ಅಪ್ಪನ ಜೊತೆ ಜೂನಿಯರ್ ಚಿರುವಿನ ಕ್ಯೂಟ್ ಮಾತುಕತೆ!
Team Udayavani, May 3, 2021, 11:22 AM IST
ಬೆಂಗಳೂರು : 2020ರ ಅಕ್ಟೋಬರ್ 22ರಂದು ಜನಿಸಿದ ಮೇಘನಾರಾಜ್ ಮತ್ತು ಚಿರಂಜೀವಿ ಸರ್ಜಾ ಪುತ್ರ ಕೇವಲ ಕುಟುಂಬಕ್ಕೆ ಮಾತ್ರ ಖುಷಿ ನೀಡಲಿಲ್ಲ, ಇಡೀ ಕರುನಾಡಿಗೆ ಸಂತಸ ತಂದಿದ್ದ. ಸದ್ಯ ಚಿರು ಪುತ್ರ 6 ತಿಂಗಳು ತುಂಬಿದ್ದಾನೆ. ಮಗನ ಆರೈಕೆಯಲ್ಲಿ ಮೇಘನಾರಾಜ್ ಖುಷಿ ಪಡುತ್ತಿದ್ದಾರೆ.
ಸದ್ಯ ಮೇಘನಾ ರಾಜ್ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ಹಾಕಿದ್ದು, ವಿಡಿಯೋದಲ್ಲಿ ಜೂನಿಯರ್ ಚಿರು ಅಪ್ಪನ ಫೋಟೋ ಜೊತೆ ಅವನದ್ದೇ ರೀತಿಯಲ್ಲಿ ಮುಗ್ಧ ಸಂಭಾಷಣೆಯನ್ನು ನಡೆಸಿದ್ದಾನೆ. ಈ ವಿಡಿಯೋ ನೋಡಿದ ಎಂಥವರಿಗೂ ಖಷಿಯಾಗುತ್ತದೆ. ಇನ್ನು ಆರು ತಿಂಗಳು ತುಂಬಿನ ಹಿನ್ನೆಲೆಯಲ್ಲಿ ಅರ್ಧ ವರ್ಷದ ಹುಟ್ಟುಹಬ್ಬವನ್ನೂ ಆಚರಿಸಿಕೊಂಡಿದ್ದಾನೆ.
ಮೇಘನಾ ಪುತ್ರ ಹುಟ್ಟಿದಾಗಲೇ ಅಪ್ಪನನ್ನು ಹೋಲುತ್ತಾನೆ ಎಂದು ಎಲ್ಲರೂ ಹೇಳಿದ್ದರು. ಇಷ್ಟೆ ಅಲ್ಲದೆ, ಹುಟ್ಟಿದಾಕ್ಷಣ ಜ್ಯೂನಿಯರ್ ಚಿರು ಮುಖ ನೋಡುವ ಮುನ್ನವೇ ಮೇಘನಾ ರಾಜ್ ಸರ್ಜಾ ತಂದೆ ಚಿರಂಜೀವಿ ಸರ್ಜಾಗೆ ಮಗನನ್ನ ತೋರಿಸಿದ್ದನ್ನು ಇಲ್ಲಿ ನೆನೆಯಬಹುದು.
ಮೇಘನಾ ರಾಜ್ ಕೂಡ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಮುದ್ದು ಮಗನ ಫೋಟೋ ಮತ್ತು ವಿಡಿಯೋಗಳನ್ನು ಹಾಕುತ್ತ ಅಭಿಮಾನಿಗಳಿಗೆ ಖುಷಿ ನೀಡುತ್ತಿದ್ದಾರೆ. ಇನ್ನು ಫ್ಯಾನ್ಸ್ ಗಳಲ್ಲಿ ಜೂನಿಯರ್ ಚಿರು ನಾಮಕರಣ ಯಾವಾಗ ಎಂಬ ಕುತೂಹಲ ಇದೆ.
View this post on Instagram
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.