ದರ್ಶನ್ ಸಾಧನೆಗೆ ಜಗ್ಗೇಶ್ ಪ್ರಶಂಸೆ
Team Udayavani, Oct 19, 2017, 12:17 PM IST
“ಚಾಲೆಂಜಿಂಗ್ ಸ್ಟಾರ್’ ದರ್ಶನ್ ಅವರನ್ನು ಬ್ರಿಟಿಶ್ ಪಾರ್ಲಿಮೆಂಟ್‌ನಲ್ಲಿ ಗೌರವಿಸುತ್ತಿರುವುದು ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಪ್ರಶಂಸೆಗೆ ಪಾತ್ರವಾಗಿದೆ. ಈ ಕುರಿತು ಕನ್ನಡ ಚಿತ್ರರಂಗದ ಹಲವು ಗಣ್ಯರು ಟ್ವೀಟ್ ಮಾಡುವ ಮೂಲಕ ದರ್ಶನ್ ಅವರಿಗೆ ಜಗ್ಗೇಶ್ ಸೇರಿದಂತೆ ಹಲವರು ಟ್ವೀಟ್ ಮಾಡುವ ಮೂಲಕ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಜಗ್ಗೇಶ್, “ನೆಲ್ಮೆಯ ಸಹೋದರ ದರ್ಶನ್, ನಿನಗೆ ದೊರಕಿದ ಸನ್ಮಾನ ಕನ್ನಡಿಗರಿಗೆ ಹಾಗೂ ಕನ್ನಡ ಚಿತ್ರರಂಗಕ್ಕೆ ಅತೀವ ಆನಂದ ಉಂಟು ಮಾಡಿದೆ. ಕನ್ನಡಕ್ಕೆ ನಿನನ್ನಿಂದ ಅಂತಾರಾಷ್ಟ್ರೀಯ ಮನ್ನಣೆ … ಶುಭಮಸ್ತು’ ಎಂದು ಟ್ವೀಟ್ ಮಾಡಿದ್ದಾರೆ. ಜಗ್ಗೇಶ್ ಒಬ್ಬರೇ ಅಲ್ಲ, ನಿರ್ಮಾಪಕಿ ಶೈಲಜಾ ನಾಗ್ ಸೇರಿದಂತೆ ಹಲವರು ದರ್ಶನ್ ಅವರಿಗೆ ಪ್ರಶಂಸೆಯ ಸುರಿಮಳೆಗೈದಿದ್ದಾರೆ.
ಇದಕ್ಕೂ ಮುನ್ನ ಬಾಲಿವುಡ್ ನಟ ಸಲ್ಮಾನ್ ಖಾನ್, ಗಾಯಕಿ ಆಶಾ ಭೋಂಸ್ಲೇ ಸೇರಿದಂತೆ ಹಲವರಿಗೆ ಬ್ರಿಟಿಶ್ ಪಾರ್ಲಿಮೆಂಟ್‌ನಲ್ಲಿ ಗೌರವಿಸಲಾಗಿತ್ತು. ಈಗ ದರ್ಶನ್ ಅವರ ಸರದಿ. ದರ್ಶನ್ ಅವರಿಗೆ ಇಂದು ಬ್ರಿಟಿಶ್ ಪಾರ್ಲಿಮೆಂಟ್‌ನಲ್ಲಿ ಗೌರವಿಸಲಾಗುತ್ತಿದೆ.