ಎ ಚಿತ್ರದ ಮುಂದುವರೆದ ಭಾಗ ಮಾಡುತ್ತೇನೆ: ನಾಯಕಿ ಚಾಂದಿನಿ ಮಾತು
Team Udayavani, May 26, 2024, 12:20 PM IST
ಉಪೇಂದ್ರ ನಟನೆಯ “ಎ’ ಚಿತ್ರದಲ್ಲಿ ನಾಯಕಿಯಾಗಿದ್ದ ಚಾಂದಿನಿ ಈಗ ಮತ್ತೂಮ್ಮೆ ಖುಷಿಯಾಗಿದ್ದಾರೆ. ಅದಕ್ಕೆ ಕಾರಣ ಸಿನಿಮಾ ರೀ ರಿಲೀಸ್‌ನಲ್ಲೂ ಸಕ್ಸಸ್ ಕಂಡಿರುವುದು. ಈ ಖುಷಿಯನ್ನು ಇತ್ತೀಚೆಗೆ ಮಾಧ್ಯಮ ಮುಂದೆ ಹಂಚಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, 26 ವರ್ಷಗಳ ಹಿಂದೆ ಇಡೀ ದೇಶದಲ್ಲಿ ಸಂಚಲನ ಮೂಡಿಸಿದ ಚಿತ್ರ “ಎ’. ಈ ಚಿತ್ರ ಇತ್ತೀಚೆಗೆ ರೀ ರಿಲೀಸ್ ಆಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಬಹಳ ಸಂತೋಷವಾಗಿದೆ. ಈ ಚಿತ್ರಕ್ಕೆ ನಾನು ನಾಯಕಿಯಾಗಿ ಆಯ್ಕೆಯಾಗಿದ್ದು ನಿಜಕ್ಕೂ ಆಶ್ಚರ್ಯ. ನಾನು ಆಗ ಓದುತ್ತಿದ್ದೆ. ನ್ಯೂಯಾರ್ಕ್‌ನಲ್ಲಿದೆ. ನನ್ನ ಫೋಟೊ ನೋಡಿದ ಉಪೇಂದ್ರ ಅವರು
ನಾಯಕಿಯಾಗಿ ಆಯ್ಕೆ ಮಾಡಿದರು. ನಿಜವಾಗಲೂ ಉಪೇಂದ್ರ ಅವರು ಬರೀ ಕರ್ನಾಟಕ ಅಷ್ಟೇ ಅಲ್ಲ. ಇಡೀ ದೇಶ ಕಂಡ ಅತ್ಯಂತ ಪ್ರತಿಭಾವಂತ ನಿರ್ದೇಶಕ. ಅವರಿಂದ ಮೊದಲ ಚಿತ್ರದಲ್ಲೇ ನಾನು ಸಾಕಷ್ಟು ಕಲಿತಿದ್ದೇನೆ. ಮೊದಲ ಚಿತ್ರದ ಚಿತ್ರೀಕರಣದ ಅನುಭವ ಈಗಲೂ ಕಣ್ಣ ಮುಂದೆ ಇದೆ. ನಾನು ಅ ಚಿತ್ರದ ನಂತರ ಕನ್ನಡ ಸೇರಿದಂತೆ ದೇಶದ ವಿವಿಧ ಭಾಷೆಗಳ ಜನಪ್ರಿಯ ಚಿತ್ರಗಳಲ್ಲಿ ನಟಿಸಿದ್ದೇನೆ. ಆದರೆ ನನ್ನನ್ನು ಎಲ್ಲರೂ ಗುರುತಿಸುವುದು “ಎ’ ಚಿತ್ರದ ನಾಯಕಿ ಅಂತ. ಅಷ್ಟು ಹೆಸರು ತಂದುಕೊಟ್ಟಿದೆ ನನಗೆ ಈ ಚಿತ್ರ. ಈ ಸಂದರ್ಭದಲ್ಲಿ ನಿರ್ದೇಶಕರಿಗೆ, ನಿರ್ಮಾಪಕರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು.
ಮತ್ತೂಂದು ಮುಖ್ಯವಾದ ವಿಷಯವೆಂದರೆ ಈ ಜನಪ್ರಿಯ ಚಿತ್ರವನ್ನು ಇನ್ನಷ್ಟು ಮುಂದುವರೆಸುವುದು ನನ್ನ ಹಂಬಲ. ಹಾಗಾಗಿ “ಎ’ ಚಿತ್ರದ ಮುಂದುವರೆದ ಭಾಗ ಮಾಡುವುದಕ್ಕೆ ತೀರ್ಮಾನ ಮಾಡಿದ್ದೇನೆ. ಕಥೆ ಮತ್ತು ಚಿತ್ರಕಥೆಯನ್ನು ನಾನೇ ಬರದಿದ್ದೇನೆ. ನಿರ್ಮಾಪಕ ಮಂಜುನಾಥ್, ಸಂಗೀತ ನಿರ್ದೇಶಕ ಗುರುಕಿರಣ್ ಮುಂತಾದವರು ಜೊತೆಗಿದ್ದಾರೆ. ಇನ್ನೊಂದು ವಿಷಯ ಬಾಕಿ ಇದೆ. ನಾವೆಲ್ಲರೂ ಹೋಗಿ ಉಪೇಂದ್ರ ಅವರ ಬಳಿ ಈ ಚಿತ್ರವನ್ನು ನೀವೇ ನಿರ್ದೇಶಿಸಬೇಕು ಹಾಗೂ ನಾಯಕರಾಗೂ ನಟಿಸಬೇಕು ಎಂದು ಮನವಿ ಮಾಡುತ್ತೇವೆ. ಸದ್ಯದಲ್ಲೇ ಅವರನ್ನು ಭೇಟಿ ಮಾಡುತ್ತೇವೆ. ಅವರು ಒಪ್ಪುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ, ಈ ಸಿನಿಮಾ ಮಾಡಬೇಕೆಂದು ತೀರ್ಮಾನ ಮಾಡಿದ್ದೇವೆ. ಸದ್ಯದಲ್ಲೇ ಚಿತ್ರ ಪ್ರಾರಂಭವಾಗಲಿದೆ. ಆ ಚಿತ್ರದಲ್ಲಿದ್ದ ಬಹುತೇಕ ಚಿತ್ರತಂಡದ ಸದಸ್ಯರು ಈ ಚಿತ್ರದಲ್ಲೂ ಇರುತ್ತಾರೆ’ ಎಂದರು ಚಾಂದಿನಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
TV Actor; 35 ನೇ ವಯಸ್ಸಿನಲ್ಲೆ ಜನಪ್ರಿಯ ಕಿರುತೆರೆ ನಟ ನಿತಿನ್ ಚೌಹಾಣ್ ನಿಧ*ನ
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್‌ಬುಕ್ ಬಳಸುವಂತಿಲ್ಲ!
Deve Gowda; ನನಗೀಗ ವಯಸ್ಸು 92.. ಮೊಮ್ಮಗ ಗೆದ್ದ ನಂತರ ಮನೆಯಲ್ಲಿ ಮಲಗುವುದಿಲ್ಲ..
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.