ಯಾವ ಕಲಾವಿದನ ಜೊತೆ ನಟಿಸಲು ನನ್ನ ಅಭ್ಯಂತವಿಲ್ಲ
Team Udayavani, Dec 31, 2017, 11:01 AM IST
ನಿರ್ಮಾಪಕ ಮುನಿರತ್ನ ಮುಂದಿನ ದಿನಗಳಲ್ಲಿ ಪುನೀತ್, ಸುದೀಪ್ ಹಾಗೂ ಉಪೇಂದ್ರ ಅವರನ್ನು ಚಾಣಕ್ಯ ಚಂದ್ರಗುಪ್ತ ಮೌರ್ಯ ಕುರಿತಾದ ಸಿನಿಮಾ ಮಾಡುವ ಆಸೆ ಇದೆ ಎಂದು ಹೇಳಿದ್ದರು. ಮೂರು ಸ್ಟಾರ್‌ಗಳನ್ನು ಒಟ್ಟಾಗಿ ಸೇರಿಸಿ ಸಿನಿಮಾ ಮಾಡೋದು ಸುಲಭದ ಮಾತಲ್ಲ. ಮೂವರು ಸ್ಟಾರ್‌ಗಳ ಡೇಟ್, ಪಾತ್ರ ಎಲ್ಲವೂ ಹೊಂದಿಕೆಯಾಗಬೇಕು.
ಅದಕ್ಕಿಂತ ಮುನ್ನ ಆ ಸ್ಟಾರ್‌ಗಳು ಒಪ್ಪಬೇಕು. ಪುನೀತ್‌ರಾಜಕುಮಾರ್ ಈ ಸಿನಿಮಾದಲ್ಲಿ ನಟಿಸುತ್ತಾರಾ? ಈ ಪ್ರಶ್ನೆಯನ್ನು ಪುನೀತ್ ಅವರ ಮುಂದಿಟ್ಟರೆ, ನಟಿಸಲು ಅಭ್ಯಂತರವಿಲ್ಲ. ಆದರೆ, ಪ್ರಾಜೆಕ್ಟ್ ಹೇಗೆ ಮೂಡಿಬರುತ್ತೆ ಅನ್ನೋದನ್ನು ಮೊದಲು ತಿಳಿದುಕೊಳ್ಳಬೇಕು ಎನ್ನುತ್ತಾರೆ. “ನನಗೆ ಆ ವಿಚಾರ ಗೊತ್ತಿಲ್ಲ. ಪೌರಾಣಿಕ ಸಿನಿಮಾ ಎಂದಾಗ ಅದಕ್ಕೆ ಸಾಕಷ್ಟು ತಯಾರಿಬೇಕು.
ಕಮರ್ಷಿಯಲ್ ಸಿನಿಮಾ ತರಹ ಮಾಡುವಂತಿಲ್ಲ. ಈಗಂತೂ ಪೌರಾಣಿಕ ಸಿನಿಮಾ ಎಂದಾಗ ಅದರ ಟೆಕ್ನಿಕಲ್ ಅಂಶಗಳು ಹೆಚ್ಚು ಪರಿಗಣನೆಗೆ ಬರುತ್ತದೆ. ನಮಗೆ ಬೇಕೋ ಬೇಡವೋ ಈಗ “ಬಾಹುಬಲಿ’ ಸಿನಿಮಾಕ್ಕೆ ಹೋಲಿಕೆ ಮಾಡುತ್ತೇವೆ. ಕಥೆಯ ಜೊತೆಗೆ ಅದನ್ನು ಹೇಗೆ ಕಟ್ಟಿಕೊಟ್ಟಿದ್ದೇವೆ ಎಂಬುದು ಮುಖ್ಯ. ನನಗೆ ಯಾರ ಜೊತೆಯೂ ನಟಿಸಲು ಅಭ್ಯಂತರವಿಲ್ಲ.
ನಾನೊಬ್ಬ ಕಲಾವಿದ. ನನಗೆ ಅವರ ಜೊತೆ ನಟಿಸಬಾರದು, ಇವರ ಜೊತೆ ನಟಿಸಬಾರದು ಎಂದೇನಿಲ್ಲ. ಪಾತ್ರ, ಟೆಕ್ನಿಕಲ್ ಅಂಶ ಸೇರಿದಂತೆ ಕೂಡಿಬಂದರೆ ನಟಿಸಲು ಅಭ್ಯಂತರವಿಲ್ಲ. ಸದ್ಯಕ್ಕೆ ಆ ಬಗ್ಗೆ ಏನೂ ಮಾತುಕತೆಯಾಗಿಲ್ಲ. ಮುಂದೆ ಬಂದಾಗ ನೋಡೋಣ’ ಎಂಬ ಉತ್ತರ ಅವರಿಂದ ಬರುತ್ತದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.