ಹೊರ ಬಂತು ಜವ ಹಾಡುಗಳು
Team Udayavani, Oct 23, 2017, 10:57 AM IST
ಸಾಯಿಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿರುವ “ಜವ’ ಚಿತ್ರದ ಆಡಿಯೋ ಬಿಡುಗಡೆ ಇತ್ತೀಚೆಗೆ ನಡೆಯಿತು. ನಟ ಶಿವರಾಜಕುಮಾರ್ ಆಡಿಯೋ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದರು. “ಚಿತ್ರದ ಟೈಟಲ್ ವಿಭಿನ್ನವಾಗಿದ್ದು, ಸಿನಿಮಾ ನೋಡಬೇಕು ಎನಿಸುವಂತಿದೆ. ಹೊಸಬರ ತಂಡಕ್ಕೆ ಒಳ್ಳೆಯದಾಗಲಿ’ ಎಂದು ಶುಭ ಹಾರೈಸಿದರು. ಅಂದಹಾಗೆ, “ಜವ’ ಚಿತ್ರವನ್ನು ಅಭಯ್ ಚಂದ್ರ ನಿರ್ದೇಶಿಸಿದ್ದಾರೆ. ಇವರಿಗಿದು ಮೊದಲ ಸಿನಿಮಾ.
“ಜವ’ ಒಂದು ಮಿಸ್ಟರಿ-ಥ್ರಿಲ್ಲರ್ ಕಥೆಯಾಗಿದ್ದು, ಚಿಕ್ಕಮಗಳೂರು ಸುತ್ತಮುತ್ತ ಚಿತ್ರೀಕರಣವಾಗಿದೆ. ಚಿತ್ರಕ್ಕೆ ಅಭಯ್ ಚಂದ್ರ ಸಹೋದರ ವಿನಯ್ ಚಂದ್ರ ಸಂಗೀತ ನೀಡಿದ್ದಾರೆ. ಸನ್ನಿವೇಶಕ್ಕೆ ತಕ್ಕಂತಹ ಹಾಡುಗಳಿದ್ದು, ಜನಕ್ಕೆ ಇಷ್ಟವಾಗುವ ವಿಶ್ವಾಸ ಅವರಿಗಿದೆ. ಈ ಚಿತ್ರವನ್ನು ತಮ್ಮದೇ ನಿರ್ಮಾಣ ಸಂಸ್ಥೆ ಹುಟ್ಟುಹಾಕಿ ನಿರ್ಮಿಸಿದ್ದಾಗಿ ಹೇಳಿಕೊಂಡರು.
ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಾಯಿಕುಮಾರ್ ಅವರಿಗೆ “ಜವ’ ಒಂದು ವಿಭಿನ್ನ ಸಿನಿಮಾ ಎನಿಸಿದೆಯಂತೆ. ಜೊತೆಗೆ ಸಹೋದರರಾದ ವಿನಯ್ ಚಂದ್ರ ಹಾಗೂ ಅಭಯ್ ಚಂದ್ರ ಅವರ ಸಿನಿಮಾ ಪ್ರೀತಿ ಕೂಡಾ ಇಷ್ಟವಾಗಿದ್ದಾಗಿ ಹೇಳುತ್ತಾರೆ ಸಾಯಿಕುಮಾರ್. “ರಂಗಿತರಂಗ’ ಮಾಡುವಾ ಅನೂಪ್ ಹಾಗೂ ನಿರೂಪ್ ಅವರನ್ನು ರಾಮ-ಲಕ್ಷ್ಮಣ ಎಂದು ಕರೆಯುತ್ತಿದ್ದೆ.
ಈ ಅಣ್ಣ-ತಮ್ಮಂದಿರನ್ನು ಲವ-ಕುಶ ಎಂದು ಕರೆಯಲಿಚ್ಛಿಸುತ್ತೇನೆ. ಕನ್ನಡದಲ್ಲಿ ಈಗ ಸಾಕಷ್ಟು ಪ್ರಯೋಗಾತ್ಮಕ, ಹೊಸ ಬಗೆಯ ಸಿನಿಮಾಗಳು ಬರುತ್ತಿವೆ. ಆ ಸಾಲಿಗೆ “ಜವ’ ಕೂಡಾ ಸೇರುತ್ತದೆ ಎಂಬ ನಂಬಿಕೆ ಇದೆ’ ಎನ್ನುವುದು ಸಾಯಿಕುಮಾರ್ ಮಾತು. ಆಡಿಯೋ ಬಿಡುಗಡೆಯಲ್ಲಿ ನಟಿ ಭಾವನಾ, ಅನೂಪ್ ರೇವಣ್ಣ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kottigehara: ಸ್ವೀಟ್ ಬಾಕ್ಸ್‌ನಲ್ಲಿ ಗೋಮಾಂಸ ಇಟ್ಟು ಮಾರಾಟ: ಇಬ್ಬರ ಸೆರೆ
Mysuru: ಮೈಸೂರಲ್ಲಿ ಚಳಿ ತಡೆಯಲಾಗದೆ ರಾತ್ರಿ ಮಲಗಿದ್ದಲ್ಲೇ ವ್ಯಕ್ತಿ ಸಾವು?
ಗ್ರಾಮ ಪಂಚಾಯಿತಿ ವ್ಯಾಪ್ತಿಯ 90 ಲಕ್ಷ ಆಸ್ತಿಗಳಿಗೆ ಇ-ಸ್ವತ್ತು: ಸಚಿವ ಪ್ರಿಯಾಂಕ್
Conference: ಜ.18, 19ರಂದು ರಾಜ್ಯಮಟ್ಟದ ಬ್ರಾಹ್ಮಣ ಮಹಾ ಸಮ್ಮೇಳನ
Mahakumbh Mela 2025: 144 ವರ್ಷಗಳಿಗೆ ಒಮ್ಮೆ ನಡೆಯುವ ಆಧ್ಯಾತ್ಮಿಕ ವಿಸ್ಮಯ ಮಹಾ ಕುಂಭಮೇಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.