50ರ ಸಂಭ್ರಮಕ್ಕೆ “ಐ ಲವ್ ಯು’ ಸಿದ್ಧತೆ
Team Udayavani, Jul 29, 2019, 1:29 PM IST
ಆರ್. ಚಂದ್ರು ನಿರ್ಮಾಣ, ನಿರ್ದೇಶನದ “ಐ ಲವ್ ಯು’ ಚಿತ್ರ ಈಗಾಗಲೇ ಹಿಟ್‌ಲಿಸ್ಟ್ ಸೇರಿದೆ. ಸಿನಿಮಾ ನೋಡಿದವರು ಇಷ್ಟಪಡುವ ಮೂಲಕ ಕಲೆಕ್ಷನ್‌ನಲ್ಲೂ ಚಿತ್ರ ಸದ್ದು ಮಾಡಿದ್ದು ಗೊತ್ತೇ ಇದೆ. ಚಿತ್ರ ಈಗ 50ನೇ ದಿನದತ್ತ ದಾಪುಗಾಲು ಹಾಕುತ್ತಿದೆ. ಆಗಸ್ಟ್ 02ಕ್ಕೆ ಚಿತ್ರ 50 ದಿನಗಳನ್ನು ಪೂರೈಸುತ್ತಿದ್ದು, ಆ ಸಂಭ್ರಮಕ್ಕಾಗಿ ಚಿತ್ರತಂಡ ಕಾರ್ಯಕ್ರಮವೊಂದನ್ನು ಆಯೋಜಿಸಿದೆ.
ಚಿತ್ರ 50 ದಿನ ಪೂರೈಸುವ ದಿನವೇ (ಆ.02) ಚಿತ್ರತಂಡದ ಸದಸ್ಯರೆಲ್ಲಾ ಸೇರಿ ಸಂಭ್ರಮಿಸಲಿದ್ದಾರೆ. ಚಿತ್ರಕ್ಕಾಗಿ ದುಡಿದ ಮಂದಿಗೆ “ಐ ಲವ್ ಯು’ ನೆನಪಿನ ಕಾಣಿಕೆ ಕೂಡಾ ನೀಡಲು ಆರ್.ಚಂದ್ರು ನಿರ್ಧರಿಸಿದ್ದಾರೆ.
ಈ ಬಗ್ಗೆ ಮಾತನಾಡುವ ಚಂದ್ರು, “ಈ ಸಿನಿಮಾ ಈಗಾಗಲೇ ದೊಡ್ಡ ಮಟ್ಟದಲ್ಲಿ ಗೆದ್ದಿದೆ. ಈ ಚಿತ್ರದಿಂದ ಎಲ್ಲರಿಗೂ ಒಳ್ಳೆಯದಾಗಿದೆ. ಈಗ ಚಿತ್ರ 50ನೇ ದಿನದತ್ತ ಸಾಗಿದ್ದು, ಅದೇ ದಿನ ಕಾರ್ಯಕ್ರಮವೊಂದನ್ನು ಆಯೋಜಿಸುತ್ತಿದ್ದೇವೆ. ಈ ಕಾರ್ಯಕ್ರಮದಲ್ಲಿ ಇಡೀ ಚಿತ್ರತಂಡ ಭಾಗಿಯಾಗಲಿದೆ’ ಎನ್ನುತ್ತಾರೆ.
ಉಪೇಂದ್ರ ನಾಯಕರಾಗಿರುವ “ಐ ಲವ್ ಯು’ ಚಿತ್ರದಲ್ಲಿ ರಚಿತಾ ರಾಮ್, ಸೋನು ನಾಯಕಿಯರಾಗಿ ನಟಿಸಿದ್ದಾರೆ. ಈ ಚಿತ್ರದ ಮೂಲಕ ಉಪೇಂದ್ರ ತಮ್ಮ ಒರಿಜಿನಲ್ ಸ್ಟೈಲ್‌ನಲ್ಲಿ ಮರಳಿದ್ದಾರೆ. ಉಪೇಂದ್ರ ಅವರ ಗೆಟಪ್, ಡೈಲಾಗ್ ಉಪ್ಪಿ ಅಭಿಮಾನಿಗಳನ್ನು ಸೆಳೆದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.