ಇದು ನನ್ನ ದಿನವಲ್ಲ: ಅಭಿಮಾನಿಗಳ ದಿನ
Team Udayavani, Feb 16, 2017, 11:30 AM IST
ರಾಜರಾಜೇಶ್ವರಿ ನಗರದ ಮುಖ್ಯ ರಸ್ತೆಯಿಂದಲೇ ವಿನೈಲ್‌ಗಳು. ಮರ, ಕಂಬ, ಗೋಡೆ … ಎಲ್ಲೆಲ್ಲಿ ಜಾಗ ಸಿಗುತ್ತದೋ, ಅಲ್ಲೆಲ್ಲಾ ದರ್ಶನ್ ಅವರ್ತಿಗೆ ಶುಭ ಕೋರುವ ಪೋಸ್ಟರ್‌ಗಳು, ವಿನೈಲ್‌ಗಳು ಕಾಣಿಸುತ್ತಿವೆ. ಅದಕ್ಕೆ ಕಾರಣ ಇಂದು ದರ್ಶನ್ ಅವರ ಹುಟ್ಟುಹಬ್ಬ. ಪ್ರತಿ ವರ್ಷ ತಮ್ಮ ಮೆಚ್ಚಿನ ನಟನ ಹುಟ್ಟುಹಬ್ಬವನ್ನು ದೊಡ್ಡ ಮಟ್ಟದಲ್ಲಿ ಆಚರ್ತಿಸುತ್ತಾ ಬಂದಿರುವ ಅಭಿಮಾನಿಗಳು, ಈ ಬಾರ್ತಿ ಸಹ ಅದೇ ತರಹ ಪ್ಲಾನ್ ಮಾಡಿಕೊಂಡಿದ್ದಾರೆ.
ರಾತ್ರಿಯಿಂದಲೇ ಅಭಿಮಾನಿಗಳು ದರ್ಶನ್ ಅವರ ಮನೆ ಮುಂದೆ ಜಮಾಯಿಸುವುದಕ್ಕೆ ಶುರು ಮಾಡಿದ್ದಾರೆ. ಕೇಕುಗಳು, ಗಿಫುrಗಳನ್ನು ಹಿಡಿದು ತಮ್ಮ ಮೆಚ್ಚಿನ ನಟನಿಗೆ ಕೊಡುವುದಕ್ಕೆ ತಯಾರಾಗಿ ನಿಂತಿದ್ದಾರೆ. ಈ ಹುಟ್ಟುಹಬ್ಬದ ಸಂದರ್ಭದಲ್ಲಿ, ದರ್ಶನ್ ಅವರನ್ನು ಮಾತನಾಡಿಸಲಾಯಿತು. “ಬಾಲ್ಕನಿ’ಯ ಜೊತೆಗೆ ದರ್ಶನ್ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.
* ಈ ವರ್ಷ ಹುಟ್ಟುಹಬ್ಬದ ವಿಶೇಷ?
ವಿಶೇಷ ಏನೂ ಇಲ್ಲ. ಈ ವರ್ಷ ಸಹ ಅಭಿಮಾನಿಗಳ ಜೊತೆಗೆ ಹುಟ್ಟುಹಬ್ಬ ನಡೆಯುತ್ತೆ. ಮನೆ ಬಿಟ್ಟು ಎಲ್ಲೂ ಹೋಗುವುದಿಲ್ಲ. ಇವತ್ತು ಯಾರು ಕರೆದ್ರೂ ಹೋಗಲ್ಲ. ಏಕೆಂದರೆ, ಇದು ಅಭಿಮಾನಿಗಳ ದಿನ. ಅಭಿಮಾನಿಗಳು ಎಲ್ಲೆಲ್ಲಿಂದಲೋ ಬಂದಿರ್ತಾರೆ. ಅವರ ಜೊತೆಗೆ ಇರೋದಷ್ಟೇ ನಮ್ಮ ಕೆಲಸ.
* ಮೊನ್ನೆಗೆ “ಮೆಜೆಸ್ಟಿಕ್’ ಬಿಡುಗಡೆಯಾಗಿ 15 ವರ್ಷ ಆಯ್ತು. ಹೇಗಿತ್ತು ಈ ಪಯಣ?
ಎಲ್ಲಾ ಗೊತ್ತೇ ಇದೆಯಲ್ಲ. ಏನು ಅಂತಹ ಬದಲಾವಣೆ ಆಗಿಲ್ಲ. ಸ್ವಲ್ಪ ನಡವಳಿಕೆ ಬದಲಾಗಿರಬಹುದು. ಅದು ಬಿಟ್ಟು, ಇನ್ನೇನೂ ಅಂತಹ ಬದಲಾವಣೆ ಆಗಿಲ್ಲ. ಒಬ್ಬ ಕಲಾವಿದನಾಗಿ ಖುಷಿ ಇರೋದಿಲ್ಲ. ಇದು ನನ್ನೊಬ್ಬನ ವಿಷಯವಲ್ಲ. ಯಾವ ಕಲಾವಿದನೇ ಆಗಲಿ, ಮಣ್ಣಿಗೆ ಹೋಗುವವರೆಗೂ ಖುಷಿ ಇರುವುದಿಲ್ಲ. ಇನ್ನೂ ಏನಾದರೂ ಹೊಸತು ಸಿಗುತ್ತೇನೋ ಅಂತ ಕಾಯ್ತಲೇ ಇರ್ತೇವೆ. ನಂಗೂ ಅಷ್ಟೇ.
* “ಚಕ್ರವರ್ತಿ’ ಕನ್ನಡದ ದೊಡ್ಡ ಬಜೆಟ್‌ನ ಚಿತ್ರವಾಗಿರುತ್ತದಾ?
ಬಜೆಟ್ ತೊಗೊಂಡು ಏನ್ಮಾಡ್ತೀರಾ. ಈ ಬಜೆಟ್, ಕಲೆಕ್ಷನ್ ವಿಚಾರದಲ್ಲಿ ಯಾರಾದರೂ ಸರ್ತಿಯಾಗಿ ಲೆಕ್ಕ ಕೊಡ್ತಾರಾ? 10 ರೂಪಾಯಿ ಆದರೆ, 25 ರೂಪಾಯಿ ಅಂತಾರೆ. ಎಷ್ಟೋ ಬಾರ್ತಿ ಕಲೆಕ್ಷನ್ ಬಗ್ಗೆ ಸುದ್ದಿಗಳನ್ನ ಓದುತ್ತಿದ್ದರೆ ನಗು ಬರತ್ತೆ. ಅದು ಫೇಕ್ ಅಂತ ಗೊತ್ತಿರತ್ತೆ. ಎಷ್ಟೋ ಬಾರ್ತಿ ನನ್ನ ಸಿನಿಮಾ ರ್ತಿಪೋರ್ಟು ನೋಡಿಯೇ ನಗು ಬರತ್ತೆ. ನನಗೆ ಅದರಲ್ಲೆಲ್ಲಾ ನಂಬಿಕೆ ಇಲ್ಲ. ಚಿತ್ರಕ್ಕೆ ಹಣ ಹಾಕಿದ ನಿರ್ಮಾಪಕ ಮತ್ತು ವಿತರಕ ಚೆನ್ನಾಗಿರಬೇಕು ಅಂತಷ್ಟೇ ನನ್ನ ಉದ್ದೇಶ.
* ಮುಂದೇನು?
ಮೊದಲು “ಮಿಲನ’ ಪ್ರಕಾಶ್ ಅವರ “ತಾರಕ್’ ಚಿತ್ರದಲ್ಲಿ ನಟಿಸುತ್ತಿದ್ದೀನಿ. ಅದು ನನ್ನ 49ನೇ ಚಿತ್ರ. ಅದಾದ ಮೇಲೆ ತರುಣ್ ಸುಧೀರ್ ನಿರ್ದೇಶನದಲ್ಲಿ ಇನ್ನೊಂದು ಚಿತ್ರ. ಅದು 50ನೇ ಚಿತ್ರವಾಗಲಿದೆ. ಆಮೇಲೆ ಗೊತ್ತಿಲ್ಲ. 15 ವರ್ಷಗಳಲ್ಲಿ 50 ಸಿನಿಮಾ ಆಗಿದೆ. ಇನ್ನು ಮುಂದಿನ 15 ವರ್ಷಗಳಲ್ಲಿ, 10-15 ಸಿನಿಮಾಗಳ್ಳೋದೂ ಸಂಶಯ. ಯಾಕೆ ಅಂದರೆ, ಬೇರೆ ಭಾಷೆಗಳಲ್ಲಿ ಕ್ವಾಲಿಟಿ ಸಿನಿಮಾಗಳು ಬರುತ್ತಿವೆ. ಅದಕ್ಕೆ ತುಂಬಾ ದಿನ ಬೇಕು. ಇಲ್ಲೂ ಸಹ ಜನ ನಿರೀಕ್ಷೆ ಮಾಡ್ತಾರೆ. ಹಾಗೆ ಕ್ವಾಲಿಟಿ ಸಿನಿಮಾ ಕೊಡಬೇಕು ಅಂದ್ರೆ, ಸಹಜವಾಗಿಯೇ ತಡವಾಗುತ್ತೆ.
* 50ನೇ ಚಿತ್ರ “ಸರ್ವಾಂತರ್ಯಾಮಿ’ ಆಗಬೇಕಿತ್ತಲ್ಲಾ?
ಎಲ್ಲಾ ಡಿಮಾನಟೈಸೇಷನ್ ಕೃಪೆ. ಆ ಚಿತ್ರದ ಕಥೆ ರೆಡಿಯಾಗಿದೆ. ಬಜೆಟ್ ಸ್ವಲ್ಪ ಜಾಸ್ತಿ. ಮುಂಚೆ ಆಗಿದ್ದರೆ ಯಾರ್ತಿಂದಾದರೂ ಮಾಡಿಸಬಹುದಿತ್ತು. ಈಗ ಯಾರನ್ನ ಕೇಳಿದರೂ, ಸ್ವಲ್ಪ ದಿನವಾಗಲೀ ಅಂತಿದ್ದಾರೆ. ಹಾಗಾಗಿ ನಾವು ಕಾಯ್ತಾ ಇದ್ದೀವಿ. ಇವೆರೆಡು ಸಿನಿಮಾಗಳನ್ನು ಮುಗಿಸಿ, ಆಮೇಲೆ ನೋಡಬೇಕು.
* ಹೊಸದಾಗೇನಾದರೂ ಕಥೆ ಕೇಳಿದ್ದುಂಟಾ?
ಖಂಡಿತಾ ಇಲ್ಲ. ನಾನು ಮುಂಚೆಯೇ ಕಥೆ ಕೇಳಲ್ಲ. ಏಕೆಂದರೆ, ನಾನು ಈಗ ಕಥೆ ಕೇಳಿ, ಯಾವಾಗ ಮಾಡ್ತೀನಿ ಗೊತ್ತಿಲ್ಲ. ಈಗ ಕ್ಯೂನಲ್ಲಿ ಒಂದಿಷ್ಟು ಜನ ಇದ್ದಾರೆ ಮತ್ತು ಆ ಕ್ಯೂ ಪ್ರಕಾರ ಸಿನಿಮಾ ಮಾಡಿಕೊಂಡು ಬರ್ತಿದ್ದೀನಿ. ನಾನು ಈಗ ಕಥೆ ಕೇಳಿ ಮೂರು ವರ್ಷ ಬಿಟ್ಟು ಸಿನಿಮಾ ಮಾಡಿದರೆ ಕಥೆ ಹಳಿಸಿರುತ್ತೆ. ಅಷ್ಟೇ ಅಲ್ಲ, ಕಥೆ ಕೇಳಿಬಿಟ್ಟರೆ, ತಕ್ಷಣ ಸಿನಿಮಾ ಮಾಡಬೇಕು ಅಂತ ನಿರೀಕ್ಷೆ ಮಾಡ್ತಾರೆ. ಆಗ ಸರದಿಯಲ್ಲಿ ನಿಂತಿರುವವರ ಕಥೆ ಏನು? ಅದೇ ಕಾರಣಕ್ಕೆ ನಾನು ಕಥೆ ಕೇಳಲ್ಲ. ಸರದಿ ಪ್ರಕಾರ ಕೇಳಿ ಮುಂದುವರೆಯುತ್ತೇನೆ. ನಾನು ಮೊದಲು ಕೇಳ್ಳೋದು ಡೇಟು ಮತ್ತು ರೇಟು ಮಾತ್ರ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.