ದುಬೈನಲ್ಲೂ ತೋತಾಪುರಿ ದರ್ಬಾರ್: ಗಲ್ಫ್ ಕನ್ನಡಿಗರ ಜತೆ ಜಗ್ಗೇಶ್ ಮಾತುಕತೆ
Team Udayavani, Feb 25, 2022, 11:02 AM IST
ನವರಸ ನಾಯಕ ಜಗ್ಗೇಶ್ ನಟನೆಯ “ತೋತಾಪುರಿ’ ಸಿನಿಮಾ ಎಲ್ಲೆಡೆ ಮಿಂಚು ಹರಿಸುತ್ತಿದೆ. ಸದ್ಯಕ್ಕೆ ಕರ್ನಾಟಕ ಮಾತ್ರವಲ್ಲದೆ, ದೇಶ-ವಿದೇಶಗಳಲ್ಲೂ “ತೋತಾಪುರಿ’ ಚಿತ್ರದ ಹಾಡಿನದ್ದೇ ಹವಾ. ಇತ್ತೀಚೆಗೆ ಬಿಡುಗಡೆಯಾದ “ಬಾಗ್ಲು ತೆಗಿ ಮೇರಿ ಜಾನ್…’ ಹಾಡು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡು ಮಾಡುತ್ತಿದೆ. ಕನ್ನಡಿಗರು ಮಾತ್ರವಲ್ಲದೇ ಬೇರೆ ಭಾಷೆಯವರೂ ಈ ಹಾಡನ್ನು ಒಪ್ಪಿಕೊಂಡು ಅಪ್ಪಿಕೊಂಡಿದ್ದಾರೆ ಎಂಬುದಕ್ಕೆ ಯು-ಟ್ಯೂಬ್ ಮತ್ತು ಸೋಶಿಯಲ್ ಮೀಡಿಯಾಗಳಲ್ಲಿ ಮಿಲಿಯನ್‌ಗಟ್ಟಲೆ ಹಿಟ್ಸ್ ದಾಖಲಿಸಿರುವುದೇ ಸಾಕ್ಷಿ.
ಅಮೆರಿಕಾದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು ಇದರ ಸಂಭ್ರಮವನ್ನು ಜಗ್ಗೇಶ್ ಅವರೊಂದಿಗೆ ಗ್ಲೋಬಲ್ ವರ್ಚುವಲ್ ಮೀಟ್ ಮೂಲಕ ಹೆಚ್ಚಿಸಿದ್ದು “ತೋತಾಪುರಿ’ ತಂಡಕ್ಕೆ ಹುರುಪು ತುಂಬಿದೆ. ಅದರ ಬೆನ್ನಲ್ಲೆ ಇದೀಗ ದುಬೈನಲ್ಲೂ ಗ್ಲೋಬಲ್ ಮೀಟ್ ಸಂಭ್ರಮಕ್ಕೆ “ತೋತಾಪುರಿ’ ಸಾಕ್ಷಿಯಾಗಲಿದೆ.
ಹೌದು. ಫೆಬ್ರವರಿ 25ರ ಶುಕ್ರವಾರ ಭಾರತೀಯ ಕಾಲಮಾನ ರಾತ್ರಿ 7.30ರಿಂದ ಗಲ್ಫ್ ಕನ್ನಡಿಗರೊಂದಿಗೆ ಜಗ್ಗೇಶ್ ಮಾತುಕತೆ ನಡೆಸಲಿದ್ದಾರೆ. ಒಮನ್, ಬಹ್ರೆನ್, ಕತಾರ್, ಕುವೈತ್ ಸೇರಿದಂತೆ ನೆರೆಹೊರೆಯ ಕನ್ನಡಿಗರು ಈ ಕಾರ್ಯಕ್ರಮದ ಭಾಗವಾಗಲಿದ್ದಾರೆ.
ಇದನ್ನೂ ಓದಿ:ಎದೆ ಬಡಿತ ಜೋರಾಗಿದೆ; ಏಕ್ ಲವ್ ಯಾ ಮೇಲೆ ರಾಣಾ ಡ್ರೀಮ್
“ಓವರ್‌ಸೀಸ್ ಕನ್ನಡ ಮೂವೀಸ್’ ಸಂಸ್ಥೆಯೊಂದಿಗೆ ಕೈ ಜೋಡಿಸಿರುವ ಚಿತ್ರತಂಡ ಅದ್ದೂರಿಯಾಗಿ ನಡೆಸಲು ಯೋಜನೆ ರೂಪಿಸಿಕೊಂಡಿದೆ. “ಮೋನಿಫಿಕ್ಸ್ ಆಡಿಯೋಸ್’ ಯೂ-ಟ್ಯೂಬ್ ಚಾನಲ…ನಲ್ಲಿ ಈ ಕಾರ್ಯಕ್ರಮ ನೇರ ಪ್ರಸಾರವಾಗಲಿದೆ.
ವಿಜಯಪ್ರಸಾದ್ ನಿರ್ದೇಶನವಿರುವ “ತೋತಾಪುರಿ’ ಚಿತ್ರಕ್ಕೆ ಕೆ. ಎ. ಸುರೇಶ್ ನಿರ್ಮಾಣವಿದೆ. “ಡಾಲಿ’ ಧನಂಜಯ, ಅದಿತಿ ಪ್ರಭುದೇವ, ದತ್ತಣ್ಣ, ಸುಮನ್ ರಂಗನಾಥ್, ವೀಣಾ ಸುಂದರ್, ಹೇಮಾದತ್ ಮೊದಲಾದವರು “ತೋತಾಪುರಿ’ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. “ತೋತಾಪುರಿ’ ಚಿತ್ರದ ಹಾಡುಗಳಿಗೆ ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿದ್ದು, ಚಿತ್ರಕ್ಕೆ ನಿರಂಜನ್ ಬಾಬು ಛಾಯಾಗ್ರಹಣವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
ZEBRA Movie: ಜೀಬ್ರಾ ಮೇಲೆ ಡಾಲಿ ಕಣ್ಣು
Drone Prathap: ಸಿನಿಮಾರಂಗಕ್ಕೆ ಡ್ರೋನ್ ಪ್ರತಾಪ್ ಎಂಟ್ರಿ; ಮೊದಲ ಚಿತ್ರದಲ್ಲೇ ಹೀರೋ
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Hebri: ಎನ್‌ಕೌಂಟರ್ ತನಿಖೆ ನಡೆಸುವ ಹೆಬ್ರಿ ಪೊಲೀಸ್ ಠಾಣೆ ಇಲ್ಲಗಳ ಆಗರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.