ಐಟಂ ಡ್ಯಾನ್ಸ್ ಮಾಡುತ್ತಿದ್ದವರಿಗೆ ಅವಕಾಶ ಕೊಟ್ಟಿದ್ದೇ ತಪ್ಪಾ?
Team Udayavani, Sep 28, 2017, 8:00 PM IST
“ವೈರ’ ಚಿತ್ರಕ್ಕೆ ಸೆನ್ಸಾರ್ ಮಂಡಳಿಯವರು “ಎ’ ಸರ್ಟಿಫಿಕೇಟ್ ಕೊಟ್ಟಿದ್ದಕ್ಕೆ ಆ ಚಿತ್ರದ ನಿರ್ದೇಶಕ ನವರಸನ್ ಮತ್ತು ನಿರ್ಮಾಪಕ ಧರ್ಮಶ್ರೀ ಮಂಜುನಾಥ್ ಸಿಟ್ಟಾಗಿದ್ದಾರೆ. ಅದಕ್ಕಿಂತ ಹೆಚ್ಚಾಗಿ ಅವರಿಗೆ ಚಿತ್ರದ ನಾಯಕಿ ಪ್ರಿಯಾಂಕಾ ಮಲಾ°ಡ್ ಕುರಿತು ಬೇಸರವಿದೆ. ಅದಕ್ಕೆ ಕಾರಣ ಪ್ರಿಯಾಂಕಾ ಅವರ ನಡವಳಿಕೆ.
ಯಾವಾಗ ಪ್ರಿಯಾಂಕಾ ತೋರಿಸಿದ ದೃಶ್ಯಕ್ಕೆ ಸೆನ್ಸಾರ್ನವರು “ಎ’ ಪ್ರಮಾಣಪತ್ರ ಕೊಟ್ಟರೋ, ಆಗ ಆ ಕುರಿತು ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಇದರಿಂದ ಬೇಸರಗೊಂಡ ಪ್ರಿಯಾಂಕಾ, ಚಿತ್ರತಂಡದವರ ಮೇಲೆ ಸಿಟ್ಟೆದ್ದು, ಚಿತ್ರತಂಡದಿಂದ ದೂರ ಇದ್ದಾರಂತೆ. ಅಷ್ಟೇ ಅಲ್ಲ, ಮುಂದಿನ ವಾರ ಚಿತ್ರದ ಬಿಡುಗಡೆ ಇದ್ದರೂ, ಚಿತ್ರದ ಪ್ರಚಾರದಿಂದ ದೂರವೇ ಉಳಿದಿದ್ದಾರಂತೆ. ಪ್ರಿಯಾಂಕಾ ಅವರ ನಡವಳಿಕೆಯಿಂದ ಚಿತ್ರತಂಡ ಸಿಟ್ಟಾಗಿದೆ.
ಈ ಕುರಿತು ಮಾತನಾಡುವ ನಿರ್ದೇಶಕ ನವರಸನ್, “ಆ ತರಹದ ನಟಿಯೊಬ್ಬರು ಯಾವ ಸಿನಿಮಾಗೂ ಬರಬಾರದು. ಅವರನ್ನು ಎಷ್ಟು ಚೆನ್ನಾಗಿ ನೋಡಿಕೊಂಡಿದ್ದೆವು. ನಿರ್ಮಾಪಕರು ಒಂದು ದಿನ ಆಕೆಯ ಜೊತೆಗೆ ಮಾತಾಡಿಲ್ಲ. ಆಕೆಯನ್ನು ತಮ್ಮ ಕುಟುಂಬದ ಸದಸ್ಯೆಯ ತರಹ ನೋಡಿಕೊಂಡು ಗೌರವ ಕೊಟ್ಟಿದ್ದರು. ಆದರೆ, ಆಕೆಗೆ ಯಾರೋ ಏನೋ ಹೇಳಿಕೊಟ್ಟು, ತಲೆ ಕೆಡಿಸಿದ್ದಾರೆ. ಅದೇ ಕಾರಣಕ್ಕೆ ಆಕೆ ಚಿತ್ರತಂಡದಿಂದ ದೂರವೇ ಉಳಿದಿದ್ದಾರೆ.
ಚಿತ್ರದ ಪ್ರಚಾರಕ್ಕೂ ಅವರು ಬರುತ್ತಿಲ್ಲ. ಇದಕ್ಕೂ ಮುನ್ನ ಅವರು ಒಂದೆರೆಡು ಚಿತ್ರಗಳಲ್ಲಿ ಸಣ್ಣ-ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. “ಚಿರಾಯು’ ಅನ್ನೋ ಚಿತ್ರದಲ್ಲಿ ಐಟಂ ಡ್ಯಾನ್ಸ್ ಮಾಡಿದ್ದರು. ಅವರನ್ನು ಕರೆದು ನಾಯಕಿಯಾಗುವ ಅವಕಾಶ ಕೊಟ್ಟಿದ್ದೆವು. ಅವರು ಚಿತ್ರದ ಪ್ರಚಾರಕ್ಕೆ ಸಹಕಾರ ಕೊಡಬೇಕಿತ್ತು. ನಿರ್ಮಾಪಕರಿಗೆ ಚೂರಿ ಹಾಕಬಾರದು’ ಎಂದು ಹೇಳುತ್ತಾರೆ ಅವರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.