ಜಗ್ಗೇಶ್ ನಟನೆ ನೋಡಿ ಪತ್ನಿ ಕಣ್ಣೀರು; ಹಾಲಿವುಡ್ ನಟನಿಗೆ ಹೋಲಿಕೆ
Team Udayavani, Jan 11, 2018, 4:15 PM IST
ಜಗ್ಗೇಶ್ ಅಭಿನಯದ “8 ಎಂಎಂ’ ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದೆ. ಅದರಲ್ಲೂ ಜಗ್ಗೇಶ್ ಅವರ ಭಾಗದ ಚಿತ್ರೀಕರಣ ಸಂಪೂರ್ಣವಾಗಿದೆ. ಹಾಗೆ ಜಗ್ಗೇಶ್ ಭಾಗದ ಕೆಲವು ದೃಶ್ಯಗಳನ್ನು ಅವರ ಮಡದಿ ಪರಿಮಳ ಅವರಿಗೆ ತೋರಿಸಲಾಗಿದೆ. ತಮ್ಮ ಪತಿ ಅಭಿನಯದ ಒಂದೆರೆಡು ದೃಶ್ಯಗಳನ್ನು ನೋಡಿ ಕಣ್ಣೀರು ಹಾಕಿರುವ ಪರಿಮಳ, ಅವರನ್ನು ಹಾಲಿವುಡ್ ನಟ ಆಲ್ ಪ್ಯಾಸಿನೋ ಲೆವೆಲ್‌ಗೆ ಹೋಲಿಸಿದ್ದಾರೆ.
ಹೌದು, ಈ ಕುರಿತು ಖುದ್ದು ಜಗ್ಗೇಶ್ ಮಾತನಾಡಿದ್ದಾರೆ. “ನಾನು ಇದುವರೆಗೂ 132 ಚಿತ್ರಗಳಲ್ಲಿ ನಟಿಸಿದ್ದೀನಿ. ಇದುವರೆಗೂ ನನ್ನ ಅಭಿನಯವನ್ನು ನನ್ನ ಹೆಂಡತಿ ಅಷ್ಟಾಗಿ ಮೆಚ್ಚಿರಲಿಲ್ಲ. “8 ಎಂಎಂ’ ಚಿತ್ರದಲ್ಲಿ ಎರಡು ಅದ್ಭುತ ದೃಶ್ಯಗಳಿವೆ. ಇದುವರೆಗೂ ಯಾವ ನಿರ್ದೇಶಕರೂ ನನಗೆ ಅಂತಹ ದೃಶ್ಯಗಳನ್ನು ಕೊಟ್ಟಿರಲಿಲ್ಲ. ಅದರಲ್ಲೂ ಒಂದು ದೃಶ್ಯ 5 ನಿಮಿಷ 23 ಸೆಕೆಂಡ್ ಇದ್ದರೆ, ಇನ್ನೊಂದು 4 ನಿಮಿಷ 31 ಸೆಕೆಂಡ್‌ನದ್ದು. ಯಾವುದೇ ಕಟ್ ಇಲ್ಲದ ದೃಶ್ಯಗಳವು. ಅದನ್ನು ನೋಡಿ ನನ್ನ ಹೆಂಡತಿಗೆ ಬಹಳ ಖುಷಿಯಾಗಿದ್ದಷ್ಟೇ ಅಲ್ಲ, ಹಾಲಿವುಡ್ ನಟ ಆಲ್ ಪಾಚಿನೋಗೆ ಹೋಲಿಸಿದಳು’ ಎನ್ನುತ್ತಾರೆ ಜಗ್ಗೇಶ್.
“ಈ ಚಿತ್ರದಲ್ಲಿ ನಾನೊಬ್ಬ ನೊಂದ ತಂದೆಯ ಪಾತ್ರ ಮಾಡಿದ್ದೇನೆ. ವಯಸ್ಸಾದ ಕಾಲದಲ್ಲಿ ಹಣವಿಲ್ಲದಾಗ ಏನೆಲ್ಲಾ ಪರಿಸ್ಥಿತಿಯನ್ನ ಅವನು ಎದುರಿಸುತ್ತಾನೆ ಅನ್ನೋದು ಕಥೆ. ಈ ಚಿತ್ರದಲ್ಲಿ ನಟಿಸುವಾಗ ನನ್ನಲ್ಲಿನ ಕಲಾವಿದನನ್ನು ಬಡಿದು ಎಬ್ಬಿಸಿದ್ದು ನಿರ್ದೇಶಕ ಹರಿಕೃಷ್ಣ. ಕಾಮಿಡಿಗೆ ಹೆಚ್ಚು ಸೀಮಿತವಾಗಿದ್ದ ನನ್ನನ್ನ ಬೇರೆ ತರಹ ತೋರಿಸುವುದಕ್ಕೆ ಈ ಚಿತ್ರದಲ್ಲಿ ಪ್ರಯತ್ನಿಸಿದ್ದಾರೆ’ ಎಂದು ಖುಷಿಯಾಗುತ್ತಾರೆ ಜಗ್ಗೇಶ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Max Movie: ಸಖತ್ ರೆಸ್ಪಾನ್ಸ್ ಪಡೆದ ಕಿಚ್ಚನ ʼಮ್ಯಾಕ್ಸ್ʼ ಮೊದಲ ದಿನ ಗಳಿಸಿದ್ದೆಷ್ಟು?
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Prashanth Neel: ಸಲಾರ್‌ಗೆ ನಾನು ಇನ್ನಷ್ಟು ಶ್ರಮ ಹಾಕಬೇಕಿತ್ತು; ಪ್ರಶಾಂತ್ ನೀಲ್
UI Movie: ಉಪ್ಪಿ ಯುಐ ಮೆಚ್ಚಿದ ಯಶ್
Shivaraj Kumar: ಶಿವರಾಜ್ ಕುಮಾರ್ ಅವರ ಆಪರೇಷನ್ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi Congress Session: ಗಾಂಧೀಜಿ ಪರಂಪರೆ ಮುಂದುವರಿಸಲು ಬದ್ಧರಾಗಬೇಕು: ಸೋನಿಯಾ
Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!
Christmas, ವರ್ಷಾಂತ್ಯ ಸಂಭ್ರಮ; ಬೀಚ್‌ಗಳಿಗೆ ಜೀವಕಳೆ
Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ
Kundapura: “ಅವರು ಪ್ರತೀ ದಿನ ಫೋನ್ ಮಾಡುತ್ತಿದ್ದರು… ಅಂದು ನನ್ನ ಕರೆಗೆ ಉತ್ತರಿಸಲಿಲ್ಲ’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.