70 ಪೈಸೆ ಕೊಟ್ಟು ಬಂಗಾರದ ಪಂಜರ ಸಿನ್ಮಾ ನೋಡಿದ ಕಥೆ ಬಿಚ್ಚಿಟ್ಟ ಜಗ್ಗೇಶ್
Team Udayavani, May 11, 2020, 12:19 PM IST
ತಾವು ಚಿಕ್ಕವರಾಗಿದ್ದಾಗ ಕೇವಲ 70 ಪೈಸೆ ಕೊಟ್ಟು ಅಣ್ಣಾವ್ರ ಅಭಿನಯದ ಬಂಗಾರದ ಪಂಜರ ಸಿನಿಮಾ ನೋಡಿದ ಕಥೆಯನ್ನು ನವರಸ ನಾಯಕ ಜಗ್ಗೇಶ್ ಅವರು ನೆನಪಿಸಿಕೊಂಡಿದ್ದಾರೆ.
ಕೋವಿಡ್ ಲಾಕ್‌ಡೌನ್ ನಡುವೆ ಮನೆಯಲ್ಲೇ ಉಳಿದಿರುವ ಜಗ್ಗೇಶ್ ಅವರು, ತಮ್ಮ ಪತ್ನಿ, ಮಕ್ಕಳು, ಮೊಮ್ಮಕ್ಕಳ ಜೊತೆ ಕಾಲಕಳೆಯುತ್ತಿದ್ದಾರೆ. ಜೊತೆಗೆ ಎಂದಿನಂತೆ ಅವರು ತಮ್ಮ ಟ್ವಿಟ್ಟರ್ ನಲ್ಲಿ ಸಕ್ರಿಯವಾಗಿ ಇದ್ದಾರೆ. ನನ್ನ ತಾತನೇ ನನ್ನ ಮೊಮ್ಮಗನಾಗಿ ಹುಟ್ಟಿದ್ದಾನೆ ಎಂದು ಟ್ವೀಟ್ ಮಾಡಿದ್ದರು. ಈಗ ತಮ್ಮ ತಾತ ಜೊತೆ ಸಿನಿಮಾ ನೋಡಿದ ಕಥೆಯೊಂದನ್ನು ಹೇಳಿಕೊಂಡಿದ್ದಾರೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಜಗ್ಗೇಶ್ ಅವರು, ಬಂಗಾರದ ಪಂಜರ 1974ರಲ್ಲಿ ತೆರೆಕಂಡಾಗ ನನಗೆ 11 ವರ್ಷ ವಯಸ್ಸು. ತಾತ ಮಾಯಸಂದ್ರದಿಂದ ಬಂದು ನನಗೆ ಈ ಚಿತ್ರ ತೋರಿಸಿದ್ದರು. ಗೀತಾಂಜಲಿ ಚಿತ್ರಮಂದಿರ 70ಪೈಸೆ ಕೊಟ್ಟು ಮುಂದಿನ ಬೆಂಚಿನಲ್ಲಿ ಕುಳಿತು ಮೈಮರೆತು ಕೇಕೆಹಾಕಿ ಸಿನಿಮಾ ನೋಡುತ್ತಿದ್ದ ಕಾಲ ಅದು. ಇದೇ ಚಿತ್ರವನ್ನು ನಾನು ನಟನಾದ ಮೇಲೆ 1995ರಲ್ಲಿ ಕಥೆ ಸ್ವಲ್ಪ ಬದಲು ಮಾಡಿ ಪಟ್ಟಣಕ್ಕೆ ಬಂದ ಪುಟ್ಟ ಸಿನಿಮಾ ಮಾಡಿ ನಾನು ಅದರಲ್ಲಿ ನಟಿಸಿದ್ದೆ. ಈ ಸಿನಿಮಾ ಮೆಗಾ ಹಿಟ್ ಆಯಿತು. ಇಂದು ಈ ಚಿತ್ರದಿಂದ ಅಮರ ಹಳೆ ನೆನಪು ಎಂದು ಬರೆದುಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.