುಂತಾದವರು ತಮ್ಮ ಅಭಿಪ್ರಾಯ ಹಂಚಿಕೊಂಡರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್ ಬಣಕಾರ್, ನಿರ್ಮಾಪಕ ಭಾ ಮ ಹರೀಶ್ ಸೇರಿದಂತೆ ಅನೇಕರು ಟ್ರೇಲರ್ ಬಿಡುಗಡೆಯಲ್ಲಿ ಭಾಗಿಯಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
Adhipatra Movie: ರೂಪೇಶ್ ಅಧಿಪತ್ರ ಫೆ.7ಕ್ಕೆ ಬಿಡುಗಡೆ
ShivaRajkumar: ಅಮೆರಿಕಾಕ್ಕೆ ತೆರಳುವ ಮುನ್ನ ಶಿವಣ್ಣನ ಮನೆಯಲ್ಲಿ ವಿಶೇಷ ಪೂಜೆ; ಕಿಚ್ಚ ಭಾಗಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.