8 ಎಂಎಂಗೆ ಜಗ್ಗೇಶ್‌ ಸಾಹಿತ್ಯ


Team Udayavani, Oct 30, 2017, 10:27 AM IST

8mm.jpg

ನಟರು ತಮ್ಮ ಸಿನಿಮಾಗಳಿಗೆ ಅಥವಾ ಬೇರೆಯವರ ಸಿನಿಮಾಗಳಿಗೆ ಹಾಡುವುದು, ಹಿನ್ನೆಲೆ ಧ್ವನಿ ಕೊಡೋದು ಹೊಸದಲ್ಲ. ಆದರೆ, ಸಾಹಿತ್ಯ ಬರೆಯುವ ನಟರು ಸದ್ಯ ಕಡಿಮೆ ಎಂದರೆ ತಪ್ಪಲ್ಲ. ಆದರೆ, ಜಗ್ಗೇಶ್‌ ಈಗ ಸಿನಿಮಾವೊಂದಕ್ಕೆ ಹಾಡು ಬರೆದಿದ್ದಾರೆ. ಅದು “8ಎಂಎಂ’ ಚಿತ್ರಕ್ಕೆ.

ಹೌದು, ಜಗ್ಗೇಶ್‌ ಅವರು “8ಎಂಎಂ’ ಎಂಬ ಸಿನಿಮಾದಲ್ಲಿ ನಟಿಸುತ್ತಿರುವ ವಿಚಾರ ನಿಮಗೆ ಗೊತ್ತೇ ಇದೆ. ಈಗಾಗಲೇ ಮುಹೂರ್ತವಾದ ಚಿತ್ರ, ಬಹುತೇಕ ಚಿತ್ರೀಕರಣ ಕೂಡಾ ಮುಗಿಸಿದೆ. ಈಗ ಚಿತ್ರಕ್ಕೆ ಸಾಹಿತ್ಯವೊಂದನ್ನು ಜಗ್ಗೇಶ್‌ ಬರೆದಿದ್ದಾರೆ. ಅದು ಕ್ಲೈಮ್ಯಾಕ್ಸ್‌ ಸಾಂಗ್‌ ಎಂಬುದು ವಿಶೇಷ. “ಬದುಕು ಒಂದು ಯುದ್ಧ ಭೂಮಿ ಕದನ ಮಾಡಿ ಗೆಲ್ಲು…ಸೋಲು ಗೆಲುವು, ಸಾವು-ನೋವು ಲೆಕ್ಕ ಬಿಟ್ಟು ನಿಲ್ಲು …’ ಎಂದು ಈ ಹಾಡು ಆರಂಭವಾಗುತ್ತದೆ. 

ಈ ವಿಷಯವನ್ನು ಜಗ್ಗೇಶ್‌ ಟ್ವೀಟರ್‌ ಮೂಲಕ ಹಂಚಿಕೊಂಡಿದ್ದಾರೆ ಕೂಡಾ. “8 ಎಂಎಂ ಚಿತ್ರದ ಕ್ಲೈಮ್ಯಾಕ್ಸ್‌ ಹಾಡಿಗೆ ನನ್ನ ಸಾಹಿತ್ಯ. ಇಷ್ಟು ದಿನ ಪರರಿಗಾಗಿ ಎಲ್ಲಾ ಮಾಡಿ ಎಲೆ ಮರೆಕಾಯಿಯಂತೆ ಬಾಳುತ್ತಿದ್ದೆ. ಇನ್ನು ಮುಂದೆ ನನ್ನ ಶ್ರಮ ನನ್ನ ಫ‌ಲವಾಗಲಿ’ ಎಂದು ಟ್ವೀಟ್‌ ಮಾಡುವ ಮೂಲಕ ಮುಂದಿನ ದಿನಗಳಲ್ಲೂ ತಮಗೆ ಇಷ್ಟವಾದ ಸನ್ನಿವೇಶಗಳಿಗೆ ಸಾಹಿತ್ಯ ಬರೆಯುವ ಸುಳಿವನ್ನು ಜಗ್ಗೇಶ್‌ ನೀಡಿದ್ದಾರೆ. 

“8 ಎಂಎಂ’ ಚಿತ್ರದಲ್ಲಿ ಜಗ್ಗೇಶ್‌ ಅವರ ಗೆಟಪ್‌ ಕೂಡಾ ವಿಭಿನ್ನವಾಗಿದೆ. ಇದು ಒಬ್ಬ ಕ್ರಿಮಿನಲ್‌ ಮತ್ತು ಪೊಲೀಸ್‌ ನಡುವಿನ ಮೈಂಡ್‌ ಗೇಮ್‌ ಕುರಿತ ಚಿತ್ರ. ಈ ಕಥೆಯನ್ನು ಜಗ್ಗೇಶ್‌ ಅವರ ವಯಸ್ಸಿನಲ್ಲೇ ತೋರಿಸುತ್ತಿದ್ದಾರಂತೆ. ನೆಗೆಟಿವ್‌ ಪಾತ್ರವಾದರೂ ಅಂತಾರಾದ್ಮದಲ್ಲಿ ಮಾನವೀಯ ಮೌಲ್ಯವಿರುವಂತಹ ಪಾತ್ರವಾದ್ದರಿಂದ ಜಗ್ಗೇಶ್‌ ಖುಷಿಯಿಂದ ಒಪ್ಪಿದರಂತೆ.

ಈ ಚಿತ್ರದ ಮೂಲಕ ಅವರಿಗೆ ಚೇಂಜ್‌ ಓವರ್‌ ಕೂಡಾ ಸಿಕ್ಕಿದೆಯಂತೆ.  ಚಿತ್ರವನ್ನು ಹರಿಕೃಷ್ಣ ಎನ್ನುವವರು ನಿರ್ದೇಶಿಸುತ್ತಿದ್ದು, ನಾರಾಯಣ ಸ್ವಾಮಿ ಇನ್ಫೆಂಟ್‌ ಪ್ರದೀಪ್‌, ಸಲೀಮ್‌ ಶಾ ನಿರ್ಮಾಪಕರು. ಚಿತ್ರಕ್ಕೆ ವಿನ್ಸೆಂಟ್‌ ಛಾಯಾಗ್ರಹಣ, ಜೂಡಾ ಸ್ಯಾಂಡಿ ಸಂಗೀತವಿದೆ.

ಟಾಪ್ ನ್ಯೂಸ್

1-reee

BJP; 50 ಅಲ್ಲ ,100 ಕೋಟಿ ರೂ. ಆಮಿಷ: ಶಾಸಕ ರವಿ ಗಣಿಗ!

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

School-Chikki

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Sagara-Autrity

Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kiran Raj will be a superhero in next film

Kiran Raj: ಸೂಪರ್‌ ಹೀರೋ ಆಗಲಿದ್ದಾರೆ ಕಿರಣ್‌ ರಾಜ್‌

Daali dhananjay starrer Zebra movie

Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್‌ ಸಾಥ್‌

priyanka upendra in life is beautiful movie

Priyanka Upendra: ಬ್ಯೂಟಿಫುಲ್‌ ಲೈಫ್‌ ನಲ್ಲಿ ಪ್ರಿಯಾಂಕಾ

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Gowri Shankara: ಸೆಟ್ಟೇರಿತು ಹೊಸಬರ ಗೌರಿ ಶಂಕರ

Gowri Shankara: ಸೆಟ್ಟೇರಿತು ಹೊಸಬರ ಗೌರಿ ಶಂಕರ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

Lokayukta

MUDA ಮಾಜಿ ಆಯುಕ್ತ ನಟೇಶ್‌ಗೆ ಲೋಕಾ ನೋಟಿಸ್‌

1-reee

BJP; 50 ಅಲ್ಲ ,100 ಕೋಟಿ ರೂ. ಆಮಿಷ: ಶಾಸಕ ರವಿ ಗಣಿಗ!

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

19

Hockey: ಚೀನ ವಿರುದ್ಧ ಜಯಭೇರಿ; ಸೆಮಿಫೈನಲ್‌ಗೆ ಭಾರತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.