Kaatera; ಮಿಡ್ ನೈಟ್‌ನಲ್ಲಿ ಅಭಿಮಾನಿಗಳ ಸಂಭ್ರಮ: ಸ್ಯಾಂಡಲ್‌ವುಡ್ ನಲ್ಲಿ ಹೊಸ ಸಂಚಲನ
Team Udayavani, Dec 30, 2023, 10:38 AM IST
ಬಹುಶಃ ಈ ವರ್ಷ ಸಿನಿಮಾ ಪ್ರೇಮಿಗಳು ಇಷ್ಟೊಂದು ದೊಡ್ಡ ಸಂಭ್ರಮಕ್ಕೆ ಸಾಕ್ಷಿಯಾಗಿರಲಿಲ್ಲ. ಆದರೆ, “ಕಾಟೇರ’ ಚಿತ್ರ ಅಭಿಮಾನಿಗಳ ಆ ಕೊರಗನ್ನು ಮರೆಸಿದೆ. ದರ್ಶನ್ ನಾಯಕರಾಗಿರುವ “ಕಾಟೇರ’ ಅದ್ಧೂರಿಯಾಗಿ ಬಿಡುಗಡೆಯಾಗಿದ್ದು, ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಬಹುತೇಕ ಚಿತ್ರಮಂದಿರಗಳಲ್ಲಿ ಗುರುವಾರ ಮಧ್ಯರಾತ್ರಿ 12 ಗಂಟೆಯಿಂದಲೇ ವಿಶೇಷ ಪ್ರದರ್ಶನ ಆರಂಭವಾಗಿದ್ದು, ಸಿನಿಮಾ ನೋಡಿದ ಫ್ಯಾನ್ಸ್ ಖುಷಿಯಾಗಿದ್ದಾರೆ.
“ಕಾಟೇರ’ ಚಿತ್ರ 389 ಸಿಂಗಲ್ ಸ್ಕ್ರೀನ್, 72 ಮಲ್ಟಿಪ್ಲೆಕ್ಸ್‌ಗಳಲ್ಲಿ ತೆರೆಕಂಡಿದೆ. ಮೊದಲ ದಿನ 1670 ಶೋಗಳು ನಡೆದಿದ್ದು, 1544ಕ್ಕೂ ಹೆಚ್ಚು ಶೋಗಳು ಸೋಲ್ಡ್ ಔಟ್ ಆಗುವ ಮೂಲಕ ಇಡೀ ತಂಡ ಖುಷಿಯಾಗಿದೆ. ಅಭಿಮಾನಿಗಳ ಕುತೂಹಲ ತಣಿಸಲು ರಾಜ್ಯಾದ್ಯಂತ 87 ಮಿಡ್‌ನೈಟ್ ಶೋಗಳು ನಡೆಯುವ ಮೂಲಕ “ಕಾಟೇರ’ ತನ್ನ ಹವಾ ಸಾಬೀತುಪಡಿಸಿದೆ.
ಕಲೆಕ್ಷನ್ ವಿಚಾರಕ್ಕೆ ಬರುವುದಾದರೆ ಗಾಂಧಿನಗರದ ಮೂಲಗಳ ಪ್ರಕಾರ ಕಾಟೇರ ಮೊದಲ ದಿನ 14.79 ಕೋಟಿ ರೂಪಾಯಿ ಬಾಚಿಕೊಂಡಿದೆ. ಪ್ಯಾನ್ ಇಂಡಿಯಾ ಹೊರತಾಗಿ ಬಿಡುಗಡೆಯಾ ಚಿತ್ರ “ಕಾಟೇರ’ ಎಂಬುದು ಗಮನಾರ್ಹ.ಸದ್ಯ ಭರ್ಜರಿ ಪ್ರದರ್ಶನ ಕಾಣುವ ಮೂಲಕ “ಕಾಟೇರ’ ತನ್ನ ಓಟದ ವೇಗವನ್ನು ಹೆಚ್ಚಿಸಿಕೊಂಡಿರುವುದು ಸುಳ್ಳಲ್ಲ. ವಾರಾಂತ್ಯ “ಕಾಟೇರ’ ಬಾಕ್ಸ್ ಆಫೀಸ್‌ನಲ್ಲಿ ಹಬ್ಬ ಮಾಡುವುದರಲ್ಲಿ ಸಂದೇಹವೇ ಇಲ್ಲ ಎಂಬುದು ಸಿನಿಪಂಡಿತರ ಲೆಕ್ಕಾಚಾರ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.