Jugari Cross: ಸಿನಿಮಾವಾಗಿ ಬರಲಿದೆ ಪೂರ್ಣಚಂದ್ರ ತೇಜಸ್ವಿ ಅವರ ʼಜುಗಾರಿ ಕ್ರಾಸ್ʼ ಕಾದಂಬರಿ
Team Udayavani, Sep 8, 2024, 3:12 PM IST
ಬೆಂಗಳೂರು: ಕನ್ನಡ ಸಾಹಿತ್ಯ ರಂಗಕ್ಕೆ ʼಮಾಯಾಲೋಕʼ ಪರಿಚಯಿಸಿ ʼಚಿದಂಬರ ರಹಸ್ಯʼವನ್ನಿರಿಸಿದ ʼಮೂಡಿಗೆರೆಯ ಮಾಯಾವಿʼ ಪೂರ್ಣಚಂದ್ರ ತೇಜಸ್ವಿ(Poornachandra Tejaswi) ಅವರು ಇಂದು ಹುಟ್ಟಿದ ದಿನ (ಸೆ.8ರಂದು). ಇಂದು ಅವರು ನಮ್ಮೊಂದಿಗಿಲ್ಲ ಆದರೆ ಅವರು ಹೇಳಿದ ಪರಿಸರದ ಕಥೆ, ಸೃಷ್ಟಿಸಿದ ಪಾತ್ರಗಳು ಕನ್ನಡ ಸಾಹಿತ್ಯವನ್ನು ಇಷ್ಟಪಡುವ ಅನೇಕರ ಮನಸ್ಸಿನಲ್ಲಿ ಜೀವಂತವಾಗಿ ಉಳಿದಿದೆ.
ತೇಜಸ್ವಿ ಹುಟ್ಟುಹಬ್ಬದಂದು ಸ್ಯಾಂಡಲ್ ವುಡ್‌ನಲ್ಲಿ(Sandalwood) ಹೊಸ ಸಿನಿಮಾವೊಂದು ಅನೌನ್ಸ್ ಆಗಿದೆ. ಅವರ ಜನಪ್ರಿಯ ಕಾದಂಬರಿಗಳಲ್ಲಿ ಒಂದಾಗಿರುವ ʼಜುಗಾರಿ ಕ್ರಾಸ್ʼ ಕಥೆಯನ್ನು ಆಧರಿಸಿಕೊಂಡು ಈ ಸಿನಿಮಾ ಮೂಡಿಬರುತ್ತಿದೆ.
ಪ್ರಜ್ವಲ್ ದೇವರಾಜ್ ಅವರ ‘ಕರಾವಳಿʼ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿರುವ ಗುರುದತ್ ಗಾಣಿಗ (Gurudatha Ganiga) ಈ ʼಜುಗಾರಿ ಕ್ರಾಸ್ʼ(Jugari Cross) ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ.
ತೇಜಸ್ವಿ ಅವರ ಹುಟ್ಟುಹಬ್ಬಕ್ಕೆ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದ್ದು, ಪುಸ್ತಕವೊಂದರ ಮೇಲೆ ರೈಲೊಂದು ಹೋಗುವ ಲುಕ್ ಪೋಸ್ಟರ್ ನಲ್ಲಿದೆ. “ದಂತಕತೆಯ ಜನುಮದಿನದ ಸಂಭ್ರಮದಲ್ಲಿ ಲೋಕವೇ ಮೆಚ್ಚಿದ ಅವರ ಶ್ರೇಷ್ಠ ಕೃತಿ ಸಿನಿಮಾವಾಗುವ ಸಮಯ” ನಿರ್ದೇಶಕರು ಬರೆದುಕೊಂಡಿದ್ದಾರೆ.
View this post on Instagram
2025ಕ್ಕೆ ಸಿನಿಮಾ ತೆರೆಗೆ ಬರಲಿದೆ ಎಂದು ಪೋಸ್ಟರ್‌ನಲ್ಲಿ ತಿಳಿಸಲಾಗಿದೆ. ʼಜುಗಾರಿ ಕ್ರಾಸ್ʼ ಕಾದಂಬರಿ ಕನ್ನಡ ಸಾಹಿತ್ಯದ ಅತ್ಯುತ್ತಮ ಕಾದಂಬರಿಗಳಲ್ಲಿ ಒಂದು. ವನ್ಯ ಸಂಪತ್ತು, ದರೋಡೆ, ಭೂಗತ ಕೃತ್ಯದ ವಿಚಾರಗಳನ್ನು ಹೇಳುವ ಕಾದಂಬರಿಯಲ್ಲಿ ಒಡಲ ಸಂಪತ್ತು ಹೇಗೆಲ್ಲ ಲೂಟಿ ಆಗುತ್ತದೆನ್ನುವುದನ್ನು ಹೇಳಲಾಗಿದೆ.
ಸದ್ಯ ಫಸ್ಟ್ ಲುಕ್ ಪೋಸ್ಟರ್ ಮಾತ್ರ ರಿಲೀಸ್ ಆಗಿದ್ದು, ಕಲಾವಿದರು ಹಾಗೂ ಪಾತ್ರ ವರ್ಗದ ಬಗ್ಗೆ ಯಾವ ಮಾಹಿತಿಯೂ ಹೊರಬಿದ್ದಿಲ್ಲ.
ಸದ್ಯ ಗುರುದತ್ ʼಕರಾವಳಿʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ತೇಜಸ್ವಿ ಅವರ ಕಾದಂಬರಿಯನ್ನು ಆಧರಿಸಿ ಸಿನಿಮಾ ಬರುತ್ತಿರುವುದು ಇದೇ ಮೊದಲಲ್ಲ ಈ ಹಿಂದೆ ʼಕಿರಗೂರಿನ ಗಯ್ಯಾಳಿಗಳುʼ ಎನ್ನುವ ಸಿನಿಮಾ ಬಂದಿತ್ತು. ಇದನ್ನು ಸುಮನಾ ಕಿತ್ತೂರು ನಿರ್ದೇಶನ ಮಾಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.