ಚಿತ್ರ ಒಪ್ಪೋದು ಮುಖ್ಯವಲ್ಲ; ಬಿಡುಗಡೆಯಾಗೋದು ಮುಖ್ಯ; ಸೋನು

Team Udayavani, Mar 27, 2018, 2:54 PM IST

Sonu-1.jpg

ಸೋನು ಚಿತ್ರರಂಗಕ್ಕೆ ಬಂದು ಹತ್ತು ವರ್ಷವಾಗಿದೆ. ಈ ಹತ್ತು ವರ್ಷದಲ್ಲಿ ಅವರು ನಟಿಸಿರುವ ಸಿನಿಮಾಗಳ ಸಂಖ್ಯೆ 20ರ ಅಸುಪಾಸಿನಲ್ಲಿದೆ. ಈ ಹತ್ತು ವರ್ಷಗಳಲ್ಲಿ ಸೋನು ಸಾಕಷ್ಟು ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದಾರೆ ಕೂಡಾ.  ಸದ್ಯ ಸೋನು ನಟಿಸಿರುವ ಸಿನಿಮಾವೊಂದು ಈ ವಾರ  ಬಿಡುಗಡೆಯಾಗುತ್ತಿದೆ. ಅದು “ಗುಳ್ಟು’.  ಇದೊಂದು ಇಂಟರ್‌ನೆಟ್‌ ಸಂಬಂಧಿತ ಕಥೆ. ಇವತ್ತು ಆನ್‌ಲೈನ್‌ ಕ್ರೈಮ್‌ ಹೆಚ್ಚಾಗುತ್ತಿದ್ದು, ಆ ವಿಷಯವನ್ನಿಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ಚಿತ್ರದಲ್ಲಿ ಸೋನು ಅವರಿಗೂ ವಿಭಿನ್ನ ಪಾತ್ರ ಸಿಕ್ಕಿದೆಯಂತೆ. ಅದು ನಟನೆಗೆ ಹೆಚ್ಚು ಅವಕಾಶವಿರುವ ಪಾತ್ರ. ಇನ್ನು, ಚಿತ್ರದ ಹಾಡು ಹಾಗೂ ಟ್ರೇಲರ್‌ಗೆ ಮೆಚ್ಚುಗೆ ವ್ಯಕ್ತವಾಗಿರುವುದರಿಂದ ಸೋನುಗೆ ಪ್ರೇಕ್ಷಕರು ಸಿನಿಮಾವನ್ನು ಸ್ವೀಕರಿಸುವ ವಿಶ್ವಾಸವಿದೆ. 

 ಇನ್ನು, ನಟಿ ಸೋನುಗೆ ಚಿತ್ರರಂಗದ 10 ವರ್ಷದ ಜರ್ನಿ ಖುಷಿ ಕೊಟ್ಟಿದೆಯಂತೆ. ಅದರ ಬಗ್ಗೆಯೂ ಖುಷಿಯಿಂದ ಮಾತನಾಡುತ್ತಾರೆ ಸೋನು, “ಕೆಲವು ನಟಿಯರಂತೆ ನಾನು ಚಿತ್ರರಂಗದಲ್ಲಿ ತುಂಬಾ ಕಷ್ಟಪಟ್ಟಿಲ್ಲ. ಏಕೆಂದರೆ, ನಮ್ಮ ತಂದೆ ಚಿತ್ರರಂಗದಲ್ಲೇ ಇದ್ದವರಾದ್ದರಿಂದ ಆರಂಭ ಸುಲಭವಾಯಿತು.

ಚಿತ್ರರಂಗದ ಒಳಹರಿವು ಕೂಡಾ ತಕ್ಕಮಟ್ಟಿಗೆ ಗೊತ್ತಿತ್ತು. ಆದರೆ, ನಟಿಯಾಗಿ ನನ್ನ ಸಾಮರ್ಥ್ಯ ಸಾಬೀತುಮಾಡಿಕೊಳ್ಳುವ ಸವಾಲು ನನ್ನ ಮೇಲಿತ್ತು. ಅಲ್ಲಿ ಯಾವ ಪ್ರಭಾವ, ಪರಿಚಯ ನಡೆಯೋದಿಲ್ಲ. ಆ ನಿಟ್ಟಿನಲ್ಲಿ ನಾನು ಒಳ್ಳೆಯ ಸಿನಿಮಾಗಳನ್ನು ಆಯ್ಕೆ ಮಾಡಲು ಪ್ರಯತ್ನಪಟ್ಟೆ. ಹಾಗಂತ ನಾವು ಆಯ್ಕೆ ಮಾಡಿದ ಸಿನಿಮಾಗಳೆಲ್ಲವೂ ನಮ್ಮ ಸಾಮರ್ಥ್ಯವನ್ನು ಎತ್ತಿ ತೋರಿಸುತ್ತವೆ ಎನ್ನುವಂತಿಲ್ಲ. ಅಲ್ಲಿ ನಿರ್ದೇಶಕರ ಕಲ್ಪನೆ ಕೂಡಾ ಮುಖ್ಯವಾಗುತ್ತದೆ. ಆ ನಿಟ್ಟಿನಲ್ಲಿ ನಾನು ನಟಿಸಿದ ಸಿನಿಮಾಗಳ ಬಗ್ಗೆ ಖುಷಿ ಇದೆ. ಸಹಜವಾಗಿಯೇ ಕೆಲವು ಕಡೆ ಎಡವಿದ್ದೇನೆ. ಅದೊಂದು ಪಾಠ ಎಂದುಕೊಂಡು ಮುಂದೆ ಸಾಗಿದ್ದೇನೆ’ ಎಂದು ತಮ್ಮ ಕೆರಿಯರ್‌ ಬಗ್ಗೆ ಹೇಳುತ್ತಾರೆ ಸೋನು. 

ಮೊದಲೇ ಹೇಳಿದಂತೆ ಸೋನು ಇಷ್ಟು ವರ್ಷಗಳಲ್ಲಿ ನಟಿಸಿದ್ದು ಕೇವಲ 18 ಚಿತ್ರಗಳಲ್ಲಿ ಮಾತ್ರ. ಯಾಕೆ ಎಂದು ನೀವು ಕೇಳಬಹುದು. ಅದಕ್ಕೂ ಸೋನು ಉತ್ತರಿಸುತ್ತಾರೆ. “ನಾನೊಂದು ತಮಿಳು ಸಿನಿಮಾ ಒಪ್ಪಿಕೊಂಡಿದ್ದೆ ಮತ್ತು ಆ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಕೂಡಾ ಇಟ್ಟುಕೊಂಡಿದ್ದೆ. 

ಆದರೆ, ಆ ಸಿನಿಮಾ ಅರ್ಧಕ್ಕೆ ನಿಂತು ಹೋಯಿತು. ಆಗ ನನಗೆ ಒಂದು ಮನದಟ್ಟಾಯಿತು, ಒಂದು ಸಿನಿಮಾಕ್ಕೆ ನಿರ್ಮಾಪಕರು ಎಷ್ಟು ಮುಖ್ಯ ಎಂದು. ಅಂದಿನಿಂದ ನಾನು ತುಂಬಾ ಚೂಸಿಯಾಗುತ್ತಾ ಹೋದೆ. ಸಿನಿಮಾ ಆರಂಭಿಸೋದು ಮುಖ್ಯವಲ್ಲ, ಅದನ್ನು ಬಿಡುಗಡೆ ಮಾಡೋದು ಕೂಡಾ ಅಷ್ಟೇ ಮುಖ್ಯ. ಆ ಸಾಮರ್ಥ್ಯ ಚಿತ್ರತಂಡಕ್ಕಿದೆಯಾ ಎಂದು ನೋಡಿಯೇ ಸಿನಿಮಾ ಒಪ್ಪಿಕೊಳ್ಳುತ್ತೇನೆ. ಇಷ್ಟು ವರ್ಷದ ಕೆರಿಯರ್‌ ನನಗೆ ಖುಷಿಕೊಟ್ಟಿದೆ’ ಎನ್ನುವುದು ಸೋನು ಮಾತು.  

ಟಾಪ್ ನ್ಯೂಸ್

1-horoscope

Daily Horoscope: ವಧೂವರಾನ್ವೇಷಿಗಳಿಗೆ ಯಶಸ್ಸಿನ ಭರವಸೆ, ಸ್ವರ್ಣೋದ್ಯಮಿಗಳಿಗೆ ಹೇರಳ ಲಾಭ

Child-care

Child Care: ಶಿಶು ಮರಣ ತಗ್ಗಿಸಲು ಮನೆಮಟ್ಟದ ಎಳೆ ಮಕ್ಕಳ ಆರೈಕೆ!

ರಾಜ್ಯದಲ್ಲಿ ಕೇರಳದ ಅಸುರಕ್ಷಿತ ಕುರುಕಲು ತಿಂಡಿ ಮಾರಾಟ

ರಾಜ್ಯದಲ್ಲಿ ಕೇರಳದ ಅಸುರಕ್ಷಿತ ಕುರುಕಲು ತಿಂಡಿ ಮಾರಾಟ

NIA: ರಾಮೇಶ್ವರಂ ಕೆಫೆ ಸ್ಫೋಟ ಉಗ್ರ ಪಾಕ್‌ನಲ್ಲಿ: ಎನ್‌ಐಎಗೆ ಸುಳಿವು

NIA: ರಾಮೇಶ್ವರಂ ಕೆಫೆ ಸ್ಫೋಟ ಉಗ್ರ ಪಾಕ್‌ನಲ್ಲಿ: ಎನ್‌ಐಎಗೆ ಸುಳಿವು

Sukhu

Himachal Pradesh; ಸಿಎಂಗೆ ತಂದಿದ್ದ ಸಮೋಸಾ ಮಾಯ: ಸಿಐಡಿ ತನಿಖೆ?

ಸೀಟ್‌ ಬ್ಲಾಕಿಂಗ್‌ ದಂಧೆ ವಿರುದ್ಧ ಕ್ರಿಮಿನಲ್‌ ಕೇಸ್‌ ಅಸ್ತ್ರ : ಸಚಿವ

Minister Sudhakar: ಸೀಟ್‌ ಬ್ಲಾಕಿಂಗ್‌ ದಂಧೆ ವಿರುದ್ಧ ಕ್ರಿಮಿನಲ್‌ ಕೇಸ್‌ ಅಸ್ತ್ರ

Donald-Trumph

Trump ಗೆಲ್ಲುತ್ತಿದ್ದಂತೆ ಅಮೆರಿಕ ತೊರೆಯಲು ಜನರಿಂದ ಭರದ ಸಿದ್ಧತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rakesh Adiga in Maryade Prashne movie

Rakesh Adiga: ನಾನು ಮಿಡಲ್‌ ಕ್ಲಾಸ್‌ ಹುಡುಗ ಮರ್ಯಾದೆ ಉಳಿಸಿ!

ಮುರಳಿಗೆ ಮತ್ತೆ ಗೆಲುವಾಗಿದೆ..: ಗೆದ್ದು ನಕ್ಕ ʼಬಘೀರʼ

Bagheera: ಮುರಳಿಗೆ ಮತ್ತೆ ಗೆಲುವಾಗಿದೆ..: ಗೆದ್ದು ನಕ್ಕ ʼಬಘೀರʼ

Bhairathi Ranagal; ಶಿವಣ್ಣ ಡ್ರೀಮ್‌ ಪ್ರಾಜೆಕ್ಟ್ ಭೈರತಿ ಮೈಲುಗಲ್‌!

Bhairathi Ranagal; ಶಿವಣ್ಣ ಡ್ರೀಮ್‌ ಪ್ರಾಜೆಕ್ಟ್ ಭೈರತಿ ಮೈಲುಗಲ್‌!

Sandalwood: ಫ್ಯಾಮಿಲಿ ಡ್ರಾಮಾದಲ್ಲಿ ಸಂತೋಷ ಸಂಗೀತ

Sandalwood: ಫ್ಯಾಮಿಲಿ ಡ್ರಾಮಾದಲ್ಲಿ ಸಂತೋಷ ಸಂಗೀತ

BBK11: ಎದ್ದು ಬಿದ್ದು ಟಾಸ್ಕ್ ಸೋತ ಹನುಮಂತು: ರಿಯಲ್ ಹುಲಿ ನೀವೇ ಎಂದ ಸಹಸ್ಪರ್ಧಿ

BBK11: ಎದ್ದು ಬಿದ್ದು ಟಾಸ್ಕ್ ಸೋತ ಹನುಮಂತು: ರಿಯಲ್ ಹುಲಿ ನೀವೇ ಎಂದ ಸಹಸ್ಪರ್ಧಿ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-horoscope

Daily Horoscope: ವಧೂವರಾನ್ವೇಷಿಗಳಿಗೆ ಯಶಸ್ಸಿನ ಭರವಸೆ, ಸ್ವರ್ಣೋದ್ಯಮಿಗಳಿಗೆ ಹೇರಳ ಲಾಭ

Child-care

Child Care: ಶಿಶು ಮರಣ ತಗ್ಗಿಸಲು ಮನೆಮಟ್ಟದ ಎಳೆ ಮಕ್ಕಳ ಆರೈಕೆ!

ರಾಜ್ಯದಲ್ಲಿ ಕೇರಳದ ಅಸುರಕ್ಷಿತ ಕುರುಕಲು ತಿಂಡಿ ಮಾರಾಟ

ರಾಜ್ಯದಲ್ಲಿ ಕೇರಳದ ಅಸುರಕ್ಷಿತ ಕುರುಕಲು ತಿಂಡಿ ಮಾರಾಟ

NIA: ರಾಮೇಶ್ವರಂ ಕೆಫೆ ಸ್ಫೋಟ ಉಗ್ರ ಪಾಕ್‌ನಲ್ಲಿ: ಎನ್‌ಐಎಗೆ ಸುಳಿವು

NIA: ರಾಮೇಶ್ವರಂ ಕೆಫೆ ಸ್ಫೋಟ ಉಗ್ರ ಪಾಕ್‌ನಲ್ಲಿ: ಎನ್‌ಐಎಗೆ ಸುಳಿವು

Sukhu

Himachal Pradesh; ಸಿಎಂಗೆ ತಂದಿದ್ದ ಸಮೋಸಾ ಮಾಯ: ಸಿಐಡಿ ತನಿಖೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.