ಮಾತಾಡುವ ಹಕ್ಕು ಸಂವಿಧಾನ ನೀಡಿದೆ ಅಂತ ತಿಂದಿದ್ದು ಕಕ್ಕಿದರೆ?
Team Udayavani, Oct 3, 2017, 3:26 PM IST
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕುರಿತು ನಟ ಪ್ರಕಾಶ್ ರೈ ನೀಡಿರುವ ಹೇಳಿಕೆಗಳಿಗೆ ವ್ಯಾಪಕವಾದ ಟೀಕೆ ವ್ಯಕ್ತವಾಗಿದೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಾಶ್ ರೈ ಅವರ ಪರ-ವಿರೋಧದ ಕುರಿತು ಸಾಕಷ್ಟು ಚರ್ಚೆಯಾಗುತ್ತಿದೆ.
ಪ್ರಕಾಶ್ ರೈ ಹೇಳಿದ್ದು ಸರಿ ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು ಅಂತಹ ಹೇಳಿಕೆಗಳು ಸರಿಯಲ್ಲ ಎಂದಿದ್ದಾರೆ. ಈಗ ನಟ-ಮಾಜಿ ಶಾಸಕ ಜಗ್ಗೇಶ್ ಸಹ ಪ್ರಕಾಶ್ ರೈ ಹೇಳಿಕೆಯನ್ನು ಖಂಡಿಸಿದ್ದಾರೆ. ಯಾರ ಹೆಸರನ್ನೂ ಪ್ರಸ್ಥಾಪಿಸದೆ ಬಹಳ ಸೂಕ್ಷವಾಗಿ ಟ್ವಿಟರ್‌ನಲ್ಲಿ ತಮ್ಮ ಅನಿಸಿಕೆಗಳನ್ನು ಹರಿಬಿಟ್ಟಿದ್ದಾರೆ.
ಜಗ್ಗೇಶ್ ಅವರ ಮಾತುಗಳು ಹೀಗಿವೆ. “ಮೋದಿ ಸಾಧನೆಗೂ, ಇವರ ಸಾಧನೆಗೂ ಎತ್ತಣ ಸಂಬಂಧ? ಮಾತಾಡುವ ಹಕ್ಕು ಸಂವಿಧಾನ ನೀಡಿದೆ ಅಂತ ತಿಂದಿದ್ದು ಕಕ್ಕಿದರೆ ತಿನ್ನಿಸದವಗೂ ಅವಮಾನ, ತಿಂದು ಕಕ್ಕಿದವರಿಗೂ ಅಪಮಾನ. ಮಾತು ಹಿತವಿರಲಿ’ ಎಂದು ಅವರು ಬರೆದಿದ್ದಾರೆ.
ಇನ್ನೊಂದು ಟ್ವೀಟ್‌ನಲ್ಲಿ, “ನಟನೆಗೂ ರಾಜಕೀಯಕ್ಕೂ ಅಜಗಜಾಂತರ. ರಾಜಕೀಯ ಚಪ್ಪಾಳೆಗೂ ಸಿನಿಮಾ ಚಪ್ಪಾಳೆಗೂ ವ್ಯತ್ಯಾಸವಿದೆ. ಇದರ ಅರಿವಿಗೆ ಅಖಾಡಕ್ಕೆ ಇಳಿದು ತಿಳಿದು ಮಾತಾಡಬೇಕು. ಇಲ್ಲದಿದ್ದರೆ ಮೈಕಿನ ತೆವಲು’ ಎಂದು ಜಗ್ಗೇಶ್ ಸೂಕ್ಷ್ಮವಾಗಿ ಬರೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Viral: ಇದು ಇರುವೆಗಳ ಎಂಜಿನಿಯರಿಂಗ್ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ
Indian Cricket: ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ
Nature: ಶ್ರೀಮಂತನಾದರೂ, ಬಡವನಾದರೂ ಪ್ರಕೃತಿಗೆ ಅವಲಂಬಿಯೇ ಅಲ್ಲವೇ?
Sandalwood: ‘ಕೋರ’ ಚಿತ್ರದ ಟ್ರೇಲರ್ ಬಂತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.