ಜಾಲಿ ಬಾರು ಮತ್ತು ಪೋಲಿ ಹುಡುಗರು ಚಿತ್ರದ ಟ್ರೇಲರ್ ರಿಲೀಸ್
Team Udayavani, Jul 20, 2017, 1:56 PM IST
ಶ್ರೀಧರ್ ನಿರ್ದೇಶನದ “ಜಾಲಿ ಬಾರು ಮತ್ತು ಪೋಲಿ ಹುಡುಗರು” ಎಂಬ ಪಕ್ಕಾ ಕಮರ್ಷಿಯಲ್ ಚಿತ್ರವೀಗ ಬಿಡುಗಡೆಗೆ ತಯಾರಾಗಿದೆ. ಇತ್ತೀಚೆಗೆ ಚಿತ್ರದ ಟ್ರೇಲರ್ ಹಾಗೂ ವೀಡಿಯೋ ಹಾಡುಗಳನ್ನು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಬಿಡುಗಡೆ ಮಾಡಿದರು.
ಈ ವೇಳೆ ಮಾತನಾಡಿದ ಪುನೀತ್, ” ಕೃಷ್ಣ ಅವರ “ಜಾಲಿ ಬಾರು ಮತ್ತು ಪೋಲಿ ಹುಡುಗರು” ಸಿನಿಮಾ ಟ್ರೇಲರ್ ಹಾಗೂ ಹಾಡುಗಳನ್ನು ಬಿಡುಗಡೆ ಮಾಡೋಕೆ ಬಹಳ ಖುಷಿಯಾಗುತ್ತಿದೆ. ಈಗಾಗಲೇ ನಾನು ಈ ಸಿನಿಮಾದ ಎರಡು ಹಾಡುಗಳನ್ನು ನೋಡಿದ್ದೀನಿ. ಮೇಕಿಂಗ್ ಕೂಡಾ ತುಂಬಾನೇ ಚನ್ನಾಗಿ ಬಂದಿದೆ. ವೀರ್‌ಸಮರ್ಥ್ ಅವರು ಒಳ್ಳೆಯ ಸಂಗೀತ ನೀಡಿದ್ದಾರೆ. ಎಲ್ಲರಿಗೂ ಈ ಸಿನಿಮಾ ಗೆಲುವು ಕೊಡಲಿ’ ಎಂದು ಶುಭಹಾರೈಸಿದ್ದಾರೆ.
“ಅರವತ್ತರ ದಶಕದಲ್ಲಿ ಯೌವನದ ಬಿಸಿಯಲ್ಲಿ ಹೊಸಾ ಅನುಭವದ ಅನ್ವೇಷಣೆಗೆ ತೊಡಗಿ ಬಾರ್ ಕಮ್ ಪಬ್ಬು ಹೊಕ್ಕಿದ್ದ ಕವಿ ಬಿ ಆರ್ ಲಕ್ಷ್ಮಣರಾಯರು ಬರೆದದ್ದು, “ಜಾಲಿಬಾರಿನಲ್ಲಿ ಪೋಲಿ ಹುಡುಗರು, ಗೋಪಿಯನ್ನು ಪಾಪ ಗೇಲಿ ಮಾಡುತ್ತಿದ್ದರು..’ ಎಂಬ ಭಾವಗೀತೆ. ಇದು ಆ ಕಾಲದಲ್ಲಿಯೇ ಪ್ರಸಿದ್ಧಿಯಾಗಿತ್ತು.
ಹಾಡು ಹಳೆಯದಾದರೂ ಇಂದಿಗೂ ಈ ಗೀತೆ ಪಾಪ್ಯುಲರ್ ಆಗಿದೆ. ಈ ಸಾಲು ಇಟ್ಟುಕೊಂಡೇ ಶ್ರೀಧರ್
ಕಥೆಯೊಂದನ್ನು ಹೆಣೆದು ಸಿನಿಮಾ ಮಾಡಿದ್ದಾರೆ. ವೀರಸಮರ್ಥ್ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ
ವಿಷ್ಣುವರ್ಧನ್ ಅವರ ಛಾಯಾಗ್ರಹಣವಿದೆ. ಸುರೇಶ್ ಸಂಕಲನವಿರುವ ಈ ಚಿತ್ರಕ್ಕೆ ಕ್ರಿಶ್ ಜೋಶಿ ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ರಾಷ್ಟ್ರಾದ್ಯಂತ ಶೈಕ್ಷಣಿಕ ಪಠ್ಯಗಳ ಪೂರೈಕೆಗೆ ಫ್ಲಿಪ್ ಕಾರ್ಟ್ ಮತ್ತು NCERT ಒಪ್ಪಂದ
Karkala: ಹೆದ್ದಾರಿಯಲ್ಲಿ ದಾರಿ ತಪ್ಪಿಸುವ ಡೈವರ್ಶನ್‌ಗಳು!
Malayalam actor: ಹಾಲಿವುಡ್‌ನಲ್ಲೂ ಮಿಂಚಿದ್ದ ಮಾಲಿವುಡ್‌ನ ಹಿರಿಯ ನಟ ಥಾಮಸ್ ನಿಧನ
ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ
Bantwala: ರೈಲಿನಿಂದ ಬಿದ್ದು ವ್ಯಕ್ತಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.