ಕೊಡಗಿನಲ್ಲಿ ಜೆರ್ಸಿ ನಂ. 10 ಭರ್ಜರಿ ಫೈಟ್
Team Udayavani, Jan 1, 2021, 6:15 PM IST
“ಆರ್ಯ ಕೋಟೇಶ್ವರ ಫಿಲಂಸ್’ ಲಾಂಛನದಲ್ಲಿ ಲಾಲು ತಿಮ್ಮಯ್ಯ ಎಂ.ಪಿ, ಪೂವಣ್ಣ ಎಂ.ಟಿ, ರಶೀಂ ಸುಬ್ಬಯ್ಯ ಎಂ.ಬಿ ಜಂಟಿಯಾಗಿ ನಿರ್ಮಿಸುತ್ತಿರುವ “ಜೆರ್ಸಿ ನಂ.10′ ಚಿತ್ರದ ಚಿತ್ರೀಕರಣವನ್ನು ಮಡಿಕೇರಿ ಮತ್ತು ಸೋಮವಾರ ಪೇಟೆಯಸುತ್ತಮುತ್ತ ಸುಮಾರು 15 ದಿನಗಳ ಕಾಲ ನಡೆಸಲಾಯಿತು.
ಈ ಚಿತ್ರೀಕರಣದಲ್ಲಿ, ಚಿತ್ರದಲ್ಲಿ ಬರುವ ಪ್ರಮುಖ ಸಾಹಸ ದೃಶ್ಯಗಳನ್ನು ಥ್ರಿಲ್ಲರ್ ಮಂಜು ಸಾಹಸ ಸಂಯೋಜನೆಯಲ್ಲಿ ಚಿತ್ರೀಕರಿಸಲಾಯಿತು. ಚೇತನ್ ಎಸ್, ನಿರ್ದೇಶಿಸುತ್ತಿರುವ “ಜೆರ್ಸಿನಂ. 10′ ಚಿತ್ರದಲ್ಲಿ ಆದ್ಯಾ ಪೂವಣ್ಣ, ಅನುಷ್ಕಾ ಹೆಗ್ಗಡೆ, ಜೈಜಗದೀಶ್, ಮಂಡ್ಯ ರಮೇಶ್, ದತ್ತಣ್ಣ, ಥ್ರಿಲ್ಲರ್ ಮಂಜು, ಟೆನ್ನಿಸ್‌ಕೃಷ್ಣ, ಜ್ಯೋತಿ ರೈ, ಹೇಮಂತ್ ಕುಮಾರ್, ಶ್ರೀಹರ್ಷವರ್ಧನ್, ಸೌರಬ್, ರಾಘವೇಂದ್ರ, ಜಕ್ಕಪ್ಪ, ಶಂಕರ್ ಅಶ್ವತ್, ಲಕ್ಷ್ಮೀಸಿದ್ಧಾರ್ಥ, ಸೌಮ್ಯ, ಚಂದನ್ ಗೌಡ ಮುಂತಾದವರು ಪ್ರಮುಖಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರಕ್ಕೆ ಉದಯ ಶಂಕರ್‌ಛಾಯಾಗ್ರಹಣ, ಸುರೇಶ್ ಅರಸ್ ಸಂಕಲನವಿದೆ. ಸದ್ಯ ಮೊದಲ ಹಂತದ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ, ಎರಡನೇ ಹಂತದ ಚಿತ್ರೀಕರಣಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಶಂಭೋ ಶಿವಶಂಕರನ ಬಳಗದಲ್ಲಿ ಬಾಲನಟಿ ಮಾನ್ಯ :
ಕಿರುತೆರೆಯ “ಗೀತಾಂಜಲಿ’, “ಅಮೃತವರ್ಷಿಣಿ’ ಮೊದಲಾದ ಧಾರಾವಾಹಿಗಳಲ್ಲಿ ತನ್ನ ಅಭಿನಯದ ಮೂಲಕ ಗುರುತಿಸಿಕೊಂಡಿದ್ದ ಬಾಲನಟಿ ಮಾನ್ಯ ಈಗ ನಿಧಾನವಾಗಿ ಕಿರುತೆರೆಯಜೊತೆಗೆ ಹಿರಿತೆರೆಯಲ್ಲೂ ಬಿಝಿಯಾಗುತ್ತಿದ್ದಾರೆ.
ಈಗಾಗಲೇ ಸುಚೇಂದ್ರ ಪ್ರಸಾದರ “ಸಂದಿಗ್ಧ’ದಲ್ಲಿ ಬಾಲನಟಿಯಾಗಿ ಮಿಂಚಿದ ಮಾನ್ಯ,”ದಂಡುಪಾಳ್ಯ-3′, “ಲೋಪರ್’, “ಒಡೆಯ’ ಚಿತ್ರಗಳಲ್ಲೂ ಕಾಣಿಸಿಕೊಂಡು ಸಿನಿಪ್ರೇಕ್ಷಕರ ಗಮನ ಸೆಳೆಯುವಲ್ಲಿಯಶಸ್ವಿಯಾಗಿದ್ದಾರೆ. ಸದ್ಯ ಮಾನ್ಯ, “ಶಂಭೋಶಿವ ಶಂಕರ’ ಚಿತ್ರದಲ್ಲಿ ಬಾಲನಟಿಯಾಗಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
“ಶಂಭೋ ಶಿವ ಶಂಕರ’ ಚಿತ್ರದಲ್ಲಿ ನಾಯಕಿಯ ತಂಗಿ ಪಾತ್ರ ನಿರ್ವಹಿಸುತ್ತಿರುವ ಮಾನ್ಯ, ತನ್ನ ವಿಭಿನ್ನ ಅಭಿನಯದ ಮೂಲಕ ಪ್ರೇಕ್ಷಕರಿಗೆ ಇಷ್ಟವಾಗುತ್ತಾರೆ ಅನ್ನೋದು ಚಿತ್ರತಂಡ ಮಾತು. ಇದರ ಜೊತೆಗೇ ಮಾನ್ಯ ಕನ್ನಡ ಮತ್ತು ತುಳು ಭಾಷೆಯ ಎರಡು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದು, ಈ ಚಿತ್ರಗಳು ಶೀಘ್ರದಲ್ಲಿಯೇ ಸೆಟ್ಟೇರುವ ಸಾಧ್ಯತೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು
Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.