Kaatera: ಮೊದಲ ದಿನವೇ ʼಕಾಟೇರʼನಿಗೆ ಕೋಟಿ ಕೋಟಿ ಬ್ಯುಸಿನೆಸ್; ಗಳಿಸಿದ್ದೆಷ್ಟು?
Team Udayavani, Dec 30, 2023, 11:48 AM IST
ಬೆಂಗಳೂರು: ಡಿಬಾಸ್ ದರ್ಶನ್ ಅಭಿನಯದ ʼಕಾಟೇರʼ ಸಿನಿಮಾಕ್ಕೆ ನಿರೀಕ್ಷೆಯಂತೆ ಪಾಸಿಟಿವ್ ಆರಂಭ ಸಿಕ್ಕಿದೆ. ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ ಕಾಣುವ ಮೂಲಕ ವರ್ಷಾಂತ್ಯಕ್ಕೆ ಕನ್ನಡ ಸಿನಿರಂಗಕ್ಕೆ ಖುಷಿಯ ವಿದಾಯ ಸಿಕ್ಕಿದೆ.
ದರ್ಶನ್ ಸಿನಿಕೆರಿಯರ್ ನಲ್ಲಿ ʼಕಾಟೇರʼ ಡಿಫ್ರೆಂಟ್ ಸಿನಿಮಾವೆಂದರೆ ತಪ್ಪಾಗದು. ಮಾಸ್ ಡೈಲಾಗ್ಸ್, ಫೈಟ್ ಗಳಿಗಿಂತ ನಿರ್ದೇಶಕ ತರುಣ್ ಅವರು ಇಲ್ಲಿ ಕಂಟೆಂಟ್ ಹೆಚ್ಚಿನ ಮಹತ್ವ ಕೊಟ್ಟಿದ್ದಾರೆ. ಗ್ರಾಮೀನ ಸೊಗಡಿನಲ್ಲಿರುವ ಕಥೆ ಹಾಗೂ ಊರಿನಲ್ಲಿರುವ ಜಾತಿ – ಧರ್ಮದ ಆಚರಣೆಯನ್ನು ಸಿನಿಮಾದಲ್ಲಿ ಹೇಳಲಾಗಿದೆ.
ದರ್ಶನ್ ಅವರ ಸಿನಿಮಾದಲ್ಲಿ ಪ್ರೇಕ್ಷಕರು ಫೈಟ್ ಸೀನ್ ಗಳನ್ನು ನೋಡಿ ಹಾಗೂ ಡೈಲಾಗ್ಸ್ ಗಳನ್ನು ಕೇಳಿಯೇ ಥಿಯೇಟರ್ ನಲ್ಲಿ ಚಪ್ಪಾಳೆ ತಟ್ಟುತ್ತಾರೆ. ಆದರೆ ಬಹು ಸಮಯದ ಬಳಿಕ ದರ್ಶನ್ ಪರಿಪೂರ್ಣ ನಟನಾಗಿ ಸ್ಕ್ರೀನ್ ಮೇಲೆ ಕಾಣಿಸಿಕೊಂಡಿದ್ದು, ಅವರ ಎರಡು ಶೇಡ್ ಗಳ ಪಾತ್ರಕ್ಕೆ ಶ್ಲಾಫನೆ ಸಿಕ್ಕಿದೆ.
ಸಿನಿಮಾ ಭರ್ಜರಿ ಆರಂಭ ಪಡೆದುಕೊಂಡಿದ್ದು, ಮೊದಲ ದಿನವೇ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಗಳಿಕೆ ಕಂಡಿದೆ. ಫಸ್ಟ್ ಡೇ 19.79 ಕೋಟಿ ರೂ. ಗಳಿಸಿದೆ. ಆ ಮೂಲಕ ದೊಡ್ಡ ಆರಂಭವನ್ನು ಪಡೆದುಕೊಂಡಿದೆ.
45 ಕೋಟಿ ಬಜೆಟ್‌ನಲ್ಲಿ ರಾಕ್‌ಲೈನ್ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್ ಸಿನಮಾ ನಿರ್ಮಾಣವಾಗಿದೆ. ಸುಧಾಕರ್ ಎಸ್ ರಾಜ್ ಛಾಯಾಗ್ರಹಣ ಮತ್ತು ಕೆ ಎಂ ಪ್ರಕಾಶ್ ಸಂಕಲನಕಾರರಾಗಿ ಕೆಲಸ ಮಾಡಿದ್ದಾರೆ. ವಿ ಹರಿಕೃಷ್ಣ ಚಿತ್ರದ ಸಂಪೂರ್ಣ ಹಿನ್ನೆಲೆ ಸಂಗೀತ ಮತ್ತು ಸಂಗೀತ ಸಂಯೋಜಿಸಿದ್ದಾರೆ.
ಸಿನಿಮಾದಲ್ಲಿ ದರ್ಶನ್, ಆರಾಧನಾ, ಶ್ರುತಿ, ಕುಮಾರ್ ಗೋವಿಂದ, ಜಗಪತಿ ಬಾಬು, ವಿನೋದ್ ಆಳ್ವ, ಬಿರಾದಾರ್ ಮುಂತಾದವರು ನಟಿಸಿದ್ದಾರೆ.
.#Kaatera storms the box office on day one with a staggering collection of #Rs 19.79 crores, setting the stage for massive celebrations! 🎉 Experience the grandeur of this @RocklineEnt production directed by @TharunSudhir in theaters! Witness one of @dasadarshan‘s finest… pic.twitter.com/ACfxL1ofTB
— A Sharadhaa (@sharadasrinidhi) December 30, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್ ಗೆ ಆಹ್ವಾನವಿಲ್ಲ! ದಿಗ್ಗಜನ ಬೇಸರ
Gundlupete: ಅಕ್ರಮವಾಗಿ 3 ಕೆ.ಜಿ. 100 ಗ್ರಾಂ ಗಾಂಜಾ ಸಾಗಣೆ: ಬಂಧನ
Odisha: ಕಾರಿಗೆ ಟ್ರಕ್ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು
Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.