Ibbani Tabbida Ileyali 50 ಸ್ಕ್ರೀನ್‌ನಿಂದ 200 ಸ್ಕ್ರೀನ್‌ವರೆಗೆ…
Team Udayavani, Sep 29, 2024, 11:49 AM IST
ರಕ್ಷಿತ್ ಶೆಟ್ಟಿ ನಿರ್ಮಾಣದ “ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರ (Ibbani Tabbida Ileyali) ಸೆ.5ರಂದು ತೆರೆಕಂಡಿತ್ತು. ಚಂದ್ರಜಿತ್ ಬೆಳ್ಳಿಯಪ್ಪ ನಿರ್ದೇಶನದ ಹಾಗೂ ವಿಹಾನ್, ಅಂಕಿತಾ ಅಮರ್, ಮಯೂರಿ ನಟರಾಜ್ ಅಭಿನಯದ ಪ್ರೇಮಕಾವ್ಯಕ್ಕೆ ಮೆಚ್ಚುಗೆ ಸಿಗುವ ಮೂಲಕ ಚಿತ್ರತಂಡ ಖುಷಿಯಾಗಿದೆ.
ಬಿಡುಗಡೆಯ ಸಮಯದಲ್ಲಿ ಕಡಿಮೆ ಸ್ಕ್ರೀನ್ ಗಳಲ್ಲಿ ಈ ಚಿತ್ರ ತೆರೆ ಕಂಡಿತ್ತು. ಆನಂತರ ಜನರೇ ಈ ಚಿತ್ರವನ್ನು ಮೆಚ್ಚುವ ಮೂಲಕ ಹೆಚ್ಚು ಪ್ರಚಾರ ಮಾಡಲು ಆರಂಭಿಸಿದರು. ಕುಟುಂಬ ಸಮೇತ ಚಿತ್ರಮಂದಿರಗಳಿಗೆ ಬರಲು ಆರಂಭಿಸಿದರು. ಜನರು ಚಿತ್ರಕ್ಕೆ ತೋರುತ್ತಿರುವ ಪ್ರೀತಿಗೆ ಚಿತ್ರತಂಡ ಖುಷಿಯಾಗಿದೆ. ಮೊದಲ ವಾರ ಐವತ್ತರ ಆಸುಪಾಸಿನ ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರ ಮೂರನೇ ವಾರದಲ್ಲಿ ಕರ್ನಾಟಕದಾದ್ಯಂತ ಇನ್ನೂರು ಸ್ಕ್ರೀನ್ ಗಳಲ್ಲಿ ಪ್ರದರ್ಶನವಾಗುತ್ತಿದೆ.
ಸಿನಿಮಾ ಬಗ್ಗೆ ಹೇಳಬೇಕಾದರೆ ಇಬ್ಬನಿ ತಬ್ಬಿದ ಇಳೆಯಲಿ ಒಂದು ಪರಿಶುದ್ಧ ಪ್ರೇಮಕಥೆ. ಈ ಕಥೆಗೆ ಅದೆಷ್ಟು ಭಾವನೆಗಳನ್ನು ತುಂಬಿ ಹೇಳಬಹುದಿತ್ತೋ, ಆ ಎಲ್ಲಾ ಸಾಧ್ಯತೆಗಳನ್ನು ನಿರ್ದೇಶಕರು ಮಾಡಿದ್ದಾರೆ. ಇಲ್ಲಿ ಕಾಲೇಜು ಕ್ಯಾಂಪಸ್ ಇದೆ, ಬೆಂಗಾಲಿ ಹುಡುಗಿಯ ಕನ್ನಡ ಪ್ರೀತಿ ಇದೆ, ಕ್ರಿಕೆಟಿಗನಾಗಬೇಕೆಂಬ ಕನಸೊಂದು ಕೈ ಜಾರುವ ಸನ್ನಿವೇಶವಿದೆ, ಹೆಣ್ಣೊಬ್ಬಳ ಹಸೆಮಣೆ ಕನಸೊಂದು ದೊಪ್ಪನೇ ಕುಸಿದು ಬೀಳುವ ಸಂಕಟವಿದೆ, ಜೊತೆಗೆ ಅವೆಲ್ಲವನ್ನು ಮೀರಿ ನಗೆ ಬೀರುವ ಮಾನವೀಯ ಗುಣವಿದೆ.. ಇವೆಲ್ಲದರ ಒಟ್ಟು ಸಮ್ಮಿಲನವೇ “ಇಬ್ಬನಿ ತಬ್ಬಿದ ಇಳೆಯಲಿ’.
ಚಿತ್ರದ ಶೀರ್ಷಿಕೆಯಂತೆ ಇಡೀ ಸಿನಿಮಾ ಸುಂದರವಾಗಿದೆ. ಸಿನಿಮಾವೆಂದರೆ ಕಮರ್ಷಿಯಲ್, ಎಲ್ಲವನ್ನು ಬೇಗನೇ ಹೇಳಬೇಕು ಎಂಬ ಯಾವ ಮುಲಾಜಿಗೂ ಬೀಳದೇ ಇಡೀ ಸಿನಿಮಾವನ್ನು ಒಂದು ಕಾಡುವ ಕಾವ್ಯದಂತೆ ಕಟ್ಟಿಕೊಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood Rewind 2024; ಹಳಬರಿಗೆ ಜೈಕಾರ ಹೊಸಬರಿಗೆ ಉರಿ ಖಾರ; ಚಂದನವನದ ಚೆಂದದ ಲೆಕ್ಕ
Max Movie: ಸಖತ್ ರೆಸ್ಪಾನ್ಸ್ ಪಡೆದ ಕಿಚ್ಚನ ʼಮ್ಯಾಕ್ಸ್ʼ ಮೊದಲ ದಿನ ಗಳಿಸಿದ್ದೆಷ್ಟು?
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Prashanth Neel: ಸಲಾರ್ಗೆ ನಾನು ಇನ್ನಷ್ಟು ಶ್ರಮ ಹಾಕಬೇಕಿತ್ತು; ಪ್ರಶಾಂತ್ ನೀಲ್
UI Movie: ಉಪ್ಪಿ ಯುಐ ಮೆಚ್ಚಿದ ಯಶ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ
Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು
Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ
Kasaragod Crime News: ಅವಳಿ ಪಾಸ್ಪೋರ್ಟ್; ಕೇಸು ದಾಖಲು
Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.