ರಾಜ್‌ಮೌಳಿ ಆರ್‌ಆರ್‌ಆರ್‌ನಲ್ಲಿ ನಟಿಸುತ್ತಿಲ್ಲ…
ಗಾಳಿ ಸುದ್ದಿಗೆ ತೆರೆ ಎಳೆದ ಸುದೀಪ್
Team Udayavani, Jan 20, 2020, 7:03 AM IST
ರಾಜ್‌ಮೌಳಿ ನಿರ್ದೇಶನದ “ಆರ್‌ಆರ್‌ಆರ್’ ಚಿತ್ರದಲ್ಲಿ ಸುದೀಪ್ ನಟಿಸಲಿದ್ದಾರಂತೆ. ಚಿತ್ರದಲ್ಲಿ ಅವರು ಪೊಲೀಸ್ ಅಧಿಕಾರಿಯ ಪಾತ್ರ ಮಾಡಲಿದ್ದಾರಂತೆ… ಹೀಗೊಂದು ಸುದ್ದಿ ಒಂದೆರಡು ದಿನಗಳಿಂದ ಹರಿದಾಡುತ್ತಿತ್ತು. ಅದಕ್ಕೆ ಕಾರಣ ರಾಜ್‌ಮೌಳಿ ಹಾಗೂ ಸುದೀಪ್ ನಡುವಿನ ಸ್ನೇಹ. ರಾಜ್‌ಮೌಳಿ ನಿರ್ದೇಶನದ “ಈಗ’ ಚಿತ್ರದಲ್ಲಿ ಸುದೀಪ್ ಪ್ರಮುಖ ಪಾತ್ರ ಮಾಡಿದ್ದು, ಆ ನಂತರ “ಬಾಹುಬಲಿ- ದಿ ಬಿಗಿನಿಂಗ್’ನಲ್ಲೂ ಸುದೀಪ್ ನಟಿಸಿದ್ದರು.
ಅದೇ ಲೆಕ್ಕಾಚಾರದೊಂದಿಗೆ “ಆರ್‌ಆರ್‌ಆರ್’ ಸಿನಿಮಾದಲ್ಲೂ ಸುದೀಪ್ ನಟಿಸುತ್ತಿದ್ದಾರೆಂಬ ಸುದ್ದಿ ಜೋರಾಗಿ ಕೇಳಿ ಬಂದಿತ್ತು. ಆದರೆ, ಈಗ ಸ್ವತಃ ಸುದೀಪ್ ಆ ಸುದ್ದಿಯನ್ನು ಅಲ್ಲಗಳೆದಿದ್ದಾರೆ. ಈ ಬಗ್ಗೆ ಟ್ವೀಟರ್‌ನಲ್ಲಿ ಬರೆದುಕೊಂಡಿರುವ ಸುದೀಪ್, “ನಾನು ಆರ್‌ಆರ್‌ಆರ್ ಸಿನಿಮಾದಲ್ಲಿ ನಟಿಸುತ್ತಿಲ್ಲ. ಆ ಸಿನಿಮಾದ ಮೇಲೆ ನನಗೆ ಗೌರವವಿದೆ. ಆದರೆ, ಆ ಚಿತ್ರದಲ್ಲಿ ನಾನು ನಟಿಸುತ್ತಿದ್ದೇನೆಂಬುದು ಸುಳ್ಳು. ಆ ಚಿತ್ರಕ್ಕಾಗಿ ಯಾರೂ ನನ್ನನ್ನು ಸಂಪರ್ಕ ಮಾಡಿಲ್ಲ.
ನನ್ನ ಮತ್ತು ರಾಜ್‌ಮೌಳಿ ನಡುವೆ ಈ ಕುರಿತಾಗಿ ಮಾತುಕತೆ ನಡೆದಿದೆ ಎಂಬುದು ಕೂಡಾ ಸತ್ಯಕ್ಕೆ ದೂರವಾದ ಮಾತು’ ಎನ್ನುವ ಮೂಲಕ ಗಾಳಿಸುದ್ದಿಗೆ ತೆರೆಎಳೆದಿದ್ದಾರೆ. ಕೆಲವು ದಿನಗಳ ಹಿಂದೆಯೂ ಸುದೀಪ್ ತಮಿಳು ಚಿತ್ರವೊಂದರಲ್ಲಿ ನಟಿಸಲಿದ್ದಾರೆಂಬ ಸುದ್ದಿ ಹರಿದಾಡಿತ್ತು. ಕಾಲಿವುಡ್ ನಟ ಸಿಲಂಬರಸನ್ ಅಭಿನಯದ “ಮಾನಾಡು’ ಚಿತ್ರದಲ್ಲಿ ಸುದೀಪ್ ಅವರು ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರಂತೆ ಎಂಬ ಸುದ್ದಿ ಜೋರಾಗಿಯೇ ಹರಿದಾಡಿತ್ತು.
With due respect to the film,,,and to all those who r excited to hear this news,,, I wanna being this to everyone’s notice tat this isn’t a fact tats floating.
I haven’t been approached,,nor has there been any discussion. pic.twitter.com/V48y6jYoyu— Kichcha Sudeepa (@KicchaSudeep) January 18, 2020
ಅಷ್ಟೇ ಅಲ್ಲ, ಆ ಚಿತ್ರದ ನಿರ್ದೇಶಕರು ಈಗಾಗಲೇ ಸುದೀಪ್ ಅವರನ್ನು ಭೇಟಿ ಮಾಡಿ, ಕಥೆಯನ್ನು ಹೇಳಿದ್ದು, ಆ ಕಥೆ, ಪಾತ್ರವನ್ನು ಸುದೀಪ್ ಕೂಡ ಒಪ್ಪಿದ್ದಾರಂತೆ ಎಂಬ ಮಾತುಗಳು ಹರಿದಾಡಿದ್ದವು. ಈ ಬಗ್ಗೆಯೂ ಸುದೀಪ್ ತಮ್ಮ ಟ್ವಿಟ್ಟರ್‌ನಲ್ಲಿ “ರಾಂಗ್ ನ್ಯೂಸ್’ ಎನ್ನುವ ಮೂಲಕ ಗಾಸಿಪ್‌ಗೆ ಫುಲ್‌ಸ್ಟಾಪ್ ಇಟ್ಟಿದ್ದರು. ಈಗ “ಆರ್‌ಆರ್‌ಆರ್’ ಸುದ್ದಿಗೂ ಸುದೀಪ್ ತೆರೆ ಎಳೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sullia: ಬಿಎಸ್ಸೆನ್ನೆಲ್ ಟವರ್‌ಗೆ ಸೋಲಾರ್ ಪವರ್!
Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ
Infosys ಪ್ರಶಸ್ತಿ 2024ಕ್ಕೆ ಕರ್ನಾಟಕದವರೂ ಸೇರಿ 6 ಸಾಧಕರ ಆಯ್ಕೆ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.