ಕನ್ನಡ ಮಾತಾಡಿದ ಜಾನಿ, ಗರ ಚಿತ್ರದ ಪಾತ್ರಕ್ಕೆ ಧ್ವನಿ ಕೊಟ್ಟ ಲಿವರ್
Team Udayavani, Jul 18, 2018, 2:23 PM IST
ಬಾಲಿವುಡ್ ನಟ ಕನ್ನಡದ “ಗರ’ ಚಿತ್ರದಲ್ಲಿ ನಟಿಸಿರುವುದು ಗೊತ್ತೇ ಇದೆ. ಈಗ ಹೊಸ ಸುದ್ದಿಯೆಂದರೆ, ಆ ಚಿತ್ರದಲ್ಲಿ ನಟಿಸಿರುವ ಜಾನಿಲಿವರ್ ಅವರು, ತಮ್ಮ ಪಾತ್ರಕ್ಕೆ ತಮ್ಮ ಧ್ವನಿ ಕೊಟ್ಟಿದ್ದಾರೆ. ಹೌದು, ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಇತ್ತೀಚೆಗೆ ಜಾನಿಲಿವರ್ ಧ್ವನಿ ನೀಡಿದ್ದಾರೆ. ಮೂಲತಃ ತೆಲುಗಿನವರಾದ ಜಾನಿಲಿವರ್ ಅವರಿಗೆ ಕನ್ನಡ ಭಾಷೆ ಅಷ್ಟಾಗಿ ಬರಲ್ಲ. ಆದರೆ, ನಿರ್ದೇಶಕ ಮುರಳಿಕೃಷ್ಣ ಅವರು ಕೊಟ್ಟ ಸಂಭಾಷಣೆಯನ್ನು ಅಭ್ಯಾಸ ಮಾಡಿ, ಸತತ ಏಳು ಗಂಟೆಗಳ ಕಾಲ ಅವರು ತಮ್ಮ ಪಾತ್ರಕ್ಕೆ ಧ್ವನಿ ನೀಡಿದ್ದಾರೆ.
25 ಫ್ರೇಂ ಫಿಲಂಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ “ಗರ’ ಚಿತ್ರಕ್ಕೆ ನಿರ್ದೇಶಕರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಈ ಚಿತ್ರಕ್ಕೆ ಸಾಗರ್ ಗುರುರಾಜ್ ಸಂಗೀತ ನೀಡಿದ್ದಾರೆ. ಹೆಚ್.ಸಿ. ವೇಣು ಛಾಯಾಗ್ರಹಣವಿದೆ. ಉಮಾಶಂಕರ್ ಬಾಬು ಸಂಕಲನ ಮಾಡಿದರೆ, ದಿನೇಶ್ ಕಲಾ ನಿರ್ದೇಶನವಿದೆ. ಬಾಲಿವುಡ್ ಖ್ಯಾತಿಯ ಸರೋಜ್‌ಖಾನ್ ನೃತ್ಯ ನಿರ್ದೇಶನ ಮಾಡಿದ್ದಾರೆ.
ಚಿತ್ರದಲ್ಲಿ ರೆಹಮಾನ್, ಆವಂತಿಕ, ಆರ್ಯನ್, ಪ್ರಶಾಂತ್ ಸಿದ್ದಿ, ರಾಮಕೃಷ್ಣ, ರೂಪದೇವಿ, ಮನದೀಪ್ ರಾಯ್, ತಬಲ ನಾಣಿ, ರೋಹಿತ್, ಸುನೇತ್ರಾ ಪಂಡಿತ್, ಸುಚಿತ್ರ, ನಿರಂಜನ್, ರಾಜೇಶ್ ರಾವ್, ಸೋನು, ದಯಾನಂದ್, ಗುರುರಾಜ್ ಕಲಾಲ್‌ಬಂಡಿ ಮುಂತಾದವರು ನಟಿಸಿದ್ದಾರೆ. ಚಿತ್ರದ ಇನ್ನೊಂದು ವಿಶೇಷವೆಂದರೆ, ಜಾನಿಲಿವರ್ ಹಾಗೂ ಸಾಧುಕೋಕಿಲ ಇಲ್ಲಿ ಜೋಡಿಯಾಗಿ ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sathish Ninasam: ಅಶೋಕನಿಗೆ ನೀನಾಸಂ ಸತೀಶ್ ಸಾಥ್
Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ
Sandalwood: ಸ್ಪಾನ್ಸರ್ಸ್ ಇದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್
ಒಳ್ಳೆಯ ಸ್ಕ್ರಿಪ್ಟ್ ಗಾಗಿ ಎದುರು ನೋಡುತ್ತಿದ್ದೇನೆ – ಕಂಬ್ಯಾಕ್ ಬಗ್ಗೆ ರಮ್ಯಾ ಮಾತು
Toxic Movie: ಫ್ಯಾನ್ಸ್ ನಶೆಯೇರಿಸಿದ ಯಶ್; ಹಾಲಿವುಡ್ ರೇಂಜ್‌ನಲ್ಲಿ ಮಿಂಚಿದ ರಾಕಿಭಾಯ್.!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.