‘ದೊಡ್ಡ ನೋಟಿನ ಸಾಹುಕಾರ’…ಶಿವಣ್ಣನ ಕುರಿತು ಜಗ್ಗೇಶ್ ಬಿಚ್ಚಿಟ್ರು ಕುತೂಹಲ ಸಂಗತಿ
Team Udayavani, Feb 21, 2021, 1:00 PM IST
ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬಣ್ಣದ ಲೋಕದಲ್ಲಿ ಮೂರು ದಶಕಗಳನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಆನಂದ ಚಿತ್ರದ ಮೂಲಕ ಚಂದನವನದಲ್ಲಿ ಶುರುವಾದ ಶಿವಣ್ಣನ ಸಿನಿ ಪಯಣ, 30 ವರ್ಷಗಳನ್ನು ದಾಡಿ ಮಿಂಚಿನ ಓಟ ನಡೆಸಿದೆ. ಸನ್ ಆಫ್ ಬಂಗಾರದ ಮನುಷ್ಯನ ಈ ಸಾಧನೆಗೆ ಕನ್ನಡ ಚಿತ್ರರಂಗದಿಂದ ಅಭಿನಂದನೆಗಳ ಮಹಾಪೂರ ಹರಿದು ಬರುತ್ತಿದೆ.
ಕನ್ನಡದ ಹಿರಿಯ ನಟ ಹಾಗೂ ಅಣ್ಣಾವ್ರ ಕುಟುಂಬಕ್ಕೆ ಆಪ್ತರಾಗಿರುವ ನವರಸ ನಾಯಕ ಜಗ್ಗೇಶ್ ಕೂಡ ಶಿವಣ್ಣನಿಗೆ ಚಂದನೆಯ ಶುಭ ಕೋರಿದ್ದಾರೆ. ಜತೆಗೆ ಒಂದು ಇಂಟ್ರೆಸ್ಟಿಂಗ್ ಕಹಾನಿ ಕೂಡ ಹಂಚಿಕೊಂಡಿದ್ದಾರೆ. ಜಗ್ಗೇಶ್ ತಮ್ಮ ಟ್ವೀಟ್ ನಲ್ಲಿ ‘ದೊಡ್ಡ ನೋಟಿನ ಸಾಹುಕಾರ’ ಎಂದು ಬಣ್ಣಿಸಿದ್ದಾರೆ. ಜಗ್ಗೇಶ್ ಅವರು ಶಿವಣ್ಣನಿಗೆ ಹೀಗೆ ಸಂಬೋಧಿಸಿದ್ದೇಕೆ ಎಂಬುದಕ್ಕೆ ಸ್ಪಷ್ಟನೆ ಕೂಡ ನೀಡಿದ್ದಾರೆ.
ಕರುನಾಡು ಚಕ್ರವರ್ತಿ ಶಿವರಾಜ್ ಕುಮಾರ್ ಅವರಿಗೆ ‘ದೊಡ್ಡ ನೋಟಿನ ಸಾಹುಕಾರ’ ಎಂದು ಕರೆದಿದ್ದು ಅವರ ತಂದೆ ವರನಟ ಡಾ.ರಾಜಕುಮಾರ್ ಅವರಂತೆ. ಅಣ್ಣಾವ್ರ ಪಾಲಿಗೆ ಶಿವಣ್ಣ ದೊಡ್ಡ ನೋಟಿನ ‘ಸಾಹುಕಾರ’ರಾಗಿದ್ದರಂತೆ.
ಶಿವಣ್ಣನ ಜನನವಾದಾಗ ರಾಜಕುಮಾರ್ ಅವರು ತಮ್ಮ ಸಿನಿಮಾವೊಂದಕ್ಕೆ 1000 ರೂಪಾಯಿ ಸಂಭಾವನೆ ಪಡೆದಿದ್ದರಂತೆ. ಈ ಖುಷಿಯ ಜತೆಗೆ ಶಿವಣ್ಣನ ಆಗಮನ ಅವರ ಆನಂದಕ್ಕೆ ಪಾರವೇ ಇರದಂತೆ ಮಾಡಿತಂತೆ. ಈ ಸಂತಸ ಎಲ್ಲರೆದುರು ಹಂಚಿಕೊಂಡಿದ್ದರಂತೆ.
ಈ ವಿಚಾರ ಹಂಚಿಕೊಂಡಿರುವ ಜಗ್ಗಣ್ಣ, ರಾಜಣ್ಣನ ಮುದ್ದಿನಮಗ ಬಣ್ಣದ ಲೋಕದಲ್ಲಿ 35ವರ್ಷ ಪೂರೈಸಿದ್ದಾರೆ. ಅದು100ವರ್ಷ ಆಗುವಂತೆ ಕನ್ನಡಿಗರು ಹರಸಲಿ ಎಂದು ಅವರ ತಮ್ಮನಾಗಿ ಶುಭಹಾರೈಕೆ ತಿಳಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ರಾಜಣ್ಣನ ನೆಚ್ಚಿನ ದೊಡ್ಡ ನೋಟಿನ ಸಾಹುಕಾರ ಅವರ ಹಿರಿಮಗ ಶಿವಣ್ಣ!ಕಾರಣ ಶಿವಣ್ಣ ಹುಟ್ಟಿದಾಗ ರಾಜಣ್ಣ ಅಂದಿನ ಸಾವಿರ ರೂಪಾಯಿ ಸಂಬಳ ಪಡೆದಿದ್ದರಂತೆ!ರಾಜಣ್ಣನ ಬಾಯಿಂದ ನೇರವಾಗಿ ನಾನು ಕೇಳಿದ ಮಾತು!ಇಂದು ಅವರ ಮುದ್ದಿನಮಗ ಬಣ್ಣದ ಲೋಕದಲ್ಲಿ 35ವರ್ಷ ಪೂರೈಸಿದ್ದಾರೆ ಅದು100ವರ್ಷ ಆಗುವಂತೆ ಕನ್ನಡಿಗರು ಹರಸಲಿ ಎಂದು ಶುಭಹಾರೈಕೆ ಅವರ ತಮ್ಮನಾಗಿ?? pic.twitter.com/vUdwuDAhjl
— ನವರಸನಾಯಕ ಜಗ್ಗೇಶ್ (@Jaggesh2) February 20, 2021
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.