ಕಾಲೇಜಿನಲ್ಲಿ ವಿದ್ಯಾರ್ಥಿ ಆತ್ಮಹತ್ಯೆ …ಪೋಷಕರಿಗೆ ಕಿವಿಮಾತು ಹೇಳಿದ ನಟ ಜಗ್ಗೇಶ್
Team Udayavani, Mar 1, 2021, 5:14 PM IST
ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ (ಮಾರ್ಚ್ 1) ಪ್ರಕರಣಕ್ಕೆ ಸಂತಾಪ ಸೂಚಿಸಿರುವ ಹಿರಿಯ ನಟ ನವರಸ ನಾಯಕ ಜಗ್ಗೇಶ್, ಮಕ್ಕಳ ದುರ್ಬಲ ಮನಸ್ಸಿಗೆ ಮರುಕ ಪಟ್ಟಿದ್ದಾರೆ.
ಬೆಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಬಿಇ ಮೂರನೇ ಸೆಮಿಸ್ಟರ್ ಓದುತ್ತಿದ್ದ ಜಯಂತ್ ರೆಡ್ಡಿ, ಇಂದು ಕಾಲೇಜಿನ ನಾಲ್ಕನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಜಯಂತ್ ರೆಡ್ಡಿ ಆತ್ಮಹತ್ಯೆ ನಿಲುವು ಕಂಡು ದುಖಃವಾಯಿತು ಎಂದಿರುವ ಜಗ್ಗೇಶ್, ನೀ ಒಬ್ಬನೆ ಸಾಯಲಿಲ್ಲಾ ಕಂದ ತಂದೆ-ತಾಯಿ ಬಂಧುಮಿತ್ರರ ಕೊಂದು ಬಿಟ್ಟೆ. ಈಸಬೇಕು ಇದ್ದು ಜಯಿಸಬೇಕು. ಇಂದಿನ ಪೋಷಕರು ತಮ್ಮ ಮಕ್ಕಳಿಗೆ ಬಾಹ್ಯ ವಿದ್ಯೆಗಿಂತ ಸ್ಥಿತಪ್ರಜ್ಞತೆ ಹಾಗೂ ಆಂತರ್ಯ ಗಟ್ಟಿಯಾಗುವ ವಿದ್ಯೆ ಕಲಿಸಬೇಕು. ಮಕ್ಕಳಿಗೆ ಆಸ್ತಿ ಮಾಡದೆ, ಮಕ್ಕಳನ್ನೆ ಆಸ್ತಿ ಮಾಡಿ ಎಂದು ಪಾಲಕರಿಗೆ ಕಿವಿ ಮಾತು ಹೇಳಿದ್ದಾರೆ.
ಇನ್ನು ಜಯಂತ್ ಇಂದು ಪರೀಕ್ಷೆ ಬರೆಯಲು ಬಂದಿದ್ದ. ಆದರೆ, ಕಾಲೇಜಿನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳಕ್ಕೆ ಭೇಟಿ ನೀಡಿದ ವಿವಿ ಪುರಂ ಪೊಲೀಸರು ಪರಿಶೀಲನೆ ನಡೆಸಿ ವಿದ್ಯಾರ್ಥಿಯ ಶವವನ್ನು ಕಿಮ್ಸ್ ಆಸ್ಪತ್ರೆಗೆ ಸಾಗಿಸಿದ್ದಾರೆ.
ಬಹಳ ದುಃಖವಾಯಿತು ಈ ವಿದ್ಯಾರ್ಥಿಯ ಆತ್ಮಹತ್ಯ ನಿಲುವು ಕಂಡು!ನೀ ಒಬ್ಬನೆ ಸಾಯಲಿಲ್ಲಾ ಕಂದ ತಂದೆತಾಯಿ ಬಂಧುಮಿತ್ರರ ಕೊಂದು ಬಿಟ್ಟೆ!
ಈಸ ಬೇಕು ಇದ್ದು ಜಯಿಸಬೇಕು!
ಮಕ್ಕಳಿಗೆ ಭಾಹ್ಯ ವಿದ್ಯೆಗಿಂತ ಸ್ಥಿತಪ್ರಙ್ನತೆ ಹಾಗು ಆಂತರ್ಯ ಗಟ್ಟಿಯಾಗುವ ವಿದ್ಯೆ ಕಲಿಸಬೇಕು ಇಂದಿನ ತಂದೆತಾಯಿ!
ಮಕ್ಕಳಿಗೆ ಆಸ್ತಿ ಮಾಡದೆ
ಮಕ್ಕಳನ್ನೆ ಆಸ್ತಿ ಮಾಡಿ? pic.twitter.com/0lvFHfMxE4— ನವರಸನಾಯಕ ಜಗ್ಗೇಶ್ (@Jaggesh2) March 1, 2021
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೆಬ್ಬಾಳ್ಕರ್‌ಗೆ ರವಿ ಅಶ್ಲೀಲ ಪದ ಬಳಸಿದ್ದು ನಿಜ: ಯತೀಂದ್ರ ಹೇಳಿಕೆ
MLA ಮುನಿರತ್ನ ವಿರುದ್ಧ ಮತ್ತೊಂದು ಜಾತಿ ನಿಂದನೆ ಪ್ರಕರಣ
BJP; ವಿಜಯೇಂದ್ರ ವಿರುದ್ಧ ಧ್ವನಿ ಎತ್ತಿದ್ದು ಬಿ.ಪಿ. ಹರೀಶ್ ಮಾತ್ರ!
High Court: ಪೌರ ಕಾರ್ಮಿಕರ ಸೇವೆ ಕಾಯಂಗೊಳಿಸಲು ವಿಫಲ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
Kalaburagi: ಬಂಧನಕ್ಕೆ ಹೋದ ಪೊಲೀಸರ ಮೇಲೆ ಹಲ್ಲೆಗೆ ಯತ್ನ, ಆರೋಪಿಗೆ ಗುಂಡೇಟು