ಕಾಂಚಾಣ ಹಿಂದೆ “ಜನ್‌ಧನ್’!
ಈ ವಾರ ತೆರೆಗೆ
Team Udayavani, Jan 15, 2020, 7:01 AM IST
ಈಗಾಗಲೇ ಕಪ್ಪು ಹಣ ವಿಷಯಕ್ಕೆ ಸಂಬಂಧಿಸಿದಂತೆ ಒಂದಷ್ಟು ಚಿತ್ರಗಳು ಬಂದಿವೆ. ಅದೇ ಸಾಲಿಗೆ ಸೇರುವ “ಜನ್‌ಧನ್’ ಹೊಸ ವಿಷಯಗಳೊಂದಿಗೆ ಪ್ರೇಕ್ಷಕರ ಮುಂದೆ ಬರುತ್ತಿದೆ. ಜ.17 ರಂದು ಬಿಡುಗಡೆಯಾಗುತ್ತಿರುವ ಈ ಚಿತ್ರದಲ್ಲಿ ನೋಟ್ ಬ್ಯಾನ್ ಕಥೆ ಹೈಲೈಟ್. ಡಿಮಾನಿಟೇಜಶನ್ ಬಳಿಕ ಏನೆಲ್ಲಾ ಸಮಸ್ಯೆ ಎದುರಾಯ್ತು. ಜನರು ಹೇಗೆ ಕಷ್ಟ ಅನುಭವಿಸಿದರು. ಅದರ ಲಾಭ ಯಾರೆಲ್ಲ ಪಡೆದರು, ಯಾರೆಲ್ಲಾ ಪರದಾಡಿದರು ಎಂಬ ವಿಷಯ ಇಟ್ಟುಕೊಂಡು ಮರಡಿಹಳ್ಳಿ ನಾಗಚಂದ್ರ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ.
ಇನ್ನು, ಶ್ರೀ ಸಿದ್ಧಿ ವಿನಾಯಕ ಫಿಲಂಸ್ ಬ್ಯಾನರ್‌ನಡಿ ಟಿ.ನಾಗಚಂದ್ರ ಗೆಳೆಯರ ಜೊತೆ ಸೇರಿ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ಸಿಕ್ಕಿದೆ. ಅಂದಹಾಗೆ ಇದು ಬೆಂಗಳೂರಿನಿಂದ ಶಿರಾವರೆಗೂ ನಡೆಯುವ ಒಂದು ದಿನದ ಕಥೆಯಾಗಿದ್ದು, ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಬೆಳಗ್ಗೆ 4 ಗಂಟೆಯಿಂದ ಶುರುವಾಗುವ ಜರ್ನಿ, ಸಂಜೆ ಹೊತ್ತಿಗೆ ಮುಗಿಯುತ್ತದೆ. ಇಲ್ಲಿ ಬಡವರ ಭಾವನೆಗಳ ಜೊತೆ ಹೇಗೆಲ್ಲಾ ಚೆಲ್ಲಾಟ ಆಡುತ್ತಾರೆ ಎಂಬ ವಿಷಯದೊಂದಿಗೆ, ಸಮಾಜದಲ್ಲಿ ಎಂಥೆಂಥಾ ಮಂದಿ ಇರುತ್ತಾರೆ ಎಂಬಿತ್ಯಾದಿ ಅಂಶಗಳ ಜೊತೆ ಚಿತ್ರಿಸಲಾಗಿದೆ. ಚಿತ್ರದಲ್ಲಿ ಸುನೀಲ್ ಶಶಿ ಹೀರೋ ಆಗಿ ನಟಿಸಿದ್ದಾರೆ.
ಅವರಿಗೆ ಇದು ಮೊದಲ ಅನುಭವ. ಉಳಿದಂತೆ ರಚನಾ, ಮಾ.ಲಕ್ಷ್ಮಣ್, ಅರುಣ್, ಟಾಪ್‌ಸ್ಟಾರ್ ರೇಣು, ಜಯಲಕ್ಷ್ಮೀ, ಸುನೀಲ್ ವಿನಾಯಕ, ಸುಮನ್, ತೇಜೇಶ್ವರ್ ಇತರರು ನಟಿಸಿದ್ದಾರೆ. ಒಟ್ಟಾರೆ ಕಾಮನ್ ಮ್ಯಾನ್ ಮತ್ತು ರಾಯಲ್ ಮ್ಯಾನ್ ನಡುವಿನ ಕಥೆಯಲ್ಲಿ “ಪ್ರಧಾನ ಮಂತ್ರಿಗಳು ನೋಟ್ ಬ್ಯಾನ್ ಘೋಷಣೆ ಮಾಡಿದ ಬಳಿಕ ಆದಂತಹ ಘಟನೆಗಳೇ ಚಿತ್ರದ ಜೀವಾಳ. ಚಿತ್ರದಲ್ಲಿ ಫ್ರೆಂಡ್‌ಶಿಪ್, ಪ್ರೀತಿ, ಪ್ರೇಮ ವಿಷಯಗೂ ಇವೆ. ಮೂರು ಭರ್ಜರಿ ಫೈಟ್‌ಗಳೂ ಇವೆ. ಈಗಾಗಲೇ ಟ್ರೇಲರ್, ಹಾಡಿಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಸೌಂದರ್ ರಾಜ್ ಸಂಕಲನವಿದೆ. ಜಾಗ್ವಾರ್ ಸಣ್ಣಪ್ಪ ಸಾಹಸವಿದೆ. ಉಮೇಶ್ ಕಂಪ್ಲಾಪುರ ಅವರು ಛಾಯಾಗ್ರಹಣ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Megha Movie: ನಾನು ಎಂಟು ಸಾರಿ ಕೇಳಿದ ಕಥೆಯಿದು…: ಕಿರಣ್ ರಾಜ್
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್
Kannada Cinema: ‘ರುದ್ರಾಭಿಷೇಕಂ’ನಲ್ಲಿ ವಿಜಯ್ ರಾಘವೇಂದ್ರ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.