ಮರ್ಡರ್ ಮಿಸ್ಟರಿ ವೆನಿಲ್ಲಾ; ಕ್ಯಾಪ್ನೋಫೋಬಿಯಾ ಕುರಿತು ಸಿನಿಮಾ
Team Udayavani, Feb 15, 2018, 1:20 PM IST
ಜಯತೀರ್ಥ ಅವರಿಗೆ “ವೆನಿಲ್ಲಾ’ ಚಿತ್ರದ ಅವಕಾಶ ಬಂದಾಗ ಅವರು ಯೋಚಿಸಿದ್ದು ಒಂದೇ ವಿಚಾರವಂತೆ. ಅದು ಹೊಸ ನಾಯಕನನ್ನು ಇಟ್ಟುಕೊಂಡು ಯಾವ ತರಹದ ಸಿನಿಮಾ ಮಾಡೋದೆಂದು. ಆರಂಭದಲ್ಲಿ ಸಾಕಷ್ಟು ಗೊಂದಲದಲ್ಲಿದ್ದ ಜಯತೀರ್ಥ ಅವರು ಕೊನೆಗೂ ಒಂದು ಕಥೆ ಫೈನಲ್ ಮಾಡಿ, ಈಗ ಸಿನಿಮಾ ಮಾಡಿ ಮುಗಿಸಿಬಿಟ್ಟಿದ್ದಾರೆ. ಅದು ಮರ್ಡರ್ ಮಿಸ್ಟ್ರಿ. ಇಡೀ ಸಿನಿಮಾ ಒಂದು ಕೊಲೆಯ ಸುತ್ತ ನಡೆಯುತ್ತದೆಯಂತೆ. ಜೊತೆಗೆ ಸಿನಿಮಾ ಪ್ರತಿ ಹಂತದಲ್ಲೂ ಕುತೂಹಲ ಹುಟ್ಟಿಸುತ್ತಾ ಸಾಗುತ್ತದೆ ಎಂಬುದು ಜಯತೀರ್ಥ ಅವರ ಮಾತು.
“ಹೊಸ ನಾಯಕ ಬಂದಾಗ ಆತನಿಗೆ ಯಾವ ತರಹದ ಸಿನಿಮಾ ಮಾಡೋದು ಎಂಬ ಗೊಂದಲವಿತ್ತು. ಈಗ ಮರ್ಡರ್ ಮಿಸ್ಟ್ರಿ ಮಾಡಿದ್ದೇನೆ. ಕ್ಯಾಪ್ನೋಫೋಬಿಯಾ ಎಂಬ ಕಾಯಿಲೆಗೂ ಇದಕ್ಕೂ ಸಂಬಂಧವಿದೆ. ಕ್ಯಾಪ್ನೋಫೋಬಿಯಾ ಇರುವವರಿಗೆ ಹೊಗೆ ನೋಡಿದರೆ ಭಯ ಆಗುತ್ತದೆ. ಈ ಚಿತ್ರಕ್ಕೂ ಆ ಫೋಬಿಯಾಗೂ ಸಂಬಂಧವಿದೆ’ ಎಂದು ಚಿತ್ರದ ಬಗ್ಗೆ ಹೇಳಿದರು. ಜೊತೆಗೆ ಈ ಚಿತ್ರದಲ್ಲಿ ಹೊಸ ಸಂಶೋಧನೆ ಸಂಶೋಧಕನ ಸಾವಿಗೆ ಹೇಗೆ ಕಾರಣವಾಗುತ್ತದೆ ಎಂಬ ಅಂಶದೊಂದಿಗೆ ಸಿನಿಮಾ ಸಾಗುತ್ತದೆ ಎಂಬುದು ಜಯತೀರ್ಥ ಮಾತು. “ನಾನು ಇದನ್ನು ನೈಜ ಘಟನೆಯಾಧರಿತ ಚಿತ್ರವೆಂದು ಹಾಕಿಕೊಂಡರೂ ತಪ್ಪಿಲ್ಲ. ಏಕೆಂದರೆ, ಕೆಲವು ದೇಶಗಳಲ್ಲಿ ಹೊಸ ಸಂಶೋಧನೆ ಮಾಡಿದ ಸಂಶೋಧಕರನ್ನು ಸಾಯಿಸಿದ ಉದಾಹರಣೆ ಇದೆ’ ಎನ್ನಲು ಜಯತೀರ್ಥ ಮರೆಯಲಿಲ್ಲ.
ಚಿತ್ರದಲ್ಲಿ ಅವಿನಾಶ್ ನಾಯಕರಾಗಿ ನಟಿಸಿದ್ದಾರೆ. ಎಂಬಿಎ ಓದಿರುವ ಅವಿನಾಶ್‌ಗೆ ನಟನೆಯ ಮೇಲೆ ಆಸಕ್ತಿ ಇತ್ತಂತೆ. ಮಂಡ್ಯ ರಮೇಶ್ ಅವರ ನಟನಾಗೆ ಸೇರಿಕೊಂಡು ಅನೇಕ ಶೋಗಳನ್ನು ಕೊಟ್ಟರಂತೆ. ಅದೊಂದು ದಿನ ಇವರ ಶೋ, ಅದರಲ್ಲಿ ಅವಿನಾಶ್ ತೊಡಗಿಸಿಕೊಂಡ ರೀತಿಯಿಂದ ಖುಷಿಯಾದ ಇವರ ತಂದೆ ಇವರಿಗೆ ಹೇಳದೆಯೇ ನಿರ್ದೇಶಕ ಜಯತೀರ್ಥ ಅವರನ್ನು ಸಂಪರ್ಕಿಸಿ ಸಿನಿಮಾ ಮಾಡಲು ಮುಂದಾದರಂತೆ. “ನನಗೆ ಹೀರೋಯಿಂಸ, ಬಿಲ್ಡಪ್‌ಗ್ಳೆಂದರೆ ಇಷ್ಟವಿಲ್ಲ. ತುಂಬಾ ಕೂಲ್ ಆಗಿ ಸಾಗುವ, ಕಥೆಗೆ ಒತ್ತು ನೀಡುವ ಸಿನಿಮಾ, ಪಾತ್ರ ಇಷ್ಟ. ಅದು ಈ ಸಿನಿಮಾದಲ್ಲಿ ಸಿಕ್ಕಿದೆ’ ಎನ್ನುವುದು ಅವಿನಾಶ್ ಮಾತು.
ಚಿತ್ರದಲ್ಲಿ ಸ್ವಾತಿ ಕೊಂಡೆ ನಾಯಕಿ. ಈ ಹಿಂದೆ ಜಯತೀರ್ಥ ಅವರ “ಬ್ಯೂಟಿಫುಲ್ ಮನಸುಗಳು’ ಚಿತ್ರದಲ್ಲಿ ಒಂದು ಸಣ್ಣ ಪಾತ್ರ ಮಾಡಿದ್ದ ಸ್ವಾತಿಗೆ “ವೆನಿಲ್ಲಾ’ದಲ್ಲಿ ನಾಯಕಿಯಾಗುವ ಅವಕಾಶ ಸಿಕ್ಕಿದೆ. ಹಾಗಾಗಿಯೇ ಅವರು ಜಯತೀರ್ಥ ಅವರನ್ನು ಗಾಢ್ ಫಾದರ್ ಎಂದು ಕರೆದರು. ಚಿತ್ರದಲ್ಲಿ ರವಿಶಂಕರ್ ಗೌಡ ಕೂಡಾ ನಟಿಸಿದ್ದಾರೆ.
ಆರಂಭದಲ್ಲಿ ಈ ಅವಕಾಶ ಬಂದಾಗ, ಹೊಸ ಹೀರೋ ಹೇಗೆ ಮಾಡುತ್ತಾರೋ ಎಂಬ ಭಾವನೆ ಮನಸ್ಸಲ್ಲಿ ಬಂತಂತೆ. ಆದರೆ ಅವಿನಾಶ್ ನಟನೆ ನೋಡಿದ ನಂತರ ರವಿಶಂಕರ್ ಅವರಿಗೆ ಭರವಸೆಯ ನಟ ಎನಿಸಿತಂತೆ. ಸಾಮಾನ್ಯವಾಗಿ ಕಾಮಿಡಿ ಪಾತ್ರಗಳಿಗೆ ರವಿಶಂಕರ್ ಅವರನ್ನು ಕರೆದರೆ, ಜಯತೀರ್ಥ ಅವರು ಸೀರಿಯಸ್ ಪಾತ್ರ ಕೊಟ್ಟಿದ್ದಾರೆ. ಇಲ್ಲಿ ಅವರು ತನಿಖಾಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ರೆಹಮಾನ್ ಕೂಡಾ ನಟಿಸಿದ್ದು, ಅವರದ್ದು ನೆಗೆಟಿವ್ ಶೇಡ್‌ನ ಪಾತ್ರವಂತೆ. ಚಿತ್ರಕ್ಕೆ ಭರತ್ ಬಿ.ಜೆ ಸಂಗೀತ ನೀಡಿದ್ದಾರೆ. ಮದನ್ ಬೆಳ್ಳಿಸಾಲು ಒಂದು ಹಾಡು ಬರೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
ZEBRA Movie: ಜೀಬ್ರಾ ಮೇಲೆ ಡಾಲಿ ಕಣ್ಣು
Drone Prathap: ಸಿನಿಮಾರಂಗಕ್ಕೆ ಡ್ರೋನ್ ಪ್ರತಾಪ್ ಎಂಟ್ರಿ; ಮೊದಲ ಚಿತ್ರದಲ್ಲೇ ಹೀರೋ
MUST WATCH
ಹೊಸ ಸೇರ್ಪಡೆ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.