ಒಂದು ಸಿನಿಮಾಗೆ ಐದು ಸಿನಿಮಾಗಳ ಸ್ಫೂರ್ತಿ
Team Udayavani, Oct 2, 2017, 12:11 PM IST
ಸಾಮಾನ್ಯವಾಗಿ ಒಂದು ಸಿನಿಮಾಕ್ಕೆ ಯಾವುದಾದರೊಂದು ಭಾಷೆಯ ಸಿನಿಮಾ ಸ್ಫೂರ್ತಿಯಾಗುತ್ತದೆ. ಆ ಸಿನಿಮಾದ ಒನ್‌ಲೈನ್ ತೆಗೆದುಕೊಂಡು ಸಿನಿಮಾ ಮಾಡುವವರಿದ್ದಾರೆ. ಆದರೆ, ಒಂದು ಸಿನಿಮಾಕ್ಕೆ ಐದು ಸಿನಿಮಾ ಸ್ಫೂರ್ತಿಯಾಗಿರುವುದನ್ನು, ಆ ಐದು ಸಿನಿಮಾಗಳ ಒನ್‌ಲೈನ್‌ನೊಂದಿಗೆ ಸಿನಿಮಾ ಮಾಡಿರೋದನ್ನು ನೀವು ಕೇಳಿದ್ದೀರಾ? ಕೇಳದಿದ್ದರೆ ಈಗ ಕೇಳಿ. “ಎ2ಎ2ಎ’ ಎಂಬ ಸಿನಿಮಾವೊಂದು ಸೋಮವಾರ ಸೆಟ್ಟೇರಿದೆ. ಈ ಸಿನಿಮಾಕ್ಕೆ ಐದು ಸಿನಿಮಾಗಳು ಸ್ಫೂರ್ತಿ.
ಆ ಐದು ಸಿನಿಮಾಗಳ ಕಥೆಯನ್ನಿಟ್ಟುಕೊಂಡು ನಿರ್ದೇಶಕರು ತಮ್ಮದೇ ಆದ ಕಥೆ ಮಾಡಿದ್ದಾರೆ. ರಾಜ್‌ಕುಮಾರ್ ಅವರ “ಕಸ್ತೂರಿ ನಿವಾಸ’, ವಿಷ್ಣುವರ್ಧನ್ ಅವರ “ಬಂಧನ’, ಉಪೇಂದ್ರ ಅವರ “ಉಪೇಂದ್ರ’, ಸುದೀಪ್ ಅವರ “ಹುಚ್ಚ’, ಶಿವರಾಜಕುಮಾರ್ ಅವರ “ಜೋಗಿ’ ಚಿತ್ರಗಳೇ ಈ ಸಿನಿಮಾಕ್ಕೆ ಸ್ಫೂರ್ತಿ. ನಿರ್ದೇಶಕ ಆರ್.ಕೆ.ನಾಯಕ್ ಈ ಐದು ಸಿನಿಮಾಗಳ ಕಥೆಯನ್ನಿಟ್ಟುಕೊಂಡು ತಮ್ಮದೇ ಆದ ಆರನೇ ಕಥೆ ಮಾಡಿ ಆ ಮೂಲಕ ಸಿನಿಮಾ ಮಾಡುತ್ತಿದ್ದಾರೆ. ಆ ಐದು ಸಿನಿಮಾಗಳ ಪ್ರಮುಖವಾದ ಒಂದಂಶವನ್ನು ತೆಗೆದುಕೊಂಡಿದ್ದಾರಂತೆ.
“ಎ2ಎ2ಎ’ ಎಂದರೇನು ಎಂದು ನೀವು ಕೇಳಬಹುದು. “ಆದಿ-ಅಂತ್ಯ-ಆರಂಭ’ ಎಂಬ ಕಾನ್ಸೆಪ್ಟ್ನಡಿ ಈ ಸಿನಿಮಾ ಮಾಡುತ್ತಿದ್ದಾರಂತೆ. ಆದಿಯಿಂದ ಶುರುವಾದ ಪಯಣ ಅಂತ್ಯವಾಗಿ ಮತ್ತೆ ಅಲ್ಲಿಂದ ಆರಂಭವಾಗುತ್ತದೆ ಎಂಬ ಸ್ಟೋರಿ ಲೈನ್‌ನೊಂದಿಗೆ ಈ ಸಿನಿಮಾ ಮಾಡುತ್ತಿದ್ದಾರೆ ಆರ್.ಕೆ.ನಾಯಕ್. ಈ ಹಿಂದೆ “ಪೇಪರ್ ದೋಣಿ’ ಎಂಬ ಸಿನಿಮಾ ಮಾಡಿದ್ದ ನಾಯಕ್, ಈ ಬಾರಿ ಐದು ಕನ್ನಡ ಸಿನಿಮಾಗಳ ಒನ್‌ಲೈನ್‌ನೊಂದಿಗೆ ಹೊಸ ಬಗೆಯ ಸಿನಿಮಾ ಕಟ್ಟಿಕೊಡಲಿದ್ದಾರಂತೆ. ಚಿತ್ರಕ್ಕೆ “ಸತ್ಯ ಸುಳ್ಳಿನ ಲವ್‌ಸ್ಟೋರಿ’ ಎಂಬ ಟ್ಯಾಗ್‌ಲೈನ್ ಬೇರೆ ಇದೆ.
ಚಿತ್ರದಲ್ಲಿ ವಿಷ್ಣುವರ್ಧನ್ ಎನ್ನುವವರು ನಾಯಕರಾಗಿ ನಟಿಸುತ್ತಿದ್ದಾರೆ. ಅಂದಹಾಗೆ, ಇವರ ಮೂಲ ಹೆಸರು ಪ್ರತಾಪ್. ಆದರೆ, ಇವರು ವಿಷ್ಣುವರ್ಧನ್ ಅವರ ಪಕ್ಕಾ ಅಭಿಮಾನಿಯಾದ ಕಾರಣ ತಮ್ಮ ಹೆಸರನ್ನು ವಿಷ್ಣುವರ್ಧನ್ ಎಂದು ಬದಲಿಸಿಕೊಂಡು ಈಗ ಸಿನಿಮಾಕ್ಕೆ ನಾಯಕರಾಗುತ್ತಿದ್ದಾರೆ. ಈ ಚಿತ್ರಕ್ಕಾಗಿ ಜನವರಿಯಿಂದಲೇ ಸಾಕಷ್ಟು ತಯಾರಿ ಮಾಡಿಕೊಂಡಿರುವುದಾಗಿ ಹೇಳಿದರು. ಇನ್ನು, ಹಿತನ್ ಹಾಸನ್ ಚಿತ್ರದ ಮತ್ತೂಬ್ಬ ನಾಯಕ. ನಿರ್ದೇಶಕರು ಅವರ ಬಳಿ ಸಂಗೀತ ಮಾಡಿಸಲು ಬಂದಿದ್ದರಂತೆ. ಈಗ ಸಂಗೀತ ನಿರ್ದೇಶನದ ಜೊತೆಗೆ ಒನ್ ಆಫ್ ದಿ ಹೀರೋ ಆಗುವ ಅವಕಾಶ ಕೂಡಾ ಕೊಟ್ಟಿದ್ದಾರೆ. ಚಿತ್ರದಲ್ಲಿ ಅಮೃತಾ ರಾಜ್ ನಾಯಕಿ. ಇಲ್ಲಿ ಸ್ಟೂಡೆಂಟ್ ಆಗಿ ನಟಿಸುತ್ತಿದ್ದಾರಂತೆ.
ಸಾಮಾನ್ಯವಾಗಿ ಚಿತ್ರದ ಮುಹೂರ್ತದಂದು ದೇವರ ಫೋಟೋ ಇಟ್ಟು ಅದರ ಮುಂದೆ ಫಸ್ಟ್ ಶಾಟ್ ತೆಗೆಯೋದು ವಾಡಿಕೆ. ಆದರೆ, “ಎ2ಎ2ಎ’ ತಂಡ, ಕನ್ನಡ ಚಿತ್ರರಂಗಕ್ಕೆ ದುಡಿದು ಇಹಲೋಕ ತ್ಯಜಿಸಿರುವ ಹಿರಿಯ ನಿರ್ದೇಶಕರ, ನಟರ ಫೋಟೋ ಇಟ್ಟು ಅದರ ಮುಂದೆ ಮುಹೂರ್ತ ಮಾಡಿಕೊಂಡಿತು. ಜೊತೆಗೆ ಐದು ಸಿನಿಮಾಗಳ ಪ್ರೇರಣೆಯೊಂದಿಗೆ ಈ ಸಿನಿಮಾ ಆಗುತ್ತಿರುವುದರಿಂದ ಆ ಐದು ಸಿನಿಮಾಗಳ ಹೆಸರು ಬರೆದ ಕ್ಲಾéಪ್ ಬೋರ್ಡ್ ಜೊತೆಗೆ “ಎ2ಎ2ಎ’ ಕ್ಲಾಪ್ ಬೋರ್ಡ್ ಕೂಡಾ ಇತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.