

Team Udayavani, Feb 15, 2024, 1:55 PM IST
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ʼಟಾಕ್ಸಿಕ್ʼ ಸಿನಿಮಾದ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಬಗ್ಗೆ ಪ್ರೇಕ್ಷಕರು ದೊಡ್ಡ ನಿರೀಕ್ಷೆಯನ್ನಿಟ್ಟುಕೊಂಡಿದ್ದಾರೆ.
ಮಾಲಿವುಡ್ ನ ಗೀತು ಮೋಹನ್ ದಾಸ್ ಅವರೊಂದಿಗೆ ರಾಕಿಭಾಯ್ ಸಿನಿಮಾ ಮಾಡಲಿದ್ದಾರೆ. ಸಿನಿಮಾ ಅನೌನ್ಸ್ ಆದ ದಿನದಂದ ಹೈಪ್ ಹುಟ್ಟಿಸಿದೆ. ಪಾತ್ರವರ್ಗದ ಕುತೂಹಲ ಹೆಚ್ಚಾಗಿದೆ. ಇತ್ತೀಚೆಗೆ ಶಾರುಖ್ ಖಾನ್ ಅವರು ʼಟಾಕ್ಸಿಕ್ʼ ಸಿನಿಮಾದಲ್ಲಿ ಪ್ರಮುಖ ರೋಲ್ ವೊಂದನ್ನು ಮಾಡಲಿದ್ದಾರೆ ಎನ್ನುವ ಸುದ್ದಿಯೊಂದು ಹಬ್ಬಿತ್ತು. ಇದೀಗ ಸ್ವತಃ ಯಶ್ ಅವರೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಬುಧವಾರ(ಫೆ.14 ರಂದು) ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ʼಟಾಕ್ಸಿಕ್ʼ ಸಿನಿಮಾದ ಬಗ್ಗೆ ಮಾತನಾಡುತ್ತಾ, “ಟಾಕ್ಸಿಕ್ ಸಿನಿಮಾದಲ್ಲಿ ಶಾರುಖ್ ಖಾನ್ ನಟಿಸುವುದು ಇದುವರೆಗೆ ಅಧಿಕೃತವಾಗಿಲ್ಲ. ಸಿನಿಮಾದ ಬಗ್ಗೆ ದೊಡ್ಡಮಟ್ಟದ ಪ್ಲ್ಯಾನ್ ನಡೆಯುತ್ತಿದೆ. ಪಾತ್ರವರ್ಗದ ಮಾಹಿತಿ ಹಾಗೂ ಹೆಚ್ಚಿನ ಮಾಹಿತಿಯನ್ನು ಮುಂದಿನ ದಿನದಲ್ಲಿ ಚಿತ್ರತಂಡ ನೀಡುತ್ತದೆ” ಎಂದು ಹೇಳಿದ್ದಾರೆ.
ಗೋವಾದಲ್ಲಿನ ಡ್ರಗ್ ಕಾರ್ಟೆಲ್ ಸುತ್ತ ʼಟಾಕ್ಸಿಕ್ʼ ಕಥೆ ಸುತ್ತುತ್ತದೆ. ಬಿಗ್ ಬಜೆಟ್ ನಲ್ಲಿ ಸಿನಿಮಾ ನಿರ್ಮಾಣವಾಗಲಿದೆ. ಕೆವಿಎನ್ ಪ್ರೊಡಕ್ಷನ್ ಹಾಗೂ ಮಾನ್ ಸ್ಟಾರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ಸಿನಿಮಾವನ್ನು ನಿರ್ಮಾಣ ಮಾಡಲಿದೆ. 2025 ರ ಏಪ್ರಿಲ್ 10 ರಂದು ಸಿನಿಮಾ ತೆರೆ ಕಾಣಲಿದೆ.
Udupi: ಗೀತಾರ್ಥ ಚಿಂತನೆ-191: “ಡಿಸಿಶನ್ ಮೇಕರ್ ನೀನಲ್ಲ’ ಎಂಬ ಶ್ರೀಕೃಷ್ಣ
Udupi: ಗ್ಯಾರಂಟಿಯಿಂದ ಜನರ ಆರ್ಥಿಕ ಸ್ಥಿತಿ ವೃದ್ಧಿ: ಎಚ್.ಎಂ. ರೇವಣ್ಣ
Mangaluru: ಪಿಡಬ್ಲ್ಯುಡಿ ಆಸ್ತಿ ಮೂಲಕ ಆದಾಯ ಗಳಿಕೆ: ಸಚಿವ ಸತೀಶ್ ಜಾರಕಿಹೊಳಿ
Mangaluru: ವಿದ್ಯುತ್ ದರ ಏರಿಕೆಗೆ ಪ್ರಸ್ತಾವ; ಗ್ರಾಹಕರಿಂದ ಆಕ್ಷೇಪ
Bhubaneswar: ನೇಪಾಲಿ ವಿದ್ಯಾರ್ಥಿನಿ ಆತ್ಮಹ*ತ್ಯೆ, ಭಾರೀ ಪ್ರತಿಭಟನೆ
You seem to have an Ad Blocker on.
To continue reading, please turn it off or whitelist Udayavani.