ಚಿತ್ರರಂಗದ ಕಾರ್ಮಿಕರ ನೆರವಿಗೆ ಬಂದ ಇನ್ಫೋಸಿಸ್ ಫೌಂಡೇಶನ್
Team Udayavani, Apr 20, 2020, 11:36 AM IST
ಕನ್ನಡ ಚಿತ್ರರಂಗ ಈಗ ಅಕ್ಷರಶಃ ಸಂಕಷ್ಟದಲ್ಲಿ ಸಿಲುಕಿದೆ. ಈಗಾಗಲೇ ಸಮಸ್ಯೆ ಸುಳಿಯಲ್ಲಿ ಸಿಲುಕಿರುವ ಸಾವಿರಾರು ಕಾರ್ಮಿಕರ ನೆರವಿಗೆ ಹಲವು ಸಂಘ-ಸಂಸ್ಥೆಗಳು, ಸ್ಟಾರ್‌ಗಳು, ಸರ್ಕಾರ ನೆರವಿಗೆ ಧಾವಿಸಿರುವುದು ಗೊತ್ತೇ ಇದೆ. ಈಗ ಚಿತ್ರರಂಗದಲ್ಲಿ ಕಷ್ಟ ಅನುಭವಿಸುತ್ತಿರುವ ಕಾರ್ಮಿಕರ ಸಹಾಯಕ್ಕೆ ಇನ್ಫೋಸಿಸ್ ಫೌಂಡೇಶನ್ ಕೂಡ ನೆರವಿಗೆ ಬಂದಿದೆ.
ಹೌದು ಸುಧಾಮೂರ್ತಿ ನೇತೃತ್ವದ ಇನ್ಫೋಸಿಸ್ ಫೌಂಡೇಷನ್ ಮೂಲಕ ಸಿನಿಮಾ ಕಾರ್ಮಿಕರಿಗೆ ಸಹಾಯ ಮಾಡಲಾಗುತ್ತಿದೆ. ಚಿತ್ರರಂಗದ ಒಟ್ಟು 18 ಸಂಘಟನೆಗಳ ಸಹಯೋಗದಲ್ಲಿ ಕಾರ್ಮಿಕರಿಗೆ ಅಗತ್ಯವಾಗಿರುವ ಆಹಾರ ಸಾಮಾಗ್ರಿಗಳನ್ನು ಇನ್ಫೋಸಿಸ್ ಫೌಂಡೇಷನ್ ವಿತರಿಸಲು ಮುಂದಾಗಿದೆ. ಈಗಾಗಲೇ ಬನಶಂಕರಿ ಅಂಚೆ ಕಚೇರಿ ಸಮೀಪ ಇರುವ ಕಚೇರಿಯಲ್ಲಿ ಈ ಕಾರ್ಯಕ್ಕೆ ಚಾಲನೆ ದೊರೆತಿದೆ.
ಗಾಳಿಪಟ 2 ಚಿತ್ರದ ನಿರ್ಮಾಪಕ ರಮೇಶ್ ರೆಡ್ಡಿ ಅವರು, ಇನ್ಫೋಸಿಸ್ ಫೌಂಡೇಷನ್ ವತಿಯಿಂದ ದೇಶ ಹಾಗು ರಾಜ್ಯದಲ್ಲಿ ಸಾಕಷ್ಟು ಒಳ್ಳೆಯ ಕೆಲಸಗಳು ಆಗುತ್ತಿವೆ. ಈ ಸಂಕಷ್ಟದ ಸಂದರ್ಭದಲ್ಲೂ ಕಾರ್ಮಿಕರ ನೆರವಿಗೆ ಸುಧಾಮೂರ್ತಿ ಅವರ ನೇತೃತ್ವದ ಫೌಂಡೇಷನ್ ಕಾಳಜಿ ತೋರಿಸಿರುವುದು ನಿಜಕ್ಕೂ ಸ್ವಾಗತಾರ್ಹ ಎಂದಿದ್ದಾರೆ.
ಅಂದಹಾಗೆ, ಕರ್ನಾಟಕ ಚಿತ್ರರಂಗದ ಪರವಾಗಿ ಸಾ.ರಾ.ಗೋವಿಂದು ಆವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಂಕಷ್ಟದಲ್ಲಿರುವ ಕಾರ್ಮಿರಿಗೆ ಫೌಂಡೇಷನ್ ವತಿಯಿಂದ ಆಹಾರ ಸಾಮಾಗ್ರಿ ಪೂರೈಸುತ್ತಿರುವುದನ್ನು ಶ್ಲಾ ಸಿದ್ದಾರೆ. ಈ ವೇಳೆ ಕಾರ್ಮಿಕರ ಸಂಘದ ಉಪಾಧ್ಯಕ್ಷರಾದ ರವಿಶಂಕರ್ ಇತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.