ಜ್ಞಾನಂಗೆ ಅಂತಾರಾಷ್ಟ್ರೀಯ ಮನ್ನಣೆ
ಬುದ್ಧಿಮಾಂದ್ಯ ಮಕ್ಕಳ ಪ್ರಪಂಚದ ಸುತ್ತ
Team Udayavani, Jul 7, 2019, 3:00 AM IST
ಕನ್ನಡದಲ್ಲಿ ಈಗಾಗಲೇ ಬುದ್ಧಿಮಾಂದ್ಯ ಮಕ್ಕಳ ಕುರಿತು ಸಿನಿಮಾಗಳು ಬಂದಿವೆ. ಆದರೆ, ಇಲ್ಲೊಂದು ಚಿತ್ರ ಅಂತಾರಾಷ್ಟ್ರೀಯ ಮಟ್ಟದ ಚಿತ್ರೋತ್ಸವದಲ್ಲಿ ಒಂದಲ್ಲ, ಎರಡಲ್ಲ ಬರೋಬ್ಬರಿ ಹನ್ನೊಂದು ಪ್ರಶಸ್ತಿ ಪಡೆದು ಮೆಚ್ಚುಗೆ ಗಳಿಸಿದೆ. ಅಂದಹಾಗೆ, ಆ ಚಿತ್ರದ ಹೆಸರು “ಜ್ಞಾನಂ’. ಇದೊಂದು ಹೊಸತನ ಇರುವ ಚಿತ್ರ. ವರದರಾಜ್ ವೆಂಕಟಸ್ವಾಮಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
ತಮ್ಮ ಮನೆಯ ಪಕ್ಕದಲ್ಲಿರುವ ಬುದ್ದಿಮಾಂದ್ಯ ಮಗುವೊಂದರ ಚಲನವಲನ ನೋಡಿ, ಅದರ ಪ್ರೇರಣೆಯಿಂದ ಕಥೆ, ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ಬರೆದು ಮತ್ತು ಸಂಕಲನವನ್ನು ಮಾಡಿ ನಿರ್ದೇಶಿಸಿದ್ದಾರೆ. ಅವರ ಈ ಚಿತ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದೆ. ಹಾಗಾದರೆ, ಚಿತ್ರದ ಕಥೆ ಏನು? ಈ ಕುರಿತು ಹೇಳುವ ನಿರ್ದೇಶಕರು, “ಈ ಚಿತ್ರದಲ್ಲಿ ಸಾಕಷ್ಟು ವಿಶೇಷತೆಗಳಿವೆ.
ಕಥೆ ಕುರಿತು ಹೇಳುವುದಾದರೆ, ಒಂದೇ ದಿನ ಹುಟ್ಟಿದ ಇಬ್ಬರು ಮಕ್ಕಳಲ್ಲಿ ಒಬ್ಬ ಬುದ್ದಿವಂತ. ಮತ್ತೂಬ್ಬ ಬುದ್ದಿಮಾಂದ್ಯ. ಇಂತಹ ಖಾಯಿಲೆಗೆ ತುತ್ತಾಗಿರುವ ಮಕ್ಕಳ ಯೋಚನೆ, ಆಲೋಚನೆಗಳು, ಅವರ ಪ್ರಪಂಚ, ಶಕ್ತಿ ಹೇಗಿದೆ ಅನ್ನುವುದನ್ನು ತೋರಿಸುವ ಪ್ರಯತ್ನವಿದು. ಇಂತಹ ಗುಣವಿರುವ ಪಾತ್ರದಲ್ಲಿ ಮಾಸ್ಟರ್ ಧ್ಯಾನ್.
ಇದೇ ರೀತಿ ಮಕ್ಕಳು ಇರುವ ಸ್ಥಳಕ್ಕೆ ಭೇಟಿ ನೀಡಿ ಅವರ ಚಲನವಲನಗಳನ್ನು ಕಂಡು ನಟಿಸಿದ್ದಾನೆ. ಇನ್ನು, ಬುದ್ಧಿವಂತ ಹುಡುಗನಾಗಿ ಲೋಹಿತ್ ಐದು ಪುಟದ ಸಂಭಾಷಣೆಯನ್ನು ಒಂದೇ ಟೇಕ್‌ಗೆ ಓಕೆ ಮಾಡುವ ಮೂಲಕ ಮೆಚ್ಚುಗೆ ಪಡೆದಿದ್ದಾನೆ’ ಎಂಬುದು ನಿರ್ದೇಶಕರ ಮಾತು. ಬಹಳ ದಿನಗಳ ಬಳಿಕ ಹಿರಿಯ ಕಲಾವಿದೆ ಶೈಲಶ್ರೀ ಚಿತ್ರದಲ್ಲಿ ನಟಿಸಿದ್ದಾರೆ.
ಅವರಿಲ್ಲಿ ಮಕ್ಕಳು ಎಷ್ಟೇ ಪ್ರೀತಿ ತೋರಿಸಿದರೂ, ಅವರನ್ನು ನಿರ್ಲಕ್ಷಿಸುವ ಪಾತ್ರದಲ್ಲಿ ಶೈಲಶ್ರೀ ಕಾಣಿಸಿಕೊಂಡಿದ್ದಾರಂತೆ. ಉಳಿದಂತೆ ಸಿ.ವೇಣು ಭಾರದ್ವಾಜ್, ರಾಧಿಕಾ ಶೆಟ್ಟಿ, ಸಂತೋಷ್, ಜ್ಯೋತಿ ಮುರೂರು, ನವ್ಯಾ, ಕುಶಾಲ್ ನಾರಾಯಣ್ ಸೇರಿದಂತೆ ಹಲವರು ನಟಿಸಿದ್ದಾರೆ. ಇತ್ತೀಚೆಗೆ ಲಹರಿ ಆಡಿಯೋ ಸಂಸ್ಥೆ ಮೂಲಕ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಲಾಯಿತು.
ಈ ವೇಳೆ ಲಹರಿ ವೇಲು ಮಾತನಾಡಿ, “ಬುದ್ಧಿಮಾಂದ್ಯ ಮಕ್ಕಳು, ನಿಜವಾಗಿಯೂ ಬುದ್ಧಿವಂತರು. ಅವರು ದೇವರ ಮಕ್ಕಳು’ ಎಂದರು. ರೋಹಿತ್ ಸೋವರ್ ಸಂಗೀತವಿದ್ದು, ಒಂದು ಹಾಡಿಗೆ ಧ್ವನಿಯಾಗಿದ್ದಾರೆ. ಉಳಿದ ಹಾಡುಗಳನ್ನು ಸ್ಪರ್ಶ ಹಾಡಿದ್ದಾರೆ. ಸಿ.ವೇಣು ಭಾರದ್ವಾಜ್ ಮತ್ತು ಸಿ.ರಾಜ್‌ಭಾರದ್ವಾಜ್ ನಿರ್ಮಾಣ ಮಾಡಿರುವ “ಜ್ಞಾನಂ’. ಚಿತ್ರ ಮುಂದಿನ ತಿಂಗಳು ತೆರೆಗೆ ಬರುವ ಸಾದ್ಯತೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Upendra: ʼಯುಐʼಗೆ ಸ್ಯಾಂಡಲ್‌ವುಡ್ ಸಾಥ್; ಉಪೇಂದ್ರ ಚಿತ್ರ ನೋಡಲು ಕಾತುರ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.