ವಿಭಿನ್ನ ಪಾತ್ರಗಳ ಖುಷಿಯಲ್ಲಿ… ಪ್ರಿಯ ಮಾತು
Team Udayavani, Jul 25, 2017, 10:30 AM IST
“ಕುರುಕ್ಷೇತ್ರ’ ಚಿತ್ರಕ್ಕೆ ಆಯ್ಕೆಯಾದ ಖುಷಿಯಲ್ಲಿರುವ ಹರಿಪ್ರಿಯಾ ಹೊಸದಾಗಿ ಫೋಟೋಶೂಟ್ ಮಾಡಿಸಿದ್ದಾರೆ. ಸುಮಾರು ಎರಡು ವರ್ಷಗಳ ನಂತರ ಮಾಡಿಸಿದ ಫೋಟೋಶೂಟ್ ಅದು. ತನ್ನನ್ನು ತಾನು ನೋಡಿಕೊಳ್ಳುವ ಸಲುವಾಗಿ ಹರಿಪ್ರಿಯಾ ಈ ಫೋಟೋಶೂಟ್ ಮಾಡಿಸಿದ್ದಂತೆ. ಸದ್ಯ ಹರಿಪ್ರಿಯಾ ಸಿನಿಮಾ ಮೇಲೆ ಸಿನಿಮಾ ಮಾಡುತ್ತಾ ಬಿಝಿಯಾಗಿದ್ದಾರೆ.
ಸದ್ಯ “ಭರ್ಜರಿ’, “ಅಂಜನಿಪುತ್ರ’, “ಸಂಹಾರ’, “ಕಥಾಸಂಗಮ’, “ಕುರುಕ್ಷೇತ್ರ’, “ಕನಕ’ ಚಿತ್ರಗಳಲ್ಲಿ ಹರಿಪ್ರಿಯಾ ಇದ್ದಾರೆ. “ಭರ್ಜರಿ’ಯ ಕೆಲ ದೃಶ್ಯ ಹಾಗೂ ಹಾಡಿನಲ್ಲಿ ಕಾಣಿಸಿಕೊಂಡರೆ, “ಅಂಜನಿಪುತ್ರ’ ಚಿತ್ರದಲ್ಲಿನ ಪುನೀತ್ ಇಂಟ್ರೋಡಕ್ಷನ್ ಸಾಂಗ್‌ನಲ್ಲಿ ಹರಿಪ್ರಿಯಾ ಕಾಣಿಸಿಕೊಂಡಿದ್ದಾರೆ. “ಉಗ್ರಂ’ ಚಿತ್ರದ ಯಶಸ್ಸು ಹರಿಪ್ರಿಯಾ ಕೆರಿಯರ್‌ನ ಹೊಸ ಇನ್ನಿಂಗ್ಸ್‌ಗೆ ಕಾರಣವಾಯಿತು. ಹಾಗಾಗಿಯೇ ಇವತ್ತು ಹರಿಪ್ರಿಯಾ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ.
ಸಿಕ್ಕ ಪಾತ್ರಗಳಿಗೆ ಖುಷಿ ಕಾಣುತ್ತಾ ಹರಿಪ್ರಿಯಾ ಬಿಝಿಯಾಗಿರುವುದಂತೂ ಸುಳ್ಳಲ್ಲ. “ಕುರುಕ್ಷೇತ್ರ’ ಚಿತ್ರದ ಭಾಗವಾಗಿರುವುದಕ್ಕೆ ಹರಿಪ್ರಿಯಾ ಖುಷಿಯಾಗಿದ್ದಾರೆ. “ನಾವು ರಾಮಾಯಣ, ಮಹಾಭಾರತ, ಕುರುಕ್ಷೇತ್ರಗಳ ಕಥೆಗಳನ್ನು ಕೇಳಿದ್ದೇವೆ. ಆದರೆ, ಈಗ ಅದರಲ್ಲೊಂದು ಪಾತ್ರವಾಗುವ ಅವಕಾಶ ಸಿಕ್ಕಿದೆ. ಇಂತಹ ಪಾತ್ರಗಳು ಜನರಿಗೆ ನೆನಪಿನಲ್ಲಿಯುಳಿಯುತ್ತವೆ. ಚಿತ್ರತಂಡ ಪಾತ್ರದ ಬಗ್ಗೆ ಹೆಚ್ಚೇನು ಹೇಳಿಲ್ಲ.
ರಾಣಿಯ ಪಾತ್ರ ಎಂದಷ್ಟೇ ಹೇಳಬಹುದು. ನನ್ನ ಪಾತ್ರ ಬಹುತೇಕ ದರ್ಶನ್ ಅವರ ಜೊತೆ ಜೊತೆಗೆ ಇರುತ್ತದೆ. ಈಗಾಗಲೇ ಅದಕ್ಕೆ ಬೇಕಾದ ಪೂರ್ವತಯಾರಿ ನಡೆಯುತ್ತಿದೆ’ ಎಂದು ಖುಷಿಯಿಂದ ಹೇಳುತ್ತಾರೆ ಹರಿಪ್ರಿಯಾ. ಹರಿಪ್ರಿಯಾ ಇತ್ತೀಚೆಗೆ ಕಾಣಿಸಿಕೊಳ್ಳುತ್ತಿರುವ ಸಿನಿಮಾಗಳಲ್ಲಿ ಮತ್ತೂಬ್ಬ ನಾಯಕಿ ಇದ್ದೇ ಇರುತ್ತಾರೆ. ಸೋಲೋ ಹೀರೋಯಿನ್ ಪಾತ್ರಗಳು ಕಡಿಮೆ. ಆದರೆ, ಹರಿಪ್ರಿಯಾಗೆ ಯಾರ ಜೊತೆಯೂ ನಟಿಸಲು ಭಯವಿಲ್ಲವಂತೆ.
“ನನಗೆ ಇನ್‌ಸೆಕ್ಯುರಿಟಿ ಫೀಲಿಂಗ್ಸ್ ಇಲ್ಲ. ಎಷ್ಟೇ ಜನ ಇದ್ದರೂ ನಾನು ಸ್ಟಾಂಡ್ ಔಟ್ ಆಗುತ್ತೇನೆಂಬ ವಿಶ್ವಾಸವಿದೆ. ಜನ ಈಗ ಒಳ್ಳೆಯ ಕಥೆ ಹಾಗೂ ಪಾತ್ರ ನೋಡುತ್ತಾರೆ. ನನ್ನ ಆಯ್ಕೆ ಕೂಡಾ ಅದೇ. ಈಗ ಎಲ್ಲಾ ಚಿತ್ರರಂಗದಲ್ಲೂ ಒಬ್ಬ ನಾಯಕಿ-ನಾಯಕ ಸಿನಿಮಾಗಳಿಗಿಂತ ಮಲ್ಟಿಸ್ಟಾರರ್ ಸಿನಿಮಾಗಳೇ ಹೆಚ್ಚಾಗುತ್ತಿವೆ’ ಎನ್ನುವ ಮೂಲಕ ಅಭದ್ರತೆಯ ಭಯವಿಲ್ಲವೆನ್ನುತ್ತಾರೆ ಹರಿಪ್ರಿಯಾ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಗದಗ: ಮಾವು ಬಂಪರ್ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Gangolli: ಪಂಚಾಯತ್‌ನೊಳಗೆ ನಮಾಜ್; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.