ಲಾಯರ್ ಭಾಷೆಯ ಲವ್ ಸಾಂಗ್ನಲ್ಲಿ “ಅನಂತು v/s ನುಸ್ರತ್’: Watch
Team Udayavani, Oct 5, 2018, 3:59 PM IST
ವಿನಯ್ ರಾಜಕುಮಾರ್ ಅಭಿನಯದ “ಅನಂತು v/s ನುಸ್ರತ್’ ಚಿತ್ರದ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿ ಸೋಷಿಯಲ್ ಮೀಡಿಯಾದಲ್ಲಿ ಒಂದಷ್ಟು ಸದ್ದು ಮಾಡಿತ್ತು. ಇದೀಗ ಚಿತ್ರದ ಲಾಯರ್ ಭಾಷೆಯ ಲವ್ ಸಾಂಗ್ ಬಿಡುಗಡೆಯಾಗಿದ್ದು, ಹಾಡಿಗೆ ಸಖತ್ ರೆಸ್ಪಾನ್ಸ್ ವ್ಯಕ್ತವಾಗುತ್ತಿದೆ. ಹೌದು! “ಈಗ ತಾನೇ ಜಾರಿಯಾಗಿದೆ’ ಎಂಬ ಲಿರಿಕಲ್ ವಿಡಿಯೋ ಸಾಂಗ್ ರಿಲೀಸ್ ಆಗಿದೆ.
ನವ ಸಂಗೀತ ನಿರ್ದೇಶಕ ಸುನಾದ್ ಗೌತಮ್ ಮ್ಯೂಸಿಕ್ ಕಂಪೊಸ್ ಮಾಡಿರೋ ಈ ಹಾಡಿಗೆ ಸಿದ್ದು ಕೋಡಿಪುರ ಲಾಯರ್ ಭಾಷೆಯನ್ನೇ ಬಳಸಿ ಸಾಹಿತ್ಯ ರಚಿಸಿದ್ದಾರೆ. ಅಲ್ಲದೇ ವಿಜಯ ಪ್ರಕಾಶ್ ಧ್ವನಿಯಲ್ಲಿ ಹಾಡು ಮೂಡಿ ಬಂದಿದ್ದು, ಕೇಳೋಕೆ ಮುದನೀಡುತ್ತದೆ. ಇನ್ನು ಸ್ಯಾಂಡಲ್ವುಡ್ನಲ್ಲಿ ಒಂದು ಸೂಪರ್ ಹಿಟ್ನ ನಿರೀಕ್ಷೆಯಲ್ಲಿರುವ ವಿನಯ್ ಈ ಬಾರಿ ಕರಿ ಕೋಟು ಧರಿಸಿ ವಕೀಲನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
ವಕೀಲ ಅನಂತ ಕೃಷ್ಣ ಎಂಬ ಪಾತ್ರದಲ್ಲಿ ಅಭಿನಯಿಸಿರುವ ವಿನಯ್ಗೆ ಲತಾ ಹೆಗ್ಡೆ ನಾಯಕಿಯಾಗಿದ್ದಾರೆ. ವಿನಯ್ ಇಲ್ಲಿ ಸಾಮಾನ್ಯ ವಕೀಲನಾದರೆ ಲತಾ ಹೆಗ್ಡೆ ಜಡ್ಜ್ ಪಾತ್ರಧಾರಿ ನುಸ್ರತ್ ಫಾತಿಮಾ ಆಗಿ ಕಾಣಿಸಿಕೊಂಡಿದ್ದಾರೆ. ಇದೊಂದು ಹಾಸ್ಯ ಮಿಶ್ರಿತ ನವಿರಾದ ಪ್ರೇಮಕಥೆಯಾಗಿದ್ದು, ಜಡ್ಜ್ಗೆ ಮನಸೋತಿರುವ ವಕೀಲನ ಕಥೆ ಈ ಚಿತ್ರದಲ್ಲಿರಲಿದೆ.
ಈ ಸಿನಿಮಾವನ್ನು ಸುಧೀರ್ ಶಾನುಭೋಗ್ ನಿರ್ದೇಶಿಸಿದ್ದು, ಈಗಾಗಲೇ “ಕೋರ್ಟ್ಗೆ ಬಂದವಳು ಹಾರ್ಟ್ಗೆ ಬರ್ಬಾದು ಅಂತ ಏನಾದರೂ ಕಾನೂನಿದೆಯಾ…’ ಎಂಬ ಡೈಲಾಗ್ ಸಖತ್ತಾಗೆ ವರ್ಕೌಟ್ ಆದಂತಿದೆ. ಮಾಣಿಕ್ಯ ಪ್ರೊಡಕ್ಷನ್ ನಿರ್ಮಿಸಿರುವ ಈ ಚಿತ್ರದಲ್ಲಿ ರವಿಶಂಕರ್, ಗುರು ಪ್ರಸಾದ್, ಅಶೋಕ್ ಸೇರಿದಂತೆ ಬಹುತಾರಗಣವಿದ್ದು, ಚಿತ್ರಕ್ಕೆ ಸುನಾದ್ ಗೌತಮ್ ಸಂಗೀತ ನೀಡಿದ್ದಾರೆ. ತಾರಾಗಣದಲ್ಲಿ ರವಿಶಂಕರ್, ಬಿ ಸುರೇಶ್, ಗುರು ಪ್ರಸಾದ್, ಸುಚೀಂದ್ರ ಪ್ರಸಾದ್ ಸೇರಿದಂತೆ ಮುಂತಾದವರು ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.