ಭವಿಷ್ಯ ಗೊತ್ತಿಲ್ಲ, ಈ ಕ್ಷಣಕ್ಕೆ ಖುಷಿಯಾಗಿದ್ದೇನೆ
Team Udayavani, Apr 1, 2018, 11:33 AM IST
ಮಾನ್ವಿತಾ ಹರೀಶ್ “ಟಗರು’ ಸಿನಿಮಾಕ್ಕೆ ಆಯ್ಕೆಯಾದ ದಿನದಿಂದಲೇ ಸಿಕ್ಕಾಪಟ್ಟೆ ಖುಷಿಯಾಗಿದ್ದರು. ಅದರಲ್ಲೂ ಚಿತ್ರದ ಹಾಡುಗಳು ಹಿಟ್ ಆದಾಗ, ಮಾನ್ವಿತಾ ಕಾಣಿಸಿಕೊಂಡ ರೀತಿ ಬಗ್ಗೆ ಮೆಚ್ಚುಗೆ ಕೇಳಿಬಂದಾಗೆಲ್ಲಾ ಅವರ ಮುಖ ಅರಳುತ್ತಿತ್ತು. ಈಗ ಆ ಎಲ್ಲಾ ಖುಷಿ ಡಬಲ್ ಆಗಿದೆ. ಅದಕ್ಕೆ ಕಾರಣ ನಿರ್ದೇಶಕ ರಾಮ್‌ಗೋಪಾಲ್ ವರ್ಮಾ.
ಇತ್ತೀಚೆಗೆ ಒರಾಯನ್ ಮಾಲ್‌ನಲ್ಲಿ “ಟಗರು’ ಸಿನಿಮಾ ನೋಡಿದ ರಾಮ್‌ಗೋಪಾಲ್ ವರ್ಮಾ, ಸಿನಿಮಾದ ಜೊತೆಗೆ ಮಾನ್ವಿತಾ ಹರೀಶ್ ನಟನೆಗೆ ಫೀದಾ ಆಗಿದ್ದಾರೆ. “ಮಾನ್ವಿತಾ ತುಂಬಾ ಚೆನ್ನಾಗಿ ನಟಿಸಿದ್ದಾರೆ. ಆಕೆಯ ನಟನೆ ಇಷ್ಟವಾಯಿತು. ನನ್ನ ಮುಂದಿನ ಸಿನಿಮಾದಲ್ಲಿ ಆಕೆಗೆ ಅವಕಾಶ ನೀಡುವ ಜೊತೆಗೆ ಆಕೆ ಕೇಳುವುದಕ್ಕಿಂತ 10 ಲಕ್ಷ ರೂಪಾಯಿ ಹೆಚ್ಚು ಸಂಭಾವನೆ ಕೊಡುತ್ತೇನೆ’ ಎಂದು ಟ್ವೀಟ್ ಮಾಡಿದ್ದರು.
ಜೊತಗೆ ಎರಡು ಸಾವಿರ ರೂಪಾಯಿಯನ್ನು ಟೋಕಾನ್ ಅಡ್ವಾನ್ಸ್ ಆಗಿ ಆಕೆಗೆ ನೀಡಿದ್ದಾರೆ ಕೂಡಾ. ಇವೆಲ್ಲದರಿಂದ ಮಾನ್ವಿತಾ ಖುಷಿಯಾಗಿದ್ದಾರೆ. “ಈ ಕ್ಷಣಕ್ಕೆ ನಾನು ತುಂಬಾ ಖುಷಿಯಾಗಿದ್ದೇನೆ. “ಟಗರು’ ಚಿತ್ರದ ಯಶಸ್ಸಿನಲ್ಲಿ ನನಗೇನು ಸಿಗಬೇಕಿತ್ತು ಅದು ಸಿಕ್ಕಿದೆ. ಆ ತರಹದ ಮೆಚ್ಚುಗೆ ಒಬ್ಬ ದೊಡ್ಡ ನಿರ್ದೇಶಕನಿಗೆ ಸಿಕ್ಕಾಗ ಯಾರು ತಾನೆ ಖುಷಿಯಾಗಲ್ಲ ಹೇಳಿ.
ಫ್ರೇಮ್ ಟು ಫ್ರೇಮ್ ಅದ್ಭುತವಾಗಿ ಕಾಣಿಸಿಕೊಂಡಿದ್ದೀಯ ಎಂದು ಮೆಚ್ಚುಗೆ ಸೂಚಿಸಿದ್ದು ನನಗೆ ಸಿಕ್ಕ ದೊಡ್ಡ ಗೆಲುವು. ಈ ತರಹ ನನ್ನ ಬಗ್ಗೆ ಟ್ವೀಟ್ ಮಾಡಿರಲಿಲ್ಲ’ ಎಂದು ಆರ್‌ಜಿವಿ ಮೆಚ್ಚುಗೆಯ ಬಗ್ಗೆ ಮಾತನಾಡುತ್ತಾರೆ ಮಾನ್ವಿತಾ. ಇನ್ನು, ಮಾನ್ವಿತಾಗೆ ತಮ್ಮ ಮುಂದಿನ ಸಿನಿಮಾದಲ್ಲಿ ಅವಕಾಶ ಕೊಡುವುದಾಗಿ ಹೇಳಿರುವ ಆರ್‌ಜಿವಿ, ಟೋಕಾನ್ ಅಡ್ವಾನ್ಸ್ ಕೂಡಾ ಕೊಟ್ಟಿದ್ದಾರೆ.
ಹಾಗಾದರೆ, ಸಿನಿಮಾ ಯಾವಾಗ ಶುರುವಾಗುತ್ತದೆ ಎಂದರೆ ಗೊತ್ತಿಲ್ಲ ಎಂಬ ಉತ್ತರ ಮಾನ್ವಿತಾರಿಂದ ಬರುತ್ತದೆ. “ನನಗೆ ಭವಿಷ್ಯದ ಬಗ್ಗೆ ಗೊತ್ತಿಲ್ಲ. ಈ ಕ್ಷಣಕ್ಕೆ ನಾನು ಆರ್‌ಜಿವಿಯವರ ಮೆಚ್ಚುಗೆಯಿಂದ ಖುಷಿಯಾಗಿರೋದಂತೂ ನಿಜ. ಎರಡು ಸಾವಿರ ರೂಪಾಯಿಯ ನೋಟಿನಲ್ಲಿ “ಮೈ ಫಸ್ಟ್ ಸೈನಿಂಗ್ ಅಮೌಂಟ್ ಟು ದಿ ಮೋಸ್ಟ್ ವಂಡರ್‌ಫುಲ್ ಆ್ಯಕೆಸ್’ ಎಂದು ಬರೆದಿದ್ದಾರೆ.
ಅದನ್ನು ಫ್ರೇಮ್ ಹಾಕಿಸಿಟ್ಟಿದ್ದೀನಿ. ನನಗೆ ದುಡ್ಡು ಎಷ್ಟು ಅನ್ನೋದು ಮುಖ್ಯವಲ್ಲ. ಆದರೆ, ದೊಡ್ಡ ನಿರ್ದೇಶಕರಿಂದ ಸಿಕ್ಕ ಮೆಚ್ಚುಗೆಯಷ್ಟೇ ಮುಖ್ಯ’ ಎನ್ನುವುದು ಮಾನ್ವಿತಾ ಮಾತು. ಸದ್ಯ ಮಾನ್ವಿತಾಗೆ ಕನ್ನಡದಿಂದಲೂ ಸಾಕಷ್ಟು ಅವಕಾಶಗಳು ಬರುತ್ತಿದ್ದು, ಕಥೆ ಕೇಳುವುದರಲ್ಲಿ ಬಿಝಿಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Chinnaswamy Stadium: ಚಿನ್ನಸ್ವಾಮಿ ಸ್ಟಾಂಡ್‌ಗಳಿಗೆ ದಿಗ್ಗಜರ ಹೆಸರು
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.