ಕೈಲಾಸ ತೋರಿಸಲು ಹೊರಟ ಹೊಸಬರು
Team Udayavani, Mar 26, 2022, 3:51 PM IST
“ಕೈಲಾಸ ಕಾಸಿದ್ರೆ’ – ಹೀಗೊಂದು ಸಿನಿಮಾ ಸದ್ದಿಲ್ಲದೇ ಚಿತ್ರೀಕರಣಗೊಂಡು, ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ಇತ್ತೀಚೆಗೆ ಈ ಚಿತ್ರದ ಟೀಸರ್ ಬಿಡುಗಡೆಯಾಯಿತು. ಈ ಚಿತ್ರವನ್ನು ಅನಂತಪುರದ ವಾಸಿಕ್ ಅನ್ಸಾದ್ ಅವರು ನಿರ್ಮಿಸಿದ್ದು, ನಾಗ್ ವೆಂಕಟ್ ನಿರ್ದೇಶನವಿದೆ.
ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ನಾಗ್ ವೆಂಕಟ್, ನಮ್ಮ ಈ ಸಮಾಜದಲ್ಲಿ ಯುವಜನತೆ ಡ್ರಗ್ ಮಾಫಿಯಾ ಸೇರಿದಂತೆ ಅನೇಕ ದುಷ್ಟ ಚಟುವಟಿಕೆಗಳಿಗೆ ಬಲಿಯಾಗಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದನ್ನೇ ಕೇಂದ್ರವಾಗಿಟ್ಟುಕೊಂಡು ಈ ಚಿತ್ರವನ್ನು ನಿರ್ದೇಶಿಸಿದ್ದೇನೆ. ಬರೀ ಇಷ್ಟೇ ಅಲ್ಲದೇ ಇದೊಂದು ಪ್ರೇಮಕಾವ್ಯ. ನಗುವಿಗೂ ನಮ್ಮ ಸಿನಿಮಾದಲ್ಲಿ ಭರವಿಲ್ಲ. ನಾನು ಮೂಲತಃ ಬಳ್ಳಾರಿಯವನು’ ಎಂದರು.
ನಾಯಕ ವೈಭವ್ ಮಾತ ನಾಡಿ, ಇದು ಕನ್ನಡದಲ್ಲಿ ಮಾತ್ರ ಅಲ್ಲ. ನನಗೆ ತಿಳಿದ ಹಾಗೆ ಇಡೀ ದಕ್ಷಿಣ ಭಾರತದಲ್ಲೇ ಹೊಸ ಕಾನ್ಸೆಪ್ಟ್ ಇಟ್ಟುಕೊಂಡು ಮಾಡಿರುವ ಚಿತ್ರ ಅಂತ ಹೇಳಬಹುದು. ಎರಡು ವರ್ಷಗಳ ಹಿಂದೆ ಈ ಚಿತ್ರ ಶುರುವಾಯಿತು. ಸ್ವಲ್ಪ ದಿನಗಳ ನಂತರ ನಾಯಕಿ ಚಿತ್ರ ಬಿಟ್ಟು ಹೊರ ನಡೆದರು. ಈ ವಿಷಯದಲ್ಲಿ ನಿರ್ಮಾಪಕರ ಧೈರ್ಯ ಮೆಚ್ಚಬೇಕು. ದುಡ್ಡಿನ ಕಡೆ ನೋಡದೆ, ಹೊಸ ನಾಯಕಿ ಸುಕನ್ಯಾ ಅವರು ಬಂದ ಕೂಡಲೆ, ಮತ್ತೆ ಮರು ಚಿತ್ರೀಕರಣ ಆರಂಭಿಸಿದರು. ತಾರಕಾಸುರ ಚಿತ್ರದ ಬಳಿಕ ಎರಡು ವರ್ಷಗಳ ನಂತರ ಮತ್ತೂಂದು ವಿಭಿನ್ನ ಪಾತ್ರ ನಿರ್ವಹಣೆ ಮಾಡಿದ್ದೀನಿ ಎನ್ನು ವುದು ವೈಭವ್ ಮಾತು.
ನಿರ್ದೇಶಕ ನಾಗ್ ವೆಂಕಟ್ ಕಥೆ, ಚಿತ್ರಕಥೆ ಬರೆದಿದ್ದಾರೆ. ಆಶಿಕ್ ಅರುಣ್ ಸಂಗೀತ ನೀಡಿದ್ದಾರೆ. ತ್ಯಾಗರಾಜನ್ ಛಾಯಾಗ್ರಹಣ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.