ಟ್ರೇಲರ್ ಜೊತೆ ಬಂದ ನೋಡಿ ಕಡಲ ತಡಿಯ ಭಾರ್ಗವ!
Team Udayavani, Oct 21, 2019, 6:04 PM IST
ಕನ್ನಡ ಚಿತ್ರರಂಗವೀಗ ಹೊಸಾ ಸಾಧ್ಯತೆಗಳತ್ತ ತೆರೆದುಕೊಂಡಿದೆ. ಈ ಕಾರಣದಿಂದಲೇ ಒಂದು ಕಾಲದಲ್ಲಿ ಕನ್ನಡದತ್ತ ಅಸಡ್ಡೆಯಿಂದ ನೋಡುತ್ತಿದ್ದ ಕಣ್ಣುಗಳಲ್ಲಿಯೇ ಬೆರಗೊಂದು ಪ್ರತಿಷ್ಠಾಪನೆಗೊಂಡು ಬಹಳಷ್ಟು ಕಾಲ ಸಂದಿದೆ. ಈ ಕಾರಣದಿಂದಲೇ ಪರಭಾಷೆಗಳಿಗೂ ಸ್ಪರ್ಧೆಯೊಡ್ಡುವ ಕಂಟೆಂಟು ಹೊಂದಿರೋ ಸಿನಿಮಾಗಳೇ ಸೃಷ್ಟಿಯಾಗುತ್ತಿವೆ. ಇಂಥಾ ಹೊಸಾ ಸ್ವರೂಪದ, ಹೊಸಾ ಅಲೆಯ ಚಿತ್ರಗಳ ಸಾಲಿನಲ್ಲಿ ಕಡಲ ತೀರದ ಭಾರ್ಗವ ಚಿತ್ರವೂ ಸೇರಿಕೊಳ್ಳುತ್ತದೆ. ಆರಂಭದಿಂದಲೂ ಸುದ್ದಿ ಕೇಂದ್ರದಲ್ಲಿರುವ ಈ ಚಿತ್ರದ ಟ್ರೇಲರ್ ಇದೀಗ ಬಿಡುಗಡೆಗೊಂಡಿದೆ.
ಈ ಟ್ರೇಲರ್ ಮೂಡಿ ಬಂದಿರೋ ರೀತಿಯೇ ಕುತೂಹಲಕಾರಿಯಾಗಿದೆ. ಇದಲನ್ನು ಕಂಡ ಯಾರೊಬ್ಬರೂ ಈ ಸಿನಿಮಾ ಬಗ್ಗೆ ಕುತೂಹಲದಿಂದ ಕಾಯದಿರಲು ಸಾಧ್ಯವೇ ಇಲ್ಲ. ತನ್ನ ಪ್ರತೀ ಫ್ರೇಮಿನ ರಿಚ್‌ನೆಸ್ ಮೂಲಕವೇ ಗಮನ ಸೆಳೆಯೋ ಈ ಟ್ರೇಲರ್ ಅದಕ್ಕೆ ತಕ್ಕುದಾದ ಕಥೆಯ ಸುಳಿವಿನೊಂದಿಗೆ ವಿಜೃಂಭಿಸಿದೆ. ಪ್ರೀತಿಯ ಛಾಯೆಯೊಂದಿಗೇ ತೆರೆಯದುಕೊಳ್ಳುವ ಈ ಟ್ರೇಲರ್, ಆ ನಂತರದಲ್ಲಿ ನಶೆ, ದ್ವೇಷವೂ ಸೇರಿದಂತೆ ಗುರುತು ಹಿಡಿಯಲಾರಂದಂಥಾ ನಿಗೂಢ ಕಥೆಯ ಸುಳಿವು ಕೊಡುತ್ತದೆ. ಈ ಮೂಲಕವೇ ಚಿತ್ರತಂಡ ಮತ್ತಷ್ಟು ಪ್ರೇಕ್ಷಕರನ್ನು ಬಿಡುಗಡೆಯ ಹೊಸ್ತಿಲಲ್ಲಿಯೇ ಸೆಳೆದುಕೊಳ್ಳುವಲ್ಲಿಯೂ ಗೆದ್ದಿದೆ.
ಇದು ಪನ್ನಗ ಸೋಮಶೇಖರ್ ನಿರ್ದೇಶನದಲ್ಲಿ ಮೂಡಿ ಬಂದಿರೋ ಮೊದಲ ಚಿತ್ರ. ಈಗಾಗಲೇ ಒಂದಷ್ಟು ಕಿರುಚಿತ್ರಗಳನ್ನು ನಿರ್ದೇಶನ ಮಾಡಿರುವ ಪನ್ನಗ ಕಿರುತೆರೆಯಲ್ಲಿಯೂ ಒಂದಷ್ಟು ವರ್ಷಗಳ ಕಾಲ ಪಳಗಿಕೊಂಡಿದ್ದಾರೆ. ಸಿನಿಮಾ ಬಗ್ಗೆ ಎಲ್ಲ ಕೋನಗಳಿಂದಲೂ ತಿಳಿದುಕೊಂಡಿರೋ ಪನ್ನಗ ವಿಶಿಷ್ಟವಾದ ಕಥೆಯೊಂದಿಗೆ ಈ ಸಿನಿಮಾವನ್ನು ಕಟ್ಟಿ ಕೊಟ್ಟಿದ್ದಾರಂತೆ. ಇದರಲ್ಲಿ ಭರತ್ ಗೌಡ ಮತ್ತು ವರುಣ್ ರಾಜ್ ನಾಯಕರಾಗಿ ನಟಿಸಿದ್ದಾರೆ. ಇವಕಲಾ ಬ್ಯಾನರ್‌ನಡಿಯಲ್ಲಿ ನಿರ್ಮಾಣಗೊಂಡಿರೋ ಈ ಚಿತ್ರದಲ್ಲಿ ಬಿಗ್ ಬಾಸ್ ಖ್ಯಾತಿಯ ಶ್ರುತಿ ಪ್ರಕಾಶ್ ನಾಯಕಿಯಾಗಿ ಮಿಂಚಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.