ಇಂಟ್ರೋಡ್ಯೂಸ್ ಅಂಡ್ ರೀ ಇಂಟ್ರೋಡ್ಯೂಸ್
Team Udayavani, Oct 2, 2017, 10:32 AM IST
ಈ ವಾರ ಇಬ್ಬರು ನಟರು ರೀ ಇಂಟ್ರೋಡ್ಯೂಸ್ ಆಗುತ್ತಿದ್ದಾರೆ. ಅದು “ಹುಲಿರಾಯ’ ಮೂಲಕ ಬಾಲು ನಾಗೇಂದ್ರ ಹಾಗೂ “ಕಿಡಿ’ ಮೂಲಕ ಭುವನ್ ಚಂದ್ರ. ಇಲ್ಲಿ ರೀಇಂಟ್ರೋಡ್ಯೂಸ್ ಅನ್ನಲು ಒಂದು ಕಾರಣವಿದೆ. ಅದೇನೆಂದರೆ ಈ ಇಬ್ಬರು ನಟರು ಕೂಡಾ ಈಗಾಗಲೇ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಬಾಲು ನಾಗೇಂದ್ರ “ಕಡ್ಡಿಪುಡಿ’ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ಸಣ್ಣಪುಟ ಪಾತ್ರ ಮಾಡಿದರೆ, ಭುವನ್ ಚಂದ್ರ, ವಿಷ್ಣುವರ್ಧನ್ ಅವರ “ಸಿರಿವಂತ’ ಚಿತ್ರದಲ್ಲಿ ಒಂದು ಪಾತ್ರ ಹಾಗೂ “ಶ್ರಾವಣ’ ಚಿತ್ರದಲ್ಲಿ ಒನ್ ಆಫ್ ದಿ ಹೀರೋ ಆಗಿ ನಟಿಸಿದ್ದಾರೆ. ಈಗ ತುಂಬಾ ಗ್ಯಾಪ್‌ನ ಬಳಿಕ ಈ ಇಬ್ಬರು ನಟರು ಪೂರ್ಣ ಪ್ರಮಾಣದ ಹೀರೋಗಳಾಗಿ ಎಂಟ್ರಿಕೊಡುತ್ತಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ರೀ ಎಂಟ್ರಿ ಬಗ್ಗೆ ಅವರಿಬ್ಬರು ಮಾತನಾಡಿದ್ದಾರೆ …
ಬಾಲುವಿನ ಹುಲಿಬೇಟೆ
* ಮೊದಲ ಬಾರಿಗೆ ಹೀರೋ ಆಗಿ ನಟಿಸಿದ್ದೀರಿ?
ಹೌದು, ಖುಷಿಯಾಗುತ್ತಿದೆ. ಚಿತ್ರ ಈ ವಾರ ತೆರೆಕಾಣುತ್ತಿದೆ. ನಿರ್ದೇಶಕ ಅರವಿಂದ್ ಮತ್ತು ನಾನು ಹಳೆಯ ಗೆಳೆಯರು. ಅದೊಂದು ದಿನ ನಾವಿಬ್ಬರು ಭೇಟಿಯಾದಾಗ, “ಸಿನಿಮಾ ಮಾಡೋಣ’ ಅಂದೆ. ಅರವಿಂದ್, “ಮಾಡೇಬಿಡೋಣ’ ಅಂದರು. ಹಾಗೆ “ಹುಲಿರಾಯ’ ಆರಂಭವಾಯಿತು.
* ನಿಮ್ಮ ಹಿನ್ನೆಲೆ?
ನಾನು ರಂಗಭೂಮಿಯಿಂದ ಬಂದವನು. ಸಾಕಷ್ಟು ನಾಟಕಗಳನ್ನು ಮಾಡಿದ್ದೇನೆ. ನಾನು ಮೊದಲು ಕ್ಯಾಮರಾ ಎದುರಿಸಿದ್ದು “ಚಿದಂಬರ ರಹಸ್ಯ’ ಎಂಬ ಟೆಲಸೀರಿಯಲ್ ಮೂಲಕ. ಆ ನಂತರ ಸೂರಿಯವರ ಕೆಲವು ಸಿನಿಮಾಗಳಲ್ಲಿ ನಟಿಸಿದೆ. ಅದರಲ್ಲಿ “ಕಡ್ಡಿಪುಡಿ’ ಚಿತ್ರದ ಬೆರಕೆ ವೆಂಕಟೇಶ ಪಾತ್ರ ನನಗೆ ಒಳ್ಳೆಯ ಹೆಸರು ತಂದುಕೊಟ್ಟಿತು. ಹೀರೋ ಆಗಿ “ಹುಲಿರಾಯ’ ನನ್ನ ಚೊಚ್ಚಲ ಸಿನಿಮಾ.
* “ಹುಲಿರಾಯ’ನಲ್ಲಿ ಏನು ಹೇಳಲು ಹೊರಟಿದ್ದೀರಿ?
ಇದು ಕಾಡು ಹುಡುಗನೊಬ್ಬನ ಕಥೆ. ಕಾಡಿನಲ್ಲಿರುವ ಹುಡುಗ ಸಿಟಿಗೆ ಬಂದರೆ ಆತ ಯಾವ ರೀತಿ ಬದುಕಬಹುದು. ಜಾಗ ಕಮ್ಮಿ ಜನ ಜಾಸ್ತಿಯಂತಾಗಿರುವ ಸಿಟಿಯಲ್ಲಿ ಆತ ಪಡುವ ಪಾಡೇನು ಎಂಬ ಅಂಶದೊಂದಿಗೆ ಈ ಸಿನಿಮಾ ಸಾಗುತ್ತದೆ.
* ನಿಮ್ಮ ಪ್ರಕಾರ, ಇದು ಯಾವ ಜಾನರ್‌ಗೆ ಸೇರುವ ಸಿನಿಮಾ?
ನಾನಿದನ್ನು ಯಾವುದೇ ಜಾನರ್‌ಗೆ ಸೇರಿಸೋದಿಲ್ಲ. ಲೈಫ್ ಟ್ರಾವೆಲ್ ಮೂವೀ ಎಂದು ಕರೆಯಲಿಚ್ಛಿಸುತ್ತೇನೆ. ಇಲ್ಲಿ ಸೆಂಟಿಮೆಂಟ್, ಲವ್ ಜೊತೆಗೆ ಪ್ರಸ್ತುತ ನಾವು ಎದುರಿಸುತ್ತಿರುವ ನಮ್ಮ ಕಣ್ಣ ಮುಂದೆ ನಡೆಯುತ್ತಿರುವ ಅಂಶಗಳು ಈ ಚಿತ್ರದಲ್ಲಿವೆ.
* ವೈಯಕ್ತಿಕವಾಗಿ ಈ ಸಿನಿಮಾ ನಿಮಗೆ ಎಷ್ಟು ಪ್ಲಸ್?
ಶೇ 100 ರಷ್ಟು ಪ್ಲಸ್. ಏಕೆಂದರೆ ಇದೊಂದು ಹೊಸ ಬಗೆಯ ಕಥೆ ಹೊಂದಿರುವ ಸಿನಿಮಾ. ಚಿತ್ರದಲ್ಲಿ ಹೀರೋಯಿಸಂ ಇಲ್ಲ. ನಾಯಕ ಹತ್ತು ಮಂದಿ ವಿಲನ್‌ಗಳಿಗೆ ಹೊಡೆಯುವುದಿಲ್ಲ. ಆದರೆ, ನಟನೆಗೆ ತುಂಬಾ ಅವಕಾಶವಿದೆ. ಫ್ರೆàಮ್ ಟು ಫ್ರೆàಮ್ ಇಲ್ಲಿ ಆ್ಯಕ್ಟಿಂಗ್ ಇದೆ. ಆ ವಿಷಯದಲ್ಲಿ ಚಿತ್ರತಂಡ ನನ್ನನ್ನು ಫ್ರೀ ಬಿಟ್ಟು ಸಹಕರಿಸಿತು.
* ಚಿತ್ರದ ಬಗ್ಗೆ ನಿರೀಕ್ಷೆ ಎಷ್ಟಿದೆ?
ಇತ್ತೀಚೆಗೆ ಕೆಲವರಿಗೆ ಸಿನಿಮಾ ತೋರಿಸಿದೆವು. ಎಲ್ಲರಿಂದಲೂ ಪಾಸಿಟಿವ್ ರಿಪೋರ್ಟ್ ಬಂತು. ಈ ತರಹದ ಸಿನಿಮಾ ನೋಡಿಲ್ಲ, ವಿಭಿನ್ನವಾಗಿದೆ ಎಂಬ ಮಾತುಗಳು ಕೇಳಿಬಂದುವು. ಒಳ್ಳೆಯ ಸಿನಿಮಾ ಮಾಡಿದ ಸಾರ್ಥಕ ಭಾವ ನಮ್ಮಗಿದೆ.
* ಬೇರೆ ಅವಕಾಶಗಳು?
ಬರ್ತಾ ಇವೆ. ಒಂದಷ್ಟು ಕಥೆಗಳನ್ನು ಕೇಳಿದ್ದೇನೆ. “ಹುಲಿರಾಯ’ ಬಿಡುಗಡೆಯಾಗೋದಕ್ಕೆ ಕಾಯ್ತಾ ಇದ್ದೀನಿ.
ಭುವನ್ ಕಿಡಿಗನಸು
* ಕಿಡಿ ಮಾಡೋಕೆ ಇಷ್ಟೊಂದು ಗ್ಯಾಪ್ ಯಾಕಾಯ್ತು?
ಎಲ್ಲದ್ದಕ್ಕೂ ಒಳ್ಳೇ ಟೈಮ್ ಬೇಕಿತ್ತು. ಅದು ಈಗ ಬಂದಿದೆ. ಲೇಟ್ ಆಗಿದೆ ನಿಜ. ಆದರೆ, ಲೇಟೆಸ್ಟ್ ಆಗಿಯೇ ಎಂಟ್ರಿಯಾಗುತ್ತಿದ್ದೇನೆ. ಒಂದಷ್ಟು ಕಥೆ ಬಂದಿದ್ದರೂ, ಜನರಿಗೆ ತಲುಪುವ ಮತ್ತು ಇಷ್ಟವಾಗುವ ಕಥೆ ಬೇಕಿತ್ತು. ಅದು “ಕಿಡಿ’ ಮೂಲಕ ಸಿಕ್ಕಿದೆ. ಹೀಗಾಗಿ ಗ್ಯಾಪ್ ಬೇಕಾಯ್ತು.
* “ಸಿರಿವಂತ’ ನಂತರ ಅವಕಾಶ ಬರಲೇ ಇಲ್ವಾ?
ಹಾಗೇನೂ ಇಲ್ಲ. ಅವಕಾಶ ಬಂದರೂ, ಓದುವುದು ಮುಖ್ಯವಾಗಿತ್ತು. “ಶ್ರಾವಣ’ ಚಿತ್ರದಲ್ಲಿ ಸೆಕೆಂಡ್ ಹೀರೋ ಆಗಿದ್ದರೂ, ಆ ಚಿತ್ರ ಸದ್ದು ಮಾಡಲಿಲ್ಲ. ನನಗೆ ಸಿನಿಮಾ ಬ್ಯಾಕ್‌ಗ್ರೌಂಡ್ ಇಲ್ಲ. ಗಾಡ್‌ಫಾದರ್ ಇಲ್ಲದೆ ಇಲ್ಲಿ ನೆಲೆಕಾಣುವುದು ಕಷ್ಟ. ಆದರೆ, ಪ್ರತಿಭೆ ಇದ್ದರೆ, ಖಂಡಿತ ಬೇರೂರಬಹುದು. ನಾನು ಜಿಮ್, ಸ್ಟಂಟ್ಸ್ ಮಾಡಿ ಒಂದಷ್ಟು ತರಬೇತಿ ಪಡೆದೆ, “ಸಂಭವ’ ಎಂಬ ಚಿತ್ರದಲ್ಲಿ ಹೀರೋ ಆದೆ. ಆದರೆ, ಆ ಚಿತ್ರ ರಿಲೀಸ್ ಆಗಲಿಲ್ಲ. ಈಗ “ಕಿಡಿ’ ಮಾಡಿ ಮುಗಿಸಿದ್ದೇನೆ. ಜನರು ತೀರ್ಪು ಕೊಡಬೇಕಷ್ಟೇ.
* ಕಿಡಿ ಶುರುವಾಗಿದ್ದು ಹೇಗೆ?
ಧನಂಜಯ್ ಇಲ್ಲಿ ಮುಖ್ಯ ಕಾರಣ, ಮಲ್ಲಿಕಾರ್ಜುನ್ ಮತ್ತು ನಾಗರಾಜ್ ಅವರ ಪರಿಚಯ ಮಾಡಿಕೊಟ್ಟರು. ಒಳ್ಳೇ ಕಥೆ ತನ್ನಿ ಅಂತ ಅವರು ಹೇಳಿದ ಮೇಲೆ, ನಾನೊಂದಷ್ಟು ಬೇರೆ ಭಾಷೆಯ ಚಿತ್ರ ನೋಡೋಕೆ ಶುರುಮಾಡಿದೆ. ನೂರಾರು ಸಿನಿಮಾಗಳ ಪೈಕಿ ಮಲಯಾಳಂನ “ಕಲಿ’ ಇಷ್ಟವಾಯ್ತು. ಕನ್ನಡಕ್ಕೆ ಇದೊಂದು ಒಳ್ಳೇ ಚಿತ್ರ ಆಗುತ್ತೆ ಅನಿಸಿತು. ನಿರ್ಮಾಪಕರೂ ಓಕೆ ಅಂದ್ರು. ಸಿನಿಮಾ ಶುರುವಾಯ್ತು. ಈಗ ಜನರ ಮುಂದೆ ಬರೋಕೆ ರೆಡಿಯಾಗಿದೆ.
* ಕಿಡಿಯ ಕಥೆ ಏನು?
ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಕೋಪ ಬಂದೇ ಬರುತ್ತೆ. ಆದರೆ, ಅದು ಕಂಟ್ರೋಲ್ ಆಗದೇ ಇದ್ದಾಗ, ಏನೆಲ್ಲಾ ಸಮಸ್ಯೆಗೆ ಸಿಲುಕಿಕೊಳ್ತೀವಿ ಅನ್ನೋದು ಕಥೆ. ಗೋಪಿನಾಥ್ ಮೂಲ ಕಥೆ ಬರೆದವರು. ಅದ್ಭುತವಾದ ಕಾನ್ಸೆಪ್ಟ್ ಇಲ್ಲಿದೆ. ಒಳ್ಳೆಯ ಟೀಮ್ ರೆಡಿಮಾಡಿಕೊಂಡ್ವಿ. ರಘು ನೃತ್ಯ ನಿರ್ದೇಶಕರಾದವರು. ಅವರಿಗೆ ಇದು ಮೊದಲ ನಿರ್ದೇಶನ, ನಿರೀಕ್ಷೆ ಮೀರಿ ಚಿತ್ರ ಮೂಡಿಬಂದಿದೆ.
* ಕಿಡಿಗಾಗಿ ಏನೇನು ಮಾಡಿದೀರಿ?
ಮುಖ್ಯವಾಗಿ ಒಂದು ಒಳ್ಳೆಯ ಚಿತ್ರಕ್ಕೆ ಎಲ್ಲದ್ದೂ ಚೆನ್ನಾಗಿರಬೇಕು. ಇಲ್ಲಿ ಕಂಟೆಂಟ್ ಜತೆಗೆ ಒಳ್ಳೆಯ ಆ್ಯಕ್ಷನ್ ಕೂಡ ಇದೆ. ನಾನು ಅದನ್ನು ತುಂಬಾ ಚೆನ್ನಾಗಿ ಮಾಡಬೇಕು ಅಂತ 7 ತಿಂಗಳ ಕಾಲ ಅಪು ವೆಂಕಟೇಶ್ ಬಳಿ ತರಬೇತಿ ಪಡೆದಿದ್ದೇನೆ. ಡೂಪ್ ಇಲ್ಲದೆ ಆ್ಯಕ್ಷನ್ ಮಾಡಿದ್ದೇನೆ. ಚೇಸಿಂಗ್ ಕೂಡ ನಾನೇ ಮಾಡಿದ್ದೇನೆ. ಸಾಕಷ್ಟು ತಯಾರಿಯೊಂದಿಗೆ ಕ್ಯಾಮೆರಾ ಮುಂದೆ ನಿಂತಿದ್ದುಂಟು.
* ರಿಮೇಕ್ ಸಿನಿಮಾನೇ ಯಾಕೆ ಬೇಕಿತ್ತು?
ನನಗಿದು ಹೀರೋ ಆಗಿ ಮೊದಲ ಸಿನಿಮಾ. ರಿಮೇಕ್ ಆಗಿದ್ದರೂ, ಒಳ್ಳೇ ಕಥೆ ಬೇಕಿತ್ತು. ಅಷ್ಟಕ್ಕೂ ನಿರ್ಮಾಪಕರಿಗೆ ಕಥೆ ಕೇಳುವಷ್ಟು ಸಮಯವಿರಲಿಲ್ಲ. ರಿಮೇಕ್ ಸಿನಿಮಾ ತೋರಿಸಿದೆವು. ಅವರಿಗೆ ಇಷ್ಟವಾಗಿದ್ದೇ ತಡ, “ಕಲಿ’ ರಿಮೇಕ್ ರೈಟ್ಸ್ ತಂದು ಮಾಡಿದ್ದೇವೆ. ಇದೊಂದು ಚಾಲೆಂಜಿಂಗ್ ಕೆಲಸ ಆಗಿತ್ತು. ಅದನ್ನು ಪರಿಪೂರ್ಣಗೊಳಿಸಿರುವ ನಂಬಿಕೆ ನಮ್ಮದು. ರಿಮೇಕ್ ಆಗಿದ್ದರೂ, ನಮ್ಮ ನೇಟಿವಿಟಿಗೆ ಮಾಡಿದ್ದೇವೆ.
* ಜನರಿಗೆ ಇಲ್ಲಿ ಏನು ಇಷ್ಟ ಆಗುತ್ತೆ?
ಇದು ಫ್ಯಾಮಿಲಿ ಬೇಸ್ಡ್ ಚಿತ್ರ. ನ್ಯಾಚುರಲ್ ಆಗಿಯೇ ಚಿತ್ರ ಮೂಡಿಬಂದಿದೆ. ಎಲ್ಲರ ಲೈಫಲ್ಲೂ ಒಂದೊಂದು ಘಟನೆ ಆಗುತ್ತೆ. ಕೋಪ ಕೂಡ ಸಹಜವಾಗಿಯೇ ಬರುತ್ತೆ. ಬಂದಾಗ, ಕಂಟ್ರೋಲ್ ಆಗದಿದ್ದರೆ ಆಗುವ ಅವಘಡಗಳು ಎಂಥದ್ದು ಎಂಬ ವಿಷಯ ಇಲ್ಲಿ ಎಲ್ಲರಿಗೂ ಇಷ್ಟವಾಗುತ್ತೆ. ಇಲ್ಲಿ ಎಲ್ಲರೂ ಶ್ರಮಪಟ್ಟಿದ್ದಾರೆ. ಕೊರವ ಚಳಿಯಲ್ಲೂ ರಾತ್ರಿಯೆಲ್ಲ ಕೆಲಸ ಮಾಡಿದ್ದಾರೆ. ಕಷ್ಟಪಟ್ಟರೂ, ಚಿತ್ರ ಚೆನ್ನಾಗಿ ಬಂದಿರುವ ಖುಷಿ ಇದೆ. ಮಿಕ್ಕಿದ್ದು ಪ್ರೇಕ್ಷಕರಿಗೆ ಬಿಟ್ಟಿದ್ದು.
* ಮುಂದೆ?
ಒಂದಷ್ಟು ಕಥೆ ಕೇಳುತ್ತಿದ್ದೇನೆ. ಎಲ್ಲರಿಗೂ ತಲುಪುವಂತಹ, ಒಪ್ಪುವಂತಹ ಕಥೆ ಸಿಕ್ಕಾಗ ಸಿನಿಮಾ ಮಾಡ್ತೀನಿ. ಮುಂದಿನದು ಪಕ್ಕಾ ಸ್ವಮೇಕ್ ಆಗಿರುತ್ತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mudhol: ಪ್ರಯಾಣಿಕರ ಉಪಯೋಗಕ್ಕೆ ಬಾರದ ತಂಗುದಾಣ… ಅಂಗಡಿ ಮುಂಗಟ್ಟಿನಿಂದ ಕಣ್ಮರೆ
Hubli: ರಾಜ್ಯದ ಕಾಂಗ್ರೆಸ್ ಸರ್ಕಾರ ಪತನಗೊಳ್ಳುವುದು ಖಚಿತ: ಜಗದೀಶ ಶೆಟ್ಟರ್
Shettar: ಪ್ರಧಾನಿ ಮೋದಿ ಭೇಟಿಯಾದ ಶೆಟ್ಟರ್; ಬೆಳಗಾವಿಗೆ ವಂದೇ ಭಾರತ್ ವಿಸ್ತರಣೆಗೆ ಮನವಿ
Bengaluru: 54 ಪಾಲಿಕೆ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ
Kalaburagi: ಡ್ರಗ್ಸ್ ದಂಧೆಕೋರನ ಮೇಲೆ ಕಲಬುರಗಿಯಲ್ಲಿ ಪೊಲೀಸ್ ಫೈರಿಂಗ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.