ನಾನು ಕನ್ನಡದ ಹುಡುಗಿ
Team Udayavani, Jul 11, 2018, 11:05 AM IST
ಅದೆಷ್ಟೋ ಮಂದಿ ಕನ್ನಡ ಹುಡುಗಿಯರು ಬೇರೆ ಭಾಷೆಗಳಲ್ಲಿ ನಾಯಕಿಯರಾಗಿದ್ದಾರೆ. ಅದಕ್ಕೆ ಕಾರಣ ಹಲವು. ಅನೇಕರು ಕನ್ನಡದಲ್ಲಿ ಪ್ರಯತ್ನಿಸಿ, ಅವಕಾಶ ಸಿಗದೇ ಪರಭಾಷೆಗೆ ಹೋಗಿರಬಹುದು. ಇನ್ನು ಕೆಲವರು ಪರಭಾಷೆಯಲ್ಲಿ ಮಿಂಚಿ ಕನ್ನಡಕ್ಕೆ ಬರಬೇಕೆಂಬ ಲೆಕ್ಕಾಚಾರ ಹಾಕಿರುತ್ತಾರೆ. ಈಗ ಕನ್ನಡದ ಹುಡುಗಿಯಾಗಿ ಪರಭಾಷೆಯಲ್ಲಿ ಕೆರಿಯರ್ ಆರಂಭಿಸಿದ ನಾಯಕಿಯೊಬ್ಬಳಿಗೆ ಈಗ ಕನ್ನಡದಲ್ಲಿ ಅವಕಾಶ ಸಿಕ್ಕಿದೆ.
ಈ ವಾರ ಆಕೆ ನಟಿಸಿದ ಸಿನಿಮಾ ಬಿಡುಗಡೆಯಾಗುತ್ತಿದೆ. ಅಷ್ಟಕ್ಕೂ ಯಾರು ಆ ನಾಯಕಿ ಎಂದರೆ ಸನಮ್ ಶೆಟ್ಟಿ ಹೆಸರು ಹೇಳಬೇಕಾಗುತ್ತದೆ. ಸನಮ್ ಶೆಟ್ಟಿ ನಾಯಕಿಯಾಗಿ ನಟಿಸಿರುವ ಚೊಚ್ಚಲ ಕನ್ನಡ ಚಿತ್ರ “ಅಥರ್ವ’ ಈ ವಾರ ತೆರೆಕಾಣುತ್ತಿದೆ. ಸಹಜವಾಗಿಯೇ ಸನಮ್ ಖುಷಿಯಾಗಿದ್ದಾರೆ. “ನಾನು ಮೂಲತಃ ಕನ್ನಡದ ಹುಡುಗಿ. ಬೆಂಗಳೂರಿನವಳು. ಆದರೆ, ಬಹಳಷ್ಟು ಮಂದಿ ನಾನು ಪರಭಾಷಾ ಹುಡುಗಿ ಎಂದು ಭಾವಿಸಿದ್ದಾರೆ.
ನಾನು ಕೆರಿಯರ್ ಆರಂಭಿಸಿದ್ದು ಚೆನ್ನೈನಲ್ಲಿ. ಆದರೆ, ಕನ್ನಡದ ಹುಡುಗಿಯಾಗಿ ಕನ್ನಡ ಸಿನಿಮಾದಲ್ಲಿ ನಟಿಸಬೇಕೆಂಬ ಆಸೆ ನನಗಿತ್ತು. ಆದರೆ, ಇಲ್ಲಿ ನನ್ನ ಯಾರನ್ನು ಸಂಪರ್ಕಿಸಬೇಕೆಂಬ ಬಗ್ಗೆ ಗೊತ್ತಿರಲಿಲ್ಲ. ಹೀಗಿರುವಾಗ ಸಿಕ್ಕಿದ್ದು “ಅಥರ್ವ’. ನಿರ್ದೇಶಕ ಅರುಣ್ ಹೇಳಿದ ಕಥೆ ಇಷ್ಟವಾಗಿ ಈ ಸಿನಿಮಾ ಒಪ್ಪಿಕೊಂಡೆ. ಅರ್ಜುನ್ ಸರ್ಜಾ ಅವರ ಸಂಬಂಧಿ ಲಾಂಚ್ ಆಗುತ್ತಿರುವ ಸಿನಿಮಾವಿದೆ. ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ.
ಒಳ್ಳೆಯ ಸಿನಿಮಾ ಮೂಲಕ ಲಾಂಚ್ ಆಗುತ್ತಿರುವ ಖುಷಿ ಇದೆ’ ಎನ್ನುತ್ತಾರೆ ಸನಮ್. ಸನಮ್ “ಅಥರ್ವ’ ಒಪ್ಪಿಕೊಳ್ಳಲು ಕಾರಣ, ಕಥೆ ಹಾಗೂ ನಿರ್ದೇಶಕರು ಮೊದಲು ತೋರಿಸಿದ ಫಸ್ಟ್‌ಲುಕ್ ಟೀಸರ್ ಅಂತೆ. ಅವೆರಡರಿಂದ ಇಂಪ್ರಸ್ ಆಸ ಸನಮ್ ಖುಷಿಯಿಂದಲೇ ಸಿನಿಮಾಕ್ಕೆ ಗ್ರೀನ್‌ಸಿಗ್ನಲ್ ಕೊಟ್ಟರಂತೆ. “ಅಥರ್ವ’ ಚಿತ್ರವನ್ನು ಜನ ಯಾಕೆ ನೋಡಬೇಕು ಎಂಬ ಪ್ರಶ್ನೆಗೂ ಸನಮ್ ಉತ್ತರಿಸುತ್ತಾರೆ.
“ಸಂಪೂರ್ಣ ಹೊಸಬರು ತುಂಬಾ ಶ್ರದ್ಧೆಯಿಂದ ಮಾಡಿರುವ ಸಿನಿಮಾವಿದು. ಯಾವುದೇ ವಿಷಯಕ್ಕೂ ರಾಜಿಯಾಗದೇ ನೀಟಾಗಿ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಇನ್ನು, ತಾಂತ್ರಿಕವಾಗಿ ಸಿನಿಮಾ ಶ್ರೀಮಂತವಾಗಿದೆ. ಜೊತೆಗೆ ಚಿತ್ರದ ಹಾಡುಗಳು ಸೊಗಸಾಗಿವೆ’ ಎಂದು ಸಿನಿಮಾ ಬಗ್ಗೆ ಹೇಳುತ್ತಾರೆ. ಸನಮ್ ಈಗಾಗಲೇ ಕನ್ನಡದಲ್ಲಿ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದು, ನಾಯಕಿ ಹಾಗೂ ವಿಲನ್ ಮಧ್ಯೆ ನಡೆಯುವ ಕಥೆಯಂತೆ.
ಈ ಚಿತ್ರಕ್ಕೆ ಆಯ್ಕೆಯಾಗಲು ಕಾರಣ ವಿಲನ್ ಪಾತ್ರಧಾರಿ ಯಶವಂತ್ ಶೆಟ್ಟಿಯಂತೆ. “ಅಥರ್ವ’ ಚಿತ್ರದಲ್ಲಿ ಯಶವಂತ್ ವಿಲನ್ ಆಗಿ ನಟಿಸಿದ್ದು, ತಮ್ಮ ಹೊಸ ಚಿತ್ರಕ್ಕೂ ಅವರು ಸನಮ್ ಅವರನ್ನು ರೆಫರ್ ಮಾಡಿದರಂತೆ. ಇದರ ಹೊರತಾಗಿ ಸನಮ್ ತಮಿಳಿನಲ್ಲಿ “ಮ್ಯಾಗಿ’ ಎಂಬ ನಾಯಕಿ ಪ್ರಧಾನ ಚಿತ್ರ ಮಾಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sathish Ninasam: ಅಶೋಕನಿಗೆ ನೀನಾಸಂ ಸತೀಶ್ ಸಾಥ್
Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ
Sandalwood: ಸ್ಪಾನ್ಸರ್ಸ್ ಇದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್
ಒಳ್ಳೆಯ ಸ್ಕ್ರಿಪ್ಟ್ ಗಾಗಿ ಎದುರು ನೋಡುತ್ತಿದ್ದೇನೆ – ಕಂಬ್ಯಾಕ್ ಬಗ್ಗೆ ರಮ್ಯಾ ಮಾತು
Toxic Movie: ಫ್ಯಾನ್ಸ್ ನಶೆಯೇರಿಸಿದ ಯಶ್; ಹಾಲಿವುಡ್ ರೇಂಜ್‌ನಲ್ಲಿ ಮಿಂಚಿದ ರಾಕಿಭಾಯ್.!
MUST WATCH
ಹೊಸ ಸೇರ್ಪಡೆ
ನಕ್ಸಲರನ್ನು ಅಮಿತ್ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.