ಪೌರ ಸೇವಕರಿಗೆ “ಕಾಣದಂತೆ ಮಾಯವಾದನು’ ವಿಶೇಷ ಪ್ರದರ್ಶನ
Team Udayavani, Feb 26, 2020, 7:00 AM IST
ಇತ್ತೀಚೆಗಷ್ಟೆ ಬಿಡುಗಡೆಯಾದ “ಕಾಣದಂತೆ ಮಾಯವಾದನು’ ಚಿತ್ರ ಬಿಡುಗಡೆ ಯಾದ ಎಲ್ಲ ಕೇಂದ್ರಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡು ಮುನ್ನಡೆಯುತ್ತಿದೆ. ಇದೇ ವೇಳೆ ಚಿತ್ರತಂಡ, ಮೈಸೂರು ನಗರದ ಸುಮಾರು 3 ಸಾವಿರ ಪೌರಕಾರ್ಮಿಕರು ಮತ್ತವರ ಕುಟುಂಬದವರಿಗೆ ಉಚಿತವಾಗಿ ಚಿತ್ರ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿದೆ.
ಮೈಸೂರು ನಗರಕ್ಕೆ ಸ್ವಚ್ಛ ಭಾರತ ಅಭಿಯಾನದಲ್ಲಿ ಸ್ವಚ್ಛ ನಗರಿ ಎಂಬ ಹಿರಿಮೆ ಮುಡಿಗೇರಿರುವುದರಿಂದ, ಇದಕ್ಕೆ ಕಾರಣರಾದ ಮಹಾನಗರದ ಪೌರ ಕಾರ್ಮಿಕರಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ಚಿತ್ರತಂಡ ಇಂಥದ್ದೊಂದು ವಿಭಿನ್ನ ಕಾರ್ಯಕ್ಕೆ ಮುಂದಾಗಿದೆ. ಇದೇ ಫೆ. 24 ರಿಂದ ಫೆ. 26 ವರೆಗೆ ಮೈಸೂರಿನ ವುಡ್‌ಲ್ಯಾಂಡ್ಸ್ ಚಿತ್ರಮಂದಿರದಲ್ಲಿ ಪ್ರತಿದಿನ ಸಂಜೆ 4.30 ಮತ್ತು 7.30ರ ಪ್ರದರ್ಶನ ವನ್ನು ಪೌರ ಕಾರ್ಮಿಕರಿಗೆ ಚಿತ್ರತಂಡ ವಿಶೇಷ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.
ವಿಕಾಸ್, ಸಿಂಧು ಲೋಕನಾಥ್, ಧರ್ಮಣ್ಣ ಕಡೂರ್, ಅಚ್ಯುತ ಕುಮಾರ್, ಸುಚೇಂದ್ರ ಪ್ರಸಾದ್, ವಿನಯಾ ಪ್ರಕಾಶ್, ಉದಯ್, ಭಜರಂಗಿ ಲೋಕಿ, ಸೀತಾ ಕೋಟೆ, ಬಾಬು ಹಿರಣ್ಣಯ್ಯ ಮೊದಲಾದವರು “ಕಾಣದಂತೆ ಮಾಯವಾದನು’ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿ ದ್ದಾರೆ. ಸಸ್ಪೆನ್ಸ್ ಕಂ ಥ್ರಿಲ್ಲರ್ ಕಥಾಹಂದರ ಹೊಂದಿರುವ “ಕಾಣದಂತೆ ಮಾಯ ವಾದನು’ ಚಿತ್ರಕ್ಕೆ ರಾಜ್ ಪತ್ತಿಪಾಟಿ ನಿರ್ದೇಶನವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Sandalwood: ಮಾಸ್ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
MUST WATCH
ಹೊಸ ಸೇರ್ಪಡೆ
FIP Padel: ಭಾರತದ ಮೊದಲ ಎಫ್‌ಐಪಿ ಪ್ಯಾಡಲ್ ಟೂರ್ನಮೆಂಟ್ ಆರಂಭ
Bengaluru: ಬಟ್ಟೆ ಗುಣಮಟ್ಟ ದೃಢೀಕರಣಕ್ಕೂ ಬಂತು ಸೆನ್ಸರ್!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.