ಹೊಸದು ಕೊಟ್ಟರೆ ಜನ ತಗೋತಾರೆ ವಿನಯಾ ಪ್ರಸಾದ್‌ “ಡೈರೆಕ್ಟ್’ ಟಾಕ್‌


Team Udayavani, Sep 18, 2017, 3:13 PM IST

18-ZZ-6.jpg

ಕಳೆದ 26 ವರ್ಷಗಳಿಂದ ಕನ್ನಡ ಸೇರಿದಂತೆ ವಿವಿಧ ಭಾಷೆಯ ಚಿತ್ರರಂಗಗಳಲ್ಲಿ ವಿಭಿನ್ನ ಪಾತ್ರಗಳ ಮೂಲಕ ಗುರುತಿಸಿಕೊಂಡಿರುವ ನಟಿ ವಿನಯಾ ಪ್ರಸಾದ್‌ ಈಗ ಚಿತ್ರರಂಗದ ಮತ್ತೂಂದು ಮಗ್ಗುಲಿಗೆ ತೆರೆದುಕೊಂಡಿದ್ದಾರೆ. ಇಲ್ಲಿವರೆಗೆ ನಟಿಯಾಗಿ ನೋಡಿದ್ದ ಪ್ರೇಕ್ಷಕರಿಗೆ ಈಗ ಅವರನ್ನು ನಿರ್ದೇಶಕಿಯಾಗಿಯೂ ನೋಡುವ ಅವಕಾಶ. “ಲಕ್ಷ್ಮೀ ನಾರಾಯಣರ ಪ್ರಪಂಚವೇ ಬೇರೆ’ ಎಂಬ ಚಿತ್ರದ ಮೂಲಕ ನಿರ್ದೇಶಕಿ-ನಿರ್ಮಾಪಕಿಯಾಗುತ್ತಿದ್ದಾರೆ ವಿನಯಾ ಪ್ರಸಾದ್‌. ಈ ಜರ್ನಿಯ ತಯಾರಿಯ ಬಗ್ಗೆ ಅವರಿಲ್ಲಿ ಮಾತನಾಡಿದ್ದಾರೆ…

ಅದು “ಮಂಗಳ ಸೂತ್ರ’ ಚಿತ್ರದ ಚಿತ್ರೀಕರಣ. ವಿನಯಾ ಪ್ರಸಾದ್‌, ವಿಷ್ಣುವರ್ಧನ್‌ ಸೇರಿದಂತೆ ಒಂದಷ್ಟು ಕಲಾವಿದರು ಸೆಟ್‌ನಲ್ಲಿದ್ದರು. ಯಾವುದೋ ಒಂದು ದೃಶ್ಯವನ್ನು ಬೇರೆ ರೀತಿ ಮಾಡಿದರೆ ಚೆನ್ನಾಗಿರುತ್ತೋ ಏನೋ ಎಂದು ವಿನಯಾ ಪ್ರಸಾದ್‌ ಹೇಳುತ್ತಾರೆ. ವಿನಯಾ ಪ್ರಸಾದ್‌ ಅವರಲ್ಲಿದ್ದ ಕಲ್ಪನೆ, ಡೈರೆಕ್ಷನ್‌ ಸೆನ್ಸ್‌ ನೋಡಿ ಖುಷಿಯಾದ ವಿಷ್ಣುವರ್ಧನ್‌, “ನೀವ್ಯಾಕೆ ನಿರ್ದೇಶನ ಮಾಡಬಾರದು’ ಎಂದು ಕೇಳಿದ್ದರಂತೆ. ಅಂದು ವಿಷ್ಣುವರ್ಧನ್‌ ಅವರು ಹೇಳಿದಂತೆ ಈಗ ವಿನಯಾ ಪ್ರಸಾದ್‌ ನಿರ್ದೇಶಕಿಯಾಗಿದ್ದಾರೆ. “ಲಕ್ಷ್ಮೀ ನಾರಾಯಣರ ಪ್ರಪಂಚವೇ ಬೇರೆ’ ಎಂಬ ಸಿನಿಮಾ ಮಾಡಲು ಅಣಿಯಾಗಿದ್ದಾರೆ. ವಿನಯಾ ಪ್ರಸಾದ್‌ ಅವರಿಗೆ ಈ ಸಿನಿಮಾ ಮೂಲಕ ತಮ್ಮ ನಿರ್ದೇಶನದ ಕನಸು ಈಡೇರುತ್ತಿರುವ ಖುಷಿಯೂ ಇದೆ. 

“ನಿರ್ದೇಶನ ಅನ್ನೋದು ನನ್ನ ಕನಸು. ಒಂದೊಳ್ಳೆಯ ಸಿನಿಮಾ ಮಾಡಬೇಕೆಂಬ ಕನಸು ಬಹಳ ಕಾಲದಿಂದಲೂ ಇತ್ತು. ಸುಮಾರು 18 ವರ್ಷಗಳಿಂದ ಸೀರಿಯಸ್ಸಾಗಿ ನಿರ್ದೇಶನದ ಬಗ್ಗೆ ಗಮನ ಕೊಡುತ್ತಾ, ನಾನು ಮಾಡುತ್ತಿರುವ ನಿರ್ದೇಶಕರ ಕೆಲಸಗಳನ್ನು ಗಮನಿಸುತ್ತಿದ್ದೆ’ ಅವೆಲ್ಲವೂ ಈ ಸಿನಿಮಾದಲ್ಲಿ ನನ್ನ ಸಹಾಯಕ್ಕೆ ಬರಲಿದೆ ಎನ್ನುವುದು ವಿನಯಾ ಪ್ರಸಾದ್‌ ಮಾತು. ಇನ್ನು, ವಿಷ್ಣುವರ್ಧನ್‌ ಅವರು ಹೇಳಿದ ಸಮಯದಲ್ಲೇ ವಿನಯಾ ಪ್ರಸಾದ್‌ ಅವರು ಕತೆ ಮಾಡಿಟ್ಟುಕೊಂಡಿದ್ದರಂತೆ. ಆದರೆ, ಆಗಿನ ಅವರ ಮಾನಸಿಕ ಸ್ಥಿತಿ ಸಿನಿಮಾ ನಿರ್ದೇಶನ ಮಾಡುವಷ್ಟು ತಯಾರಾಗಿರದ ಕಾರಣ ಈಗ ನಿರ್ದೇಶನಕ್ಕೆ ಬಂದಿದ್ದಾರೆ.  ವಿನಯಾ ಪ್ರಸಾದ್‌ ಚಿತ್ರರಂಗಕ್ಕೆ ಬಂದು 26 ವರ್ಷ ಆಗಿದೆ. ಈ 26 ವರ್ಷಗಳಲ್ಲಿ ಕನ್ನಡ, ಮಲಯಾಳಂ, ತಮಿಳು, ತೆಲುಗು ಸೇರಿದಂತೆ ನಾನಾ ಭಾಷೆಗಳಲ್ಲಿ 250ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಈ ಎಲ್ಲಾ ಅನುಭವ ಅವರಿಗೆ ನಿರ್ದೇಶನ ಹಾಗೂ ನಿರ್ಮಾಣದ ವೇಳೆ ಸಹಾಯಕ್ಕೆ ಬರುವ ವಿಶ್ವಾಸವಿದೆ.

ನಿರ್ಮಾಣಕ್ಕೂ ಸೈ
“ಲಕ್ಷ್ಮೀ ನಾರಾಯಣರ ಪ್ರಪಂಚನೇ ಬೇರೆ’ ಸಿನಿಮಾವನ್ನು ವಿನಯಾ ಪ್ರಸಾದ್‌ ನಿರ್ದೇಶನ ಮಾಡುವ ಜೊತೆಗೆ ನಿರ್ಮಾಣ ಕೂಡಾ ಮಾಡುತ್ತಿದ್ದಾರೆ. ಅದಕ್ಕೆ ಕಾರಣ ಬಹುತೇಕ ನಿರ್ದೇಶಕರು ಅನುಸರಿಸುವ ಸಕ್ಸಸ್‌ ಫಾರ್ಮುಲಾ. “ನಮ್ಮ ಬಹುತೇಕ ನಿರ್ಮಾಪಕರು ಸಕ್ಸಸ್‌ ಫಾರ್ಮುಲಾವನ್ನು ಅನುಸರಿಸುತ್ತಾರೆ. ಯಾವುದಾದರೂ ಒಂದು ಸಿನಿಮಾ ಗೆದ್ದರೆ ಆ ಮಾದರಿಯ ಸಿನಿಮಾವನ್ನೇ ಮಾಡಿಕೊಡಲು ಹೇಳುತ್ತಾರೆ. ಯಾರು ಕೂಡಾ ಒಂದು ಯಶಸ್ವಿ ಚಿತ್ರಮಾಡಿಕೊಡಿ ಎಂದು ಹೇಳುವುದಿಲ್ಲ. ಬದಲಾಗಿ ಯಾವುದಾದರೂ ಯಶಸ್ವಿ ಚಿತ್ರವನ್ನು ಉದಾಹರಿಸಿಯೇ ಸಿನಿಮಾ ಮಾಡಿಕೊಡುವಂತೆ ಹೇಳುತ್ತಾರೆ. ಹೀಗಿರುವಾಗ ನಾವೇ ಒಂದು ಒಳ್ಳೆಯ ಕಥೆ ಮಾಡಿಕೊಂಡು, ನಿರ್ಮಾಣವನ್ನೂ ಯಾಕೆ ಮಾಡಬಾರದು ಎನಿಸಿತು’ ಎಂದು ತಾವು ನಿರ್ಮಾಣಕ್ಕಿಳಿದ ಬಗ್ಗೆ ಹೇಳುತ್ತಾರೆ ವಿನಯಾ ಪ್ರಸಾದ್‌. ಇನ್ನು, ವಿನಯಾ ಪ್ರಸಾದ್‌ ತಮ್ಮ ಹೋಂಬ್ಯಾನರ್‌ನಲ್ಲಿ ಈ ಸಿನಿಮಾ ನಿರ್ಮಿಸಲು ಪ್ರಮುಖ ಕಾರಣ ಅವರ ಪತಿ ಜ್ಯೋತಿಪ್ರಕಾಶ್‌ ಅತ್ರೆ. “ಕಥೆ ರೆಡಿಮಾಡಿಟ್ಟುಕೊಂಡು ಸಿನಿಮಾದ ನಿರ್ಮಾಣದ ಕುರಿತು ಆಲೋಚಿಸುತ್ತಿದ್ದಾಗ ಜ್ಯೋತಿಪ್ರಕಾಶ್‌ ಅತ್ರೆಯವರು “ನೀನು ನಿರ್ಮಾಣ ಮಾಡಲು ಇದು ಸಕಾಲ’ ಎಂದರು. ಅದು ನನಗೂ ಸರಿ ಎನಿಸಿತು. ನಮಗೆ ನಿರ್ಮಾಣದ ಬಗ್ಗೆ ಐಡಿಯಾ ಇದೆ. ಎಲ್ಲಿ ಅನಾವಶ್ಯಕ ಖರ್ಚಾಗುತ್ತದೆ, ಅದನ್ನು ಹೇಗೆ ತಡಗಟ್ಟಬಹುದೆಂಬ ಬಗ್ಗೆ ಇಷ್ಟು ವರ್ಷದ ಅನುಭವ ಕಲಿಸಿದೆ. ಆ ಎಲ್ಲಾ ಅನುಭವಗಳನ್ನು ಈ ಸಿನಿಮಾದಲ್ಲಿ ಭಟ್ಟಿ ಇಳಿಸುತ್ತಿದ್ದೇವೆ. ಇದು ಪಕ್ಕಾ ಎಡಿಟೆಡ್‌ ಸ್ಕ್ರಿಪ್ಟ್. ಒಂದು ದೃಶ್ಯ ಎಷ್ಟು ನಿಮಿಷ ಬರಬೇಕು ಎಂಬುದಕ್ಕೆ ತಕ್ಕಂತೆ ಸ್ಕ್ರಿಪ್ಟ್ ಅನ್ನು ಸಿದ್ಧಪಡಿಸಿರುವುದರಿಂದ ವೆಸ್ಟೇಜ್‌ ಕೂಡಾ ಕಡಿಮೆಯಾಗುತ್ತದೆ’ ಎಂದು ತಾವು ತಯಾರಾದ ಬಗ್ಗೆ ಹೇಳುತ್ತಾರೆ ವಿನಯಾ ಪ್ರಸಾದ್‌. 

ಕಥೆಯೇ ಪ್ರಧಾನ
ವಿನಯಾ ಪ್ರಸಾದ್‌ ಅವರಿಗೆ ಸಿನಿಮಾ ನಿರ್ದೇಶನ, ನಿರ್ಮಾಣ ಮಾಡಲು ಸ್ಫೂರ್ತಿಯಾದ ಮತ್ತೂಂದು ಅಂಶವೆಂದರೆ ಪ್ರೇಕ್ಷಕ ಹೊಸ ಬಗೆಯ ಸಿನಿಮಾಗಳನ್ನು ಸ್ವೀಕರಿಸುತ್ತಿರುವುದು. ಯಾವುದೇ ಸ್ಟಾರ್‌ಗಳಿಲ್ಲದ, ಕಥೆಯೇ ಪ್ರಮುಖವಾದ ಸಿನಿಮಾಗಳು ದೊಡ್ಡ ಹಿಟ್‌ ಆಗಿರುವುದನ್ನು ನೋಡಿದ ವಿನಯಾ ಅವರಿಗೆ ನನ್ನ ಸಿನಿಮಾವೂ ಅದೇ ರೀತಿ ಯಾಕಾಗಬಾರದು ಎಂಬ ವಿಶ್ವಾಸ ಬಂದಿದೆ. “ಇತ್ತೀಚೆಗೆ ಬಂದ ಒಂದಷ್ಟು ಕನ್ನಡ ಚಿತ್ರಗಳು ಗೆದ್ದಿದ್ದೇ ನನಗೆ ಸ್ಫೂರ್ತಿ. ಅದೇ ಧೈರ್ಯದೊಂದಿಗೆ ನಾನು ಕೂಡಾ ಸಿನಿಮಾ ಮಾಡುತ್ತಿದ್ದೇನೆ. ನಮ್ಮ ಸಿನಿಮಾದಲ್ಲೂ ಒಂದು ಒಳ್ಳೆಯ ಕಥೆ ಇದೆ. ಕೆಲವರು ಸಿನಿಮಾನೇ ಬೇರೆ ಜೀವನವೇ ಬೇರೆ ಎನ್ನುತ್ತಾರೆ. ಆದರೆ ನಾನು ಸಿನಿಮಾ ಹಾಗೂ ಜೀವನವನ್ನು ಜೊತೆ ಜೊತೆಯಾಗಿ ನೋಡುತ್ತೇನೆ. ನಮ್ಮ ಜೀವನದಲ್ಲಿ ಏನು ನಡೆಯುತ್ತದೋ ಆ ವಿಷಯಗಳನ್ನು ಭಿನ್ನವಾಗಿ ಕಟ್ಟಿಕೊಡಬೇಕು. ಈಗ ಪ್ರೇಕ್ಷಕ ಕೂಡಾ ನೈಜತೆಗೆ ಹೆಚ್ಚು ಒತ್ತುಕೊಡುತ್ತಿದ್ದಾನೆ. “ಲಕ್ಷ್ಮೀ ನಾರಾಯಣರ ಪ್ರಪಂಚವೇ ಬೇರೆ’ ಚಿತ್ರದಲ್ಲಿ ಅಂತಹ ಒಂದು ಪ್ರಯತ್ನ ಮಾಡಿದ್ದೇನೆ. ಇಲ್ಲಿ ತಿಳಿಯಾದ ಕಾಮಿಡಿ ಇದೆ. ನಮ್ಮ, ನಿಮ್ಮ ಜೀವನದಲ್ಲಿ ಏನು ನಡೆಯುತ್ತದೋ ಆ ಅಂಶಗಳನ್ನಿಟ್ಟುಕೊಂಡೇ ಕಥೆ ಮಾಡಲಾಗಿದೆ’ ಎಂದು ಸಿನಿಮಾ ಬಗ್ಗೆ ಹೇಳುತ್ತಾರೆ ವಿನಯಾ. 

ಫ್ಯಾಮಿಲಿ ಬೆಂಬಲ
ವಿನಯಾ ಪ್ರಸಾದ್‌ ತುಂಬಾ ಖುಷಿಯಾಗಿರಲು ಕಾರಣ ಮತ್ತೂಂದು ಕಾರಣ ಅವರ ಕುಟುಂಬದ ಬೆಂಬಲ. ಈ ಸಿನಿಮಾಕ್ಕೆ ಅವರ ಪತಿ ಜ್ಯೋತಿ ಪ್ರಕಾಶ್‌ ಅತ್ರೆ ಕಥೆ, ಚಿತ್ರಕಥೆ ಒದಗಿಸಿದರೆ ವಿನಯಾ ಪ್ರಸಾದ್‌ ಮಗಳು ಪ್ರಥಮಾ ಪ್ರಸಾದ್‌ ಚಿತ್ರದಲ್ಲೊಂದು ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಜೊತೆಗೆ ವಿನಯಾ ಅವರ ಸಹೋದರನ ಬೆಂಬಲ ಕೂಡಾ ಈ ಸಿನಿಮಾಕ್ಕಿದೆ. ಈ ಎಲ್ಲಾ ಕಾರಣದಿಂದಾಗಿ ವಿನಯಾ ಪ್ರಸಾದ್‌ ಖುಷಿಯಾಗಿದ್ದಾರೆ. “ನನಗೆ ಫ್ಯಾಮಿಲಿ ಅಟೇಚ್‌ಮೆಂಟ್‌ ಜಾಸ್ತಿ. ಕುಟುಂಬದಲ್ಲಿ ಏನೇ ಆದರೂ ಮೊದಲು ಓಡಿ ಹೋಗುವವಳು ನಾನು. ಈಗ ಈ ಸಿನಿಮಾ ನಿರ್ಮಾಣದ ವೇಳೆ ನನ್ನ ಕುಟುಂಬವೆಲ್ಲಾ ಬೆಂಬಲಕ್ಕೆ ನಿಂತಿದೆ. ಪತಿ, ಮಗಳು, ತಮ್ಮ ಸೇರಿದಂತೆ ಎಲ್ಲರ ಬೆಂಬಲ ಈ ಸಿನಿಮಾಕ್ಕಿದೆ. ನನ್ನ ನಿರ್ದೇಶನದ ಮೊದಲ ಸಿನಿಮಾದಲ್ಲಿ ನನ್ನ ಮಗಳು ಸಿನಿಮಾಕ್ಕೆ ಎಂಟ್ರಿಕೊಡುತ್ತಿದ್ದಾಳೆಂಬ ಖುಷಿ ಕೂಡಾ ಇದೆ. ಇಲ್ಲಿ ಆಕೆಗೆ ಪ್ರಮುಖ ಪಾತ್ರವಿದೆ. ಚಿತ್ರದ ಒಂದು ಹಾಡಿಗೆ ಜ್ಯೋತಿಪ್ರಕಾಶ್‌ ಅವರೇ ಸಂಗೀತ ನೀಡುತ್ತಿದ್ದಾರೆ. ಅವರಿಗೆ ಮರಾಠಿ, ಹಿಂದಿಯಲ್ಲಿ ಆಲ್ಬಂ ಮಾಡಿ ಅಭ್ಯಾಸವಿದೆ’ ಎಂದು ತಮ್ಮ ಕುಟುಂಬದ ಬೆಂಬಲದ ಬಗ್ಗೆ ಹೇಳುತ್ತಾರೆ ವಿನಯಾ.

ಬರಹ: ರವಿಪ್ರಕಾಶ್‌ ರೈ; ಚಿತ್ರಗಳು: ಮನು ಮತ್ತು ಸಂಗ್ರಹ

ಟಾಪ್ ನ್ಯೂಸ್

Bhopal: ಕೇಂದ್ರ ಕಾರಾಗೃಹದ ಬಳಿ ಚೀನಾ ನಿರ್ಮಿತ ಡ್ರೋನ್ ಪತ್ತೆ… ಹೈ ಅಲರ್ಟ್

Bhopal: ಉಗ್ರರನ್ನು ಇರಿಸಲಾಗಿದ್ದ ಕೇಂದ್ರ ಕಾರಾಗೃಹದ ಬಳಿ ಚೀನಾ ನಿರ್ಮಿತ ಡ್ರೋನ್ ಪತ್ತೆ…

Bigg Boss: ಫಿನಾಲೆಗೂ ಮುನ್ನ ವಾರದ ಮಧ್ಯದಲ್ಲೇ ಎಲಿಮಿನೇಷನ್;‌ ಹೊರಗೆ ಹೋದದ್ದು ಇವರೇ

Bigg Boss: ಫಿನಾಲೆಗೂ ಮುನ್ನ ವಾರದ ಮಧ್ಯದಲ್ಲೇ ಎಲಿಮಿನೇಷನ್;‌ ಹೊರಗೆ ಹೋದದ್ದು ಇವರೇ

Champions Trophy: Rahul, Shami, Jadeja in doubt for place

Champions Trophy: ರಾಹುಲ್‌, ಶಮಿ, ಜಡೇಜಾ ಸ್ಥಾನ ಪಡೆಯುವುದು ಅನುಮಾನ

18ನೇ ‘ಪ್ರವಾಸಿ ಭಾರತೀಯ ದಿವಸ್’​ ಉದ್ಘಾಟಿಸಿದ ಪ್ರಧಾನಿ ಮೋದಿ; ವಿಶೇಷ ರೈಲಿಗೆ ಚಾಲನೆ

Odisha: ‘ಪ್ರವಾಸಿ ಭಾರತೀಯ ದಿವಸ್’​ ಉದ್ಘಾಟಿಸಿದ ಪ್ರಧಾನಿ ಮೋದಿ; ವಿಶೇಷ ರೈಲಿಗೂ ಚಾಲನೆ

AUSvSL: ಲಂಕಾ ಸರಣಿಗೆ ಆಸೀಸ್‌ ತಂಡ ಪ್ರಕಟ: ಸ್ಟೀವ್‌ ಸ್ಮಿತ್‌ ಗೆ ನಾಯಕತ್ವ ಪಟ್ಟ

AUSvSL: ಲಂಕಾ ಸರಣಿಗೆ ಆಸೀಸ್‌ ತಂಡ ಪ್ರಕಟ: ಸ್ಟೀವ್‌ ಸ್ಮಿತ್‌ ಗೆ ನಾಯಕತ್ವ ಪಟ್ಟ

CID Crime Serial ಪ್ರಭಾವ…ಅಣ್ಣನನ್ನು ಯಾಮಾರಿಸಲು ಅಪಹರಣದ ನಾಟಕವಾಡಿ ಸಿಕ್ಕಿಬಿದ್ದ ತಮ್ಮ!

CID Crime Serial ಪ್ರಭಾವ…ಅಣ್ಣನನ್ನು ಯಾಮಾರಿಸಲು ಅಪಹರಣದ ನಾಟಕವಾಡಿ ಸಿಕ್ಕಿಬಿದ್ದ ತಮ್ಮ!

Oscar: ಕ್ಯಾಲಿಫೋರ್ನಿಯಾ ಕಾಳ್ಗಿಚ್ಚು; ಆಸ್ಕರ್‌ ನಾಮಿನೇಷನ್‌ ವೋಟಿಂಗ್ ವಿಸ್ತರಣೆ

Oscar: ಕ್ಯಾಲಿಫೋರ್ನಿಯಾ ಕಾಳ್ಗಿಚ್ಚು; ಆಸ್ಕರ್‌ ನಾಮಿನೇಷನ್‌ ವೋಟಿಂಗ್ ವಿಸ್ತರಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Toxic Movie: ಕೇವಲ 13ಗಂಟೆಯಲ್ಲೇ ʼಪುಷ್ಪ-2ʼ ದಾಖಲೆ ಉಡೀಸ್‌ ಮಾಡಿದ ಯಶ್‌ ʼಟಾಕ್ಸಿಕ್‌ʼ

Toxic Movie: ಕೇವಲ 13ಗಂಟೆಯಲ್ಲೇ ʼಪುಷ್ಪ-2ʼ ದಾಖಲೆ ಉಡೀಸ್‌ ಮಾಡಿದ ಯಶ್‌ ʼಟಾಕ್ಸಿಕ್‌ʼ

Teertharoopa Tandeyavarige: ತೀರ್ಥರೂಪರ ಜೊತೆ ರಚನಾ

Teertharoopa Tandeyavarige: ತೀರ್ಥರೂಪರ ಜೊತೆ ರಚನಾ

15

Sathish Ninasam: ಅಶೋಕನಿಗೆ ನೀನಾಸಂ ಸತೀಶ್‌ ಸಾಥ್‌

Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ

Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ

Sandalwood: ಸ್ಪಾನ್ಸರ್ಸ್ ಇ‌ದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್‌

Sandalwood: ಸ್ಪಾನ್ಸರ್ಸ್ ಇ‌ದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್‌

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Bhopal: ಕೇಂದ್ರ ಕಾರಾಗೃಹದ ಬಳಿ ಚೀನಾ ನಿರ್ಮಿತ ಡ್ರೋನ್ ಪತ್ತೆ… ಹೈ ಅಲರ್ಟ್

Bhopal: ಉಗ್ರರನ್ನು ಇರಿಸಲಾಗಿದ್ದ ಕೇಂದ್ರ ಕಾರಾಗೃಹದ ಬಳಿ ಚೀನಾ ನಿರ್ಮಿತ ಡ್ರೋನ್ ಪತ್ತೆ…

ಬಜಾಜ್ ನಿಂದ ಅಡುಗೆ ಮನೆಗೆ ಬಂತು ಮತ್ತೊಂದು ಸಾಧನ!

Kitchen appliance: ಬಜಾಜ್ ನಿಂದ ಅಡುಗೆ ಮನೆಗೆ ಬಂತು ಮತ್ತೊಂದು ಸಾಧನ!

Bigg Boss: ಫಿನಾಲೆಗೂ ಮುನ್ನ ವಾರದ ಮಧ್ಯದಲ್ಲೇ ಎಲಿಮಿನೇಷನ್;‌ ಹೊರಗೆ ಹೋದದ್ದು ಇವರೇ

Bigg Boss: ಫಿನಾಲೆಗೂ ಮುನ್ನ ವಾರದ ಮಧ್ಯದಲ್ಲೇ ಎಲಿಮಿನೇಷನ್;‌ ಹೊರಗೆ ಹೋದದ್ದು ಇವರೇ

Champions Trophy: Rahul, Shami, Jadeja in doubt for place

Champions Trophy: ರಾಹುಲ್‌, ಶಮಿ, ಜಡೇಜಾ ಸ್ಥಾನ ಪಡೆಯುವುದು ಅನುಮಾನ

3

Kinnigoli: ಕೃತಕ ನೆರೆ ಸಮಸ್ಯೆಗೆ ಪರಿಹಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.