‘ಆತ ಕಾಲ್ ಮಾಡಿ ಮಾತಾಡಬೇಕಿತ್ತು’…ದರ್ಶನ್ ಮೌನಕ್ಕೆ ಜಗ್ಗೇಶ್ ಅಸಮಾಧಾನ
Team Udayavani, Feb 24, 2021, 4:59 PM IST
ಮೈಸೂರು : ವಿವಾದಿತ ಆಡಿಯೋ ವಿಚಾರವಾಗಿ ನಡೆಯುತ್ತಿರುವ ಬೆಳವಣಿಗೆ ಬಗ್ಗೆ ನಟ ದರ್ಶನ್ ಮೌನವಹಿಸಿರುವುದಕ್ಕೆ ಜಗ್ಗೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಂದು (ಫೆ.24) ಬನ್ನೂರಿನಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ತಮ್ಮ ಬೇಸರ ಹೊರಹಾಕಿರುವ ಹಿರಿಯ ನಟ ಜಗ್ಗೇಶ್, ಇಂತಹ ಸಮಯದಲ್ಲಿ ದರ್ಶನ್ ಆ ಹುಡುಗರಿಗೆ ನೀವು ಯಾರು? ಯಾಕೆ ಹೀಗೆ ಮಾಡ್ತಿದಿರಿ ಅಂತ ಕೇಳಬೇಕಿತ್ತು. ನನಗಾದರೂ ಕಾಲ್ ಮಾಡಿ ಮಾತಾಡಬೇಕಿತ್ತು. ಇದರಿಂದ ನನಗೆ ತುಂಬ ನೋವಾಯಿತು. ಇದು ನಮ್ಮ ಹಿರಿಯರ ದೌರ್ಭಾಗ್ಯ ಎಂದರು.
ದರ್ಶನ್ ಅವರನ್ನು ನಾನು ಬಹಳ ಪ್ರೀತಿಸುತ್ತೇನೆ, ಆತ (ದರ್ಶನ್ ) ಸಂಕಷ್ಟದಲ್ಲಿರುವಾಗ ಕನ್ನಡ ಚಿತ್ರರಂಗದ ಯಾವ ನಟರು ನೆರವಿಗೆ ಬಂದರು ? ಅಂದು ನಾನು ಹಾಗೂ ಸಾರಾ ಗೋವಿಂದು ದರ್ಶನ್ ಪರ ನಿಂತೆವು. ಇದನ್ನು ದರ್ಶನ್ ಇಂದು ನೆನಪು ಮಾಡಿಕೊಳ್ಳಲಿಲ್ಲ ಎಂದು ಜಗ್ಗೇಶ್ ಬೇಸರಿಸಿಕೊಂಡರು.
ನಮ್ಮ ದರ್ಶನ್ ಕನ್ನಡದ ರಜನಿ ಕಾಂತ್ ಎಂದು ಹೇಳಿದಾಗ ನೀವೆಲ್ಲ ಹಿಗ್ಗಿ ಹೀರೆಕಾಯಿ ಆಗಿದ್ದೀರಿ. ಕನ್ನಡದ ತೇರು ನಾಲ್ಕಾರು ಜನ ನಟರು ಎಳೆಯುತ್ತಿದ್ದಾರೆ ಎಂದಾಗ ಖುಷಿ ಪಟ್ಟಿದ್ದೀರಿ. ಆದರೆ ಇದೆಲ್ಲ ಇಂದು ನೆನಪಿಗೆ ಬರಲಿಲ್ಲಲ್ವಾ ? ಎಂದು ಜಗ್ಗೇಶ್ ಪ್ರಶ್ನಿಸಿದರು.
ಇದನ್ನೂ ಓದಿ :ನಟಿ ಪ್ರಿಯಾಂಕಾ ನ್ಯೂ ಲುಕ್ ಡ್ರೆಸ್ ವೈರಲ್…ಕಾಲೆಳೆದ ಟ್ರೋಲಿಗರು!
ನಾವೆಲ್ಲ ಕನ್ನಡದ ಬಗ್ಗೆ ಮಾತಾಡಬೇಕು, ಕನ್ನಡತನ ಉಳಿಸಬೇಕು, ಚಿತ್ರರಂಗದಲ್ಲಿ ಎಲ್ಲರೂ ಒಗ್ಗಟ್ಟಾಗಿರಬೇಕೆನ್ನುವ ಕನಸು ಹಾಗೂ ಹಿರಿಯರ ಮಾತು ಕೇಳಿ ಬೆಳೆದವರು. ಈ ವಿಚಾರ ದೊಡ್ಡದು ಮಾಡಬಾರದೆಂದು ಮೌನವಾಗಿದ್ದೆ. ಅಂದು ಕೂಡ ದರ್ಶನ್ ಅಭಿಮಾನಿಗಳಿಗೆ ಸೂಕ್ಷ್ಮವಾಗಿ ತಿಳಿಹೇಳಲು ಪ್ರಯತ್ನಿಸಿದೆ. ಆದರೆ, ಅವರು ನನ್ನ ಮಾತು ಕೇಳಲಿಲ್ಲ. ಇದರಿಂದ ಏನು ಸಾಧಿಸಿದಿರಿ ನೀವು? ಇದು ಸತ್ಯ- ಅಸತ್ಯ ಅಂತಾ ಎದೆ ಮುಟ್ಟಿಕೊಂಡು ದರ್ಶನ್ ಅಭಿಮಾನಿಗಳು ಹೇಳಬೇಕು ಎಂದು ಆಗ್ರಹಿಸಿದ ಜಗ್ಗೇಶ್, ಈ ಪ್ರಯೋಗಳನ್ನು ಯಾರ ಮೇಲೂ ಮಾಡಬೇಡಿ, ಇದು ಒಳ್ಳೆಯ ಲಕ್ಷಣವಲ್ಲ ಎಂದರು.
ಅಂದು ಬಂದವರು ತಾಳ್ಮೆಯಿಂದ ಮಾತಾಡಿದ್ದರೆ ನನಗೆ ಖುಷಿಯಾಗುತ್ತಿತ್ತು. ಕೆಲವು ಮಾಧ್ಯಮಗಳು ಇದನ್ನ ತಣ್ಣಗೆ ಮಾಡಬಹುದಿತ್ತೆಂದು ಹೇಳಿದ ಜಗ್ಗೇಶ್, ಇನ್ಮುಂದೆ ಇಲ್ಲಿಗೆ ನಿಲ್ಲಿಸಿಬಿಡಿ, ಮುಂದಕ್ಕೆ ಬೆಳೆಸಬೇಡಿ ಎಂದು ಮನವಿ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.