ಬದುಕು ಬದಲಿಸಿದ ಕಾಂತಾರ; ಮೂಗುತಿ ಸುಂದರಿಯ ಮನದ ಮಾತು

Team Udayavani, Oct 21, 2022, 2:38 PM IST

ಬದುಕು ಬದಲಿಸಿದ ಕಾಂತಾರ; ಮೂಗುತಿ ಸುಂದರಿಯ ಮನದ ಮಾತು

ಸದ್ಯ ದಕ್ಷಿಣದಿಂದ ಉತ್ತರದವರೆಗೂ ಎಲ್ಲರ ಬಾಯಲ್ಲೂ ಇರುವ ಹೆಸರು “ಕಾಂತಾರ’. ಕನ್ನಡ ಚಿತ್ರವೊಂದು ತನ್ನ ಕಂಟೆಂಟ್‌ನಿಂದ ಇಡೀ ದೇಶದ ಜನರ ಮನ ಗೆದ್ದಿದೆ. ಈ ಚಿತ್ರದ ಮೂಲಕ ಕನ್ನಡಕ್ಕೆ ಭರವಸೆಯ ನಟಿಯೂ ದೊರೆತಿದ್ದಾರೆ. ಅವರು ಸಪ್ತಮಿ ಗೌಡ. “ಕಾಂತಾರ’ ಮೂಲಕ ಪ್ರೇಕ್ಷಕರ ಮನ ಕದ್ದ ಮೂಗುತಿ ಸುಂದರಿ ಸಪ್ತಮಿ ಗೌಡ ಚಿತ್ರದ ಯಶಸ್ಸು, ಮುಂದಿನ ಕನಸು, ಆಫ‌ರ್ ಗಳ ಬಗ್ಗೆ ಇಲ್ಲಿ ಮಾತನಾಡಿದ್ದಾರೆ.

“ಕಾಂತಾರ’ದ ದೊಡ್ಡ ಯಶಸ್ಸಿನ ಬಗ್ಗೆ ಏನು ಹೇಳುತ್ತೀರಿ?

ಈ ಚಿತ್ರದ ಸಕ್ಸಸ್‌ ಗೆ ಕಾರಣ ಕರ್ನಾಟಕದ ಜನ. ಕನ್ನಡ ಜನತೆ ಇತರ ಭಾಷೆ ಗೆಳೆಯರಿಗೆ ಚಿತ್ರವನ್ನು ತೋರಿಸಲು ಆರಂಭಿಸಿದ ಮೇಲೆ ಸಿನಿಮಾ ಅವರ ಭಾಷೆಗೆ ಡಬ್‌ ಮಾಡಲು ಡಿಮ್ಯಾಂಡ್‌ ಮತ್ತಷ್ಟು ಜಾಸ್ತಿಯಾಯಿತು. ಈ ಮೊದಲು ಚಿತ್ರವನ್ನು ಪ್ಯಾನ್‌ ಇಂಡಿಯಾ ಮಾಡಬೇಕು ಅನ್ನುವ ಯೋಚನೆ ಇರಲಿಲ್ಲ. ಅಷ್ಟು ಪ್ರೀತಿ, ಅಭಿಮಾನ ಬೇರೆ ರಾಜ್ಯಗಳಿಂದ ಬಂದ ಮೇಲೆ ಚಿತ್ರವನ್ನು ಪ್ಯಾನ್‌ ಇಂಡಿಯಾ ಮಾಡಿದ್ದು.

ಈಗ ನೀವು ಪ್ಯಾನ್‌ ಇಂಡಿಯಾ ಹೀರೋಯಿನ್‌?

ನನ್ನ ಕೆರಿಯರ್‌ನಲ್ಲಿ ಇಷ್ಟು ಬೇಗ ಇಂತಹ ಚಿತ್ರ ಸಿಗುತ್ತೆ ಎಂದು ಭಾವಿಸಿರಲಿಲ್ಲ. ಕನ್ನಡದಲ್ಲೇ ಇಂತಹ ದೊಡ್ಡ ಸಿನಿಮಾ ಸಿಗುತ್ತೆ ಅಂತಲೂ ಅಂದು ಕೊಂಡಿರಲಿಲ್ಲ. ಅದರಲ್ಲೂ ಪ್ಯಾನ್‌ ಇಂಡಿಯಾ ಹೀರೋಯಿನ್‌ ಆಗಿರೋದು ನನ್ನ ಅದೃಷ್ಟ ಹಾಗೂ ದೇವರ ಆಶೀರ್ವಾದ. ಸಿನಿಮಾ ಹೇಗೆ ತೆಗೆದುಕೊಂಡು ಹೋಗುತ್ತಿದೆಯೋ ಹಾಗೆ ನಾವು ಹೋಗುತ್ತಿದ್ದೇವೆ ಅಷ್ಟೆ. ತುಂಬಾ ಖುಷಿ ಇದೆ. ಜನರ ಪ್ರೀತಿ, ಅಭಿಮಾನವೇ ಎಲ್ಲದಕ್ಕೂ ಕಾರಣ.

ನಿಮ್ಮ ಪಾತ್ರಕ್ಕೆ ಸಿಕ್ಕ ಪ್ರಶಂಸೆ?

ಸಾಕಷ್ಟು ಜನ ಲೀಲಾ ಅನ್ನುವ ಪಾತ್ರದ ಬಗ್ಗೆ ಮಾತನಾಡಿದ್ದಾರೆ. ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಅದರಲ್ಲೂ ನಾನು ಚಿತ್ರದಲ್ಲಿ ಮಂಗಳೂರು ಕನ್ನಡ ಮಾತನಾಡಿರುವ ಕುರಿತು ಸಾಕಷ್ಟು ಜನರಿಂದ ಪ್ರಸಂಶೆ ಸಿಕ್ಕಿದೆ. “ನೀವು ಬೆಂಗಳೂರಿಗರು ಅಂತ ಅನಿಸೋದಿಲ್ಲ. ಅಲ್ಲೇ ಹುಟ್ಟಿ ಬೆಳದವರ ರೀತಿ ಮಾತನಾಡಿದ್ದೀರಿ’ ಎಂಬ ಮಾತುಗಳು ಕೇಳಿಬಂತು. ನಾನು ಕೂಡಾ ಚಿತ್ರದಲ್ಲಿ ಭಾಷೆ ಎಲ್ಲೂ ಮಿಸ್‌ ಆಗಬಾರದು, ನಾನು ಮಂಗಳೂರು ಹುಡುಗಿಯಾಗಿಯೇ ಕಾಣಿಸಿಕೊಳ್ಳಬೇಕು ಎಂದು ನಡೆಸಿದ ತಯಾರಿ ಸಾರ್ಥಕವಾಯಿತು ಎನಿಸಿತ್ತು.

ಸಾಕಷ್ಟು ಆಫ‌ರ್ ಬಂದಿರಬೇಕಲ್ಲ?

ಸದ್ಯ ಸಾಕಷ್ಟು ಆಫ‌ರ್ ನನ್ನೆದುರಿಗೆ ಇದೆ. ಆದರೆ ಯಾವುದನ್ನೂ ಒಪ್ಪಿಕೊಂಡಿಲ್ಲ. ನನಗೆ ನಿರ್ಧಾರ ತೆಗೆದುಕೊಳ್ಳುವ ಮೊದಲು ನಾನು ಕೆಲವೊಬ್ಬರ ಬಳಿ ಮಾತನಾಡಿ ಅವರ ಸಲಹೆ ಪಡೆಯಬೇಕಿದೆ. ಅವರೆಲ್ಲಾ ನನಗೆ ಹೇಳಿದ್ದು, ಒಂದು ಸ್ವಲ್ಪ ಸಮಯ ಕಾಯಿ, ನಂತರ ನಿರ್ಧಾರ ತಗೋ ಅಂತ. ಹಾಗಾಗಿ ಯೋಚಿಸಿ ಹೆಜ್ಜೆ ಇಡಬೇಕು ಎಂದು ನಿರ್ಧರಿಸಿದ್ದೇನೆ. ಬಂದ ಸ್ಕ್ರಿಪ್ಟ್, ಅವಕಾಶಗಳ ಕುರಿತು ಆಲೋಚಿಸಿ ಮುಂದುವರೆಯುವ ನಿರ್ಧಾರ ಮಾಡಿದ್ದೇನೆ. ಗಡಿಬಿಡಿಯಲ್ಲಿ ಎಲ್ಲವನ್ನೂ ಒಪ್ಪಿಕೊಳ್ಳುವುದಿಲ್ಲ. ಕಾಂತಾರದ ಪಾತ್ರಕ್ಕಾಗಿ ಒಂದೂವರೆ ವರ್ಷ ಕಾದೆ ಮುಂದಿನ ಪಾತ್ರಕ್ಕೆ ದಿನಗಳು, ವಾರ, ತಿಂಗಳು ಆಗುತ್ತೋ ಗೊತ್ತಿಲ್ಲ. ಒಳ್ಳೆಯದಕ್ಕಾಗಿ ಕಾಯುತ್ತೇನೆ.

ಅನ್ಯ ಭಾಷೆಗಳಿಂದ ಆಫ‌ರ್‌ ಬಂದಿದೆಯಾ?

ಬೇರೆ ಭಾಷೆಗಳಿಂದಲೂ ಆಫ‌ರ್‌ಗಳು ಬಂದಿವೆ. ಆದರೆ ನನಗೆ ಒಂದು ಚಿಕ್ಕ ಸ್ವಾರ್ಥ ಕನ್ನಡದಲ್ಲೇ ಅತಿ ಹೆಚ್ಚು ಚಿತ್ರ ಮಾಡಬೇಕು ಎಂಬುದು. ಕನ್ನಡದಲ್ಲೇ ಭಿನ್ನ ಭಿನ್ನ ಪಾತ್ರಗಳನ್ನು ಮಾಡಬೇಕು ಅನ್ನುವ ಆಸೆ. ಹಾಗೇ ನನಗೆ ಕನ್ನಡ, ಇಂಗ್ಲೀಷ್‌ ಬಿಟ್ಟರೆ ಮತ್ಯಾವ ಭಾಷೆಯೂ ಕೂಡಾ ಅಷ್ಟು ಚೆನ್ನಾಗಿ ಬರೋದಿಲ್ಲ. ಬೇರೆ ಭಾಷೆ ಮೇಲೆ ಹಿಡಿತಾ ಇಲ್ಲ. ಬೇರೆ ಭಾಷೆಗಳಲ್ಲಿ ತುಂಬಾ ಒಳ್ಳೆಯ ಆಫ‌ರ್‌ ಬಂದರೆ ಯೋಚನೆ ಮಾಡ್ತಿನಿ.

ವಾಣಿ ಭಟ್ಟ

ಟಾಪ್ ನ್ಯೂಸ್

Karkala: ತಿಂಗಳ ಹಿಂದೆ ಮೃತಪಟ್ಟಿದ್ದ ಪತಿ, ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿಯೂ ವಿದ್ಯುತ್ ಆಘಾತದಿಂದ ಮೃ*ತ್ಯು

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Gowri Shankara: ಸೆಟ್ಟೇರಿತು ಹೊಸಬರ ಗೌರಿ ಶಂಕರ

Gowri Shankara: ಸೆಟ್ಟೇರಿತು ಹೊಸಬರ ಗೌರಿ ಶಂಕರ

Maryade Prashne movie trailer out

Maryade Prashne: ಪ್ರಶ್ನೆ ಕೇಳಲು ಬಂದ ಮರ್ಯಾದಸ್ತರು

ShivaRajkumar: ʼಘೋಸ್ಟ್‌ʼ ಬಳಿಕ ಮತ್ತೆ ಶ್ರೀನಿ ಜತೆ ಶಿವಣ್ಣ ಸಿನಿಮಾ; ಟೈಟಲ್‌ ರಿವೀಲ್

ShivaRajkumar: ʼಘೋಸ್ಟ್‌ʼ ಬಳಿಕ ಮತ್ತೆ ಶ್ರೀನಿ ಜತೆ ಶಿವಣ್ಣ ಸಿನಿಮಾ; ಟೈಟಲ್‌ ರಿವೀಲ್

5

Sandalwood: ಮುಹೂರ್ತದಲ್ಲಿ ‘ದಿ ಟಾಸ್ಕ್’

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

7

Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು

Karkala: ತಿಂಗಳ ಹಿಂದೆ ಮೃತಪಟ್ಟಿದ್ದ ಪತಿ, ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

6

Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ

5

Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿಯೂ ವಿದ್ಯುತ್ ಆಘಾತದಿಂದ ಮೃ*ತ್ಯು

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.