ಜನುಮದ ಸ್ನೇಹಿತರು ಬಿಡುಗಡೆಗೆ ಸಿದ್ಧ
Team Udayavani, Nov 1, 2018, 3:40 PM IST
ಪವಿತ್ರವಾದ ಸ್ನೇಹಕ್ಕೆ ಜಾತಿ, ಮತಗಳ ತಾರತಮ್ಯವಿಲ್ಲ ಎಂಬ ಅಂಶ ಇಟ್ಟುಕೊಂಡು “ಜನುಮದ ಸ್ನೇಹಿತರು’ ಚಿತ್ರವೊಂದು ನಿರ್ಮಾಣವಾಗಿ ತೆರೆಗೆ ಬರಲು ಸಿದ್ಧವಾಗಿದೆ. ಚಿಕ್ಕ ವಯಸ್ಸಿನಿಂದಲೇ ಸಿನಿಮಾ ಕನಸನ್ನು ಹೊತ್ತಿದ್ದ ಶೈಕ್ ಮುಕ್ತಿರ್ಯಾ ಚಿತ್ರ ನಿರ್ಮಾಣ ಮಾಡಿದ್ದಾರೆ. ಬಡತನದಿಂದಲೇ ಹುಟ್ಟಿ ಬೆಳೆದ ಶೈಕ್ ಮುಕ್ತಿರ್ಯಾ ಅವರಿಗೆ ಕನ್ನಡ ಭಾಷೆಯ ಮೇಲೆ ಇನ್ನಿಲ್ಲದ ಪ್ರೀತಿ ಅಭಿಮಾನ. ಹಾಗಾಗಿ ಇಂಡಿಯನ್ ಫಿಲಂ ಇಂಡಸ್ಟ್ರಿ ಎಂಬ ಬ್ಯಾನರ್ ಸ್ಥಾಪಿಸಿ ಅದರ ಮೂಲಕ ಚಿತ್ರ ನಿರ್ಮಿಸಿದ್ದಾರೆ.
ಚಿತ್ರದಲ್ಲಿ ಒಂದು ಹಾಡನ್ನು ಕೂಡ ಬರೆದಿದ್ದಾರೆ ಜೊತೆಗೆ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಜೀವನದಲ್ಲಿ ಅನುಭವಿಸಿದ ಒಂದಷ್ಟು ಘಟನೆಗಳನ್ನು ಈ ಚಿತ್ರದಲ್ಲಿ ಹೇಳಿದ್ದಾರೆ. ಈಗಾಗಲೇ ಚಿತ್ರದ ಪ್ರಥಮ ಪ್ರತಿ ಕೂಡ ಸಿದ್ದವಾಗಿದ್ದು ನವೆಂಬರ್ ತಿಂಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡಲಿದ್ದಾರೆ. ಈ ಚಿತ್ರದಲ್ಲಿ ಫ್ಯಾಕ್ಟರಿ ಹಾಗೂ ಕೆಲಸಗಾರರ ಸುತ್ತ ಮುತ್ತ ನಡೆಯುವ ಕಥಾಹಂದರವಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.