ಕಲಿವೀರನ ಸಾಹಸಗಾಥೆ: ಆಟೋ ಡ್ರೈವರ್‌ಗಳಿಂದ ಟೀಸರ್ ರಿಲೀಸ್
Team Udayavani, Feb 19, 2021, 5:24 PM IST
“ಕಲಿವೀರ’- ಹೀಗೊಂದು ಸಿನಿಮಾದ ಹೆಸರನ್ನು ಕೇಳಿರಬಹುದು. ಈಗ ಈ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಮೊದಲ ಹಂತವಾಗಿ ಚಿತ್ರದ ಟೀಸರ್ ಬಿಡುಗಡೆ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಚಿತ್ರದ ಮೂಲಕ ಅಭಿಮನ್ಯು ಹೀರೋ ಆಗಿ ಚಿತ್ರರಂಗಕ್ಕೆ ಎಂಟ್ರಿಕೊಡುತ್ತಿದ್ದಾರೆ. ಕಲರಿ ಪಯಟ್ಟು, ಯೋಗ, ಜಿಮ್ನಾಸ್ಟಿಕ್, ಸ್ಟಂಟ್‌ಗಳಲ್ಲಿ ಪಳಗಿದವರು ಅಭಿಮನ್ಯು. ಆದರೆ ಸಾಕಷ್ಟು ಕಷ್ಟದಿಂದ ಬಂದವರು. ತಂದೆ-ತಾಯಿಯನ್ನು ಕಳೆದುಕೊಂಡ ಅವರು ಜೀವನ ನಿರ್ವಹಣೆಗಾಗಿ ಆಟೋ ಓಡಿಸಿದ್ದಾರೆ, ಅರ್ಚಕ ವೃತ್ತಿಯನ್ನು ಮಾಡಿದ್ದಾರೆ.
ಈಗ ಆಕಸ್ಮಿಕವಾಗಿ ಚಿತ್ರರಂಗಕ್ಕೆ ಬಂದಿದ್ದಾರೆ. ಟೀಸರ್ ಬಿಡುಗಡೆ ವೇಳೆ ತಮ್ಮ ಪ್ರತಿಭೆ ಪ್ರದರ್ಶಿಸಿ ಚಪ್ಪಾಳೆ ಗಿಟ್ಟಿಸಿಕೊಂಡರು ಅಭಿಮನ್ಯು. ಆದರೆ, ಇದನ್ನು ಕಣ್ತುಂಬಿಕೊಳ್ಳಲು ಅಮ್ಮನೋ ತಮ್ಮ, ತಂಗಿ ಇಲ್ಲವಲ್ಲ ಎಂಬ ಬೇಸರ ಅವರನ್ನು ಕಾಡಿತ್ತು. ಚಿತ್ರದ ಬಗ್ಗೆ ಮಾತನಾಡುವ ಅವರು, “ಈ ಸಿನಿಮಾ ಅವಕಾಶಕ್ಕೆ ನಾನು ಧನ್ಯವಾದ ಹೇಳಲೇಬೇಕು. ಈ ಚಿತ್ರಕ್ಕಾಗಿ ಕಷ್ಟಪಟ್ಟಿದ್ದೇವೆ. ಆದರೆ, ಒಂದೊಳ್ಳೆಯ ಸಿನಿಮಾ ಮಾಡಿದ ಖುಷಿ ಇದೆ. ಈಗ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ನಮ್ಮನ್ನು ಗೆಲ್ಲಿಸಿ’ ಎಂದು ಕೇಳಿಕೊಂಡರು. ಇನ್ನು, ಅಭಿಮನ್ಯು ಆಟೋ ಡ್ರೈವರ್ ಆಗಿದ್ದವರು. ಹಾಗಾಗಿ, ತಮ್ಮ ಕಾರ್ಯಕ್ರಮಕ್ಕೆ ಆಟೋ ಡ್ರೈವರ್‌ಗಳನ್ನು ಕರೆಸಿ ಅವರಿಂದಲೇ ಟೀಸರ್ ರಿಲೀಸ್ ಮಾಡಿಸಿದರು.
ಇದನ್ನೂ ಓದಿ:100 ಕೋಟಿ ಲೂಟಿಗೆ ಸ್ಕೆಚ್! ಚೇತನ್ ಹೇಳಿದ ಕೋಟಿ ಕಥೆ
ಈ ಚಿತ್ರವನ್ನು ಅಭಿ ನಿರ್ದೇಶಿಸಿದ್ದಾರೆ. ಚಿತ್ರದ ಟೈಟಲ್‌ನಲ್ಲೇ ಫೋರ್ಸ್ ಇರುವುದರಿಂದ ಅದಕ್ಕೆ ಪೂರಕವಾದ ಕಥೆ ಮಾಡಿದ್ದಾಗಿ ಹೇಳಿಕೊಂಡರು. ಬುಡಕಟ್ಟು ಜನಾಂಗದ ಹುಡುಗನೊಬ್ಬ ತನ್ನ ಕಡೆಯವರಿಗಾದ ಅನ್ಯಾಯಕ್ಕೆ ಸೇಡು ತೀರಿಸಿಕೊಳ್ಳುವ ಕಥೆಯನ್ನು “ಕಲಿವೀರ’ದಲ್ಲಿ ಹೇಳಿದ್ದಾರಂತೆ. ಚಿತ್ರದಲ್ಲಿ ಪಾವನಾ ಲಾಯರ್ ಆಗಿ ನಟಿಸಿದ್ದಾರೆ. ಚಿತ್ರವನ್ನು ಶ್ರೀನಿವಾಸ್, ಹನುಮಂತಪ್ಪ, ರಾಜು ಸೇರಿ ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ನೀನಾಸಂ ಅಶ್ವತ್ಥ, ಅನಿತಾ ಭಟ್ ಮತ್ತಿತರರು ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Jammu- Kashmir: ಆಯ್ಕೆಯಾಗಿ 2 ತಿಂಗಳಾದ್ರೂ ಶಾಸಕರಿಗೆ ಮೊದಲ ವೇತನ ಸಿಕ್ಕಿಲ್ಲ!
Police System: ಕರ್ನಾಟಕ ಪೊಲೀಸರ ಘನತೆ ಕಾಂಗ್ರೆಸ್‌ನಿಂದ ಸರ್ವನಾಶ: ಎಚ್.ಡಿ.ಕುಮಾರಸ್ವಾಮಿ
Koteshwara: ಟಯರ್‌ಗೆ ಗಾಳಿ ತುಂಬುತ್ತಿದ್ದ ವೇಳೆ ಸ್ಫೋ*ಟಗೊಂಡು ಯುವಕ ಗಂಭೀರ; ಕಾರಣಗಳೇನು?
2nd ODI: ವನಿತಾ ಏಕದಿನ ಸರಣಿ: ಇಂದು ಭಾರತ-ವಿಂಡೀಸ್ 2ನೇ ಪಂದ್ಯ
Enforcement Directorate: ಕ್ರಿಮಿನಲ್ ಪಿತೂರಿಯಡಿ ಮಾತ್ರವೇ ಅಕ್ರಮ ಹಣ ವರ್ಗ ಕೇಸು ಬೇಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.