Kaala Patthar Movie: ಕಾಲಾಪತ್ಥರ್ ಟ್ರೇಲರ್‌ಗೆ ಶಿವಣ್ಣ ಸಾಥ್
Team Udayavani, Sep 10, 2024, 4:14 PM IST
ವಿಕ್ಕಿ ವರುಣ್ ನಿರ್ದೇಶಿಸಿ, ನಾಯಕನಾಗೂ ನಟಿಸಿರುವ ‘ಕಾಲಾಪತ್ಥರ್’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಲುಲು ಮಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ನಟ ಶಿವರಾಜ್‌ಕುಮಾರ್ ಟ್ರೇಲರ್ ರಿಲೀಸ್ ಮಾಡಿ ಶುಭಕೋರಿದರು.
ಚಿತ್ರದ ಟ್ರೇಲರ್ ನೋಡಿದಾಗ ಈ ಸಿನಿಮಾ ಹಿಟ್ ಆಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಚಿತ್ರದಲ್ಲೊಂದು ಗಟ್ಟಿ ಕಂಟೆಂಟ್ ಇದೆ. ಇಂತಹ ಸಿನಿಮಾಗಳನ್ನು ನಮ್ಮ ಕನ್ನಡ ಜನತೆ ಕೈ ಹಿಡಿದಾಗ ಮತ್ತಷ್ಟು ಪ್ರತಿಭೆಗಳು ಚಿತ್ರರಂಗದಲ್ಲಿ ನೆಲೆ ನಿಲ್ಲಲು ಸಾಧ್ಯವಾಗುತ್ತದೆ ಎಂದರು.
ಭುವನ್ ಮೂವೀಸ್ ಲಾಂಛನದಲ್ಲಿ ಭುವನ್ ಸುರೇಶ್ ಹಾಗೂ ನಾಗರಾಜ್ ಬಿಲ್ಲಿನಕೋಟೆ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಕಾರ್ಯಕ್ರಮಕ್ಕೆ ಆಗಮಿಸಿದ ಶಿವರಾಜ್‌ಕುಮಾರ್ ಅವರಿಗೆ ಭುವನ್ ಮೂವೀಸ್ ವತಿಯಿಂದ ಬೆಳ್ಳಿ ಗದೆ ನೀಡಲಾಯಿತು. ಆ ಗದೆಯೊಂದಿಗೆ ಶಿವಣ್ಣ ಫೋಸ್ ಕೊಟ್ಟು ಖುಷಿಪಟ್ಟರು. ಟ್ರೇಲರ್ ಬಗ್ಗೆ ಹೇಳುವುದಾದರೆ,ಚಿತ್ರದ ಶೀರ್ಷಿಕೆಗೆ ತಕ್ಕ ಹಾಗೆ ಇದೊಂದು ಕಪ್ಪು ಕಲ್ಲಿನ ಕಥೆ. ಸಿನಿಮಾದ ನಾಯಕ ಯೋಧನಾಗಿ ಇಲ್ಲಿ ಕಾಣಿಸಿಕೊಂಡಿದ್ದಾನೆ. ಊರಿಗೆ ಹೆಮ್ಮೆ ತರುವ ಕೆಲಸ ಮಾಡಿದಾಗ, ಊರಲ್ಲಿ ಅವನ ಕಲ್ಲಿನ ಪ್ರತಿಮೆ ಎದ್ದು ನಿಲ್ಲುತ್ತೆ. ಅಲ್ಲಿಂದ ಮುಂದೆ ಏನೆಲ್ಲ ನಡೆಯುತ್ತೆ ಎಂಬುದೇ ಸಿನಿಮಾದ ವಿಷಯ.
ಕಥಾ ನಾಯಕ ಹಾಗೂ ಆ ಕಲ್ಲಿನ ಪ್ರತಿಮೆ ನಡುವಿನ ಬಂಧ, ದ್ವೇಷ, ಹೊಡೆದಾಟ, ಇವೆಲ್ಲದರ ನಡುವೆ ಇಲ್ಲೊಂದು ನವೀರಾದ ಪ್ರೇಮಕಥೆಯೂ ಇದೆ. ಕಾಲಾಪತ್ಥರ ಮೂಲಕ ಹೊಸಬಗೆಯ ಮನರಂಜನೆಯನ್ನು ಪ್ರೇಕ್ಷಕರು ನಿರೀಕ್ಷಿಸಬಹುದು. ಈ ಚಿತ್ರ ಸೆ.13 ಚಿತ್ರ ತೆರೆಗೆ ಬರಲಿದೆ. ಧನ್ಯಾ ಈ ಚಿತ್ರದ ನಾಯಕಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ವಿಜಯಪುರ: ಕ್ರಾಂತಿವೀರ ಬ್ರಿಗೇಡ್ ಉದ್ಘಾಟನೆ… ಸಾಧು-ಸಂತರ ಮೂಲಕ ಈಶ್ವರಪ್ಪ ಶಕ್ತಿ ಪ್ರದರ್ಶನ
Trade War: ಅಮೆರಿಕದ ಕಲ್ಲಿದ್ದಲು, ಅನಿಲ ಆಮದಿನ ಮೇಲೆ ಶೇ.15ರಷ್ಟು ಸುಂಕ ಹೇರಿದ ಚೀನಾ!
Karkala: ಅಪಘಾತದಲ್ಲಿ ವರ್ಷಕ್ಕೆ 30 ಮಂದಿ ಮೃತ್ಯು
Kalaburagi: MLC ಬಿ.ಜಿ. ಪಾಟೀಲ್ ಒಡೆತನದ ಶಾಲೆಗೆ ಬಾಂಬ್ ಬೆದರಿಕೆ: ಕೆಲ ಕಾಲ ಆತಂಕ
Gangolli: ಮೊವಾಡಿ ಕಾಂಕ್ರೀಟ್ ರಸ್ತೆ; ಕಳಪೆ ಕಾಮಗಾರಿ ಆರೋಪ