Sandalwood: ಹೊಸಬರ ಕೈಯಲ್ಲಿ ಕಮಂಡಲ
Team Udayavani, Feb 27, 2024, 5:52 PM IST
ಯುವ ಪ್ರತಿಭೆ ಹರ್ಷಿತ್ ಕುಮಾರ್ ನಾಯಕನಾಗಿ ಅಭಿನಯಿಸುತ್ತಿರುವ, ಜೊತೆಗೆ “ಬೃಂದಾವನ ಕ್ರಿಯೇಷನ್ಸ್’ ಬ್ಯಾನರಿನಲ್ಲಿ ಬಂಡವಾಳ ಹೂಡಿ ನಿರ್ಮಿಸುತ್ತಿರುವ ಹೊಸ ಸಿನಿಮಾಕ್ಕೆ “ಕಮಂಡಲ’ ಎಂದು ಹೆಸರಿಡಲಾಗಿದೆ.
“ಈ ಹಿಂದೆ ನನ್ನ ನಿನ್ನ ಪ್ರೇಮಕಥೆ’ ಮತ್ತು “ಗುಲಾಲ್ ಡಾಟ್ ಕಾಮ್’ ಎಂಬ ಸಿನಿಮಾಗಳನ್ನು ನಿರ್ದೇಶಿಸಿದ್ದ ಶಿವು ಜಮಖಂಡಿ, ಕೆಲ ವರ್ಷಗಳ ಬಳಿಕ ಬಹುತೇಕ ಹೊಸಬರನ್ನಿಟ್ಟುಕೊಂಡು “ಕಮಂಡಲ’ ಸಿನಿಮಾಕ್ಕೆ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ.
ಈಗಾಗಲೇ ಸಿನಿಮಾದ ಬಹುತೇಕ ಪ್ರೀ-ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಇತ್ತೀಚೆಗೆ “ಕಮಂಡಲ’ ಸಿನಿಮಾದ ಶೀರ್ಷಿಕೆ ಅನಾವರಣ ಇತ್ತೀಚೆಗೆ ನಡೆಯಿತು. ಇದೇ ವೇಳೆ “ಕಮಂಡಲ’ ಸಿನಿಮಾವನ್ನು “ದೈವಿಕ ಸಾಹಸಗಾಥೆ’ ಎಂದು ಬಣ್ಣಿಸುತ್ತ ಮಾತಿಗಿಳಿದ ನಿರ್ದೇಶಕ ಶಿವು ಜಮಖಂಡಿ, “ಈ ಸಿನಿಮಾದಲ್ಲಿ ಕಮರ್ಷಿಯಲ್, ಪೌರಾಣಿಕ ಮತ್ತು ಪುನರ್ಜನ್ಮ ಎಂಬ ಮೂರು ಅಂಶಗಳನ್ನು ಸೇರಿಸಿ ಕಥೆ ಮಾಡಿದ್ದೇವೆ. ಇದು ಮೂರು ಕಾಲಘಟ್ಟದಲ್ಲಿ ಸಿನಿಮಾದ ಕಥೆ ಸಾಗುತ್ತದೆ. ನಾನೊಮ್ಮೆ ದೇವಸ್ಥಾನಕ್ಕೆ ಹೋದಾಗ, ತೀರ್ಥ ತೆಗೆದುಕೊಂಡೆ. ಆಗ ಒಂದು ಕಂಪನ ಉಂಟಾಯ್ತು. ಆಗ ಕಥೆ ಮತ್ತು ಶೀರ್ಷಿಕೆ ಎರಡೂ ಹುಟ್ಟಿಕೊಂಡಿತು. ಮುಂಬರುವ ಮಾರ್ಚ್ ತಿಂಗಳಿನಿಂದ ಬೆಂಗಳೂರು, ತೀರ್ಥಹಳ್ಳಿ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ’ ಎಂದು ಮಾಹಿತಿ ನೀಡಿದರು.
“ಕಮಂಡಲ’ ಸಿನಿಮಾದಲ್ಲಿ ನಾಯಕ ಹರ್ಷಿತ್ ಕುಮಾರ್ ಅವರೊಂದಿಗೆ ಅಮೃತಾ ಶ್ರೀ, ಕರಣ್ ಆರ್ಯನ್, ಚಂದನಾ ರಾಘವೇಂದ್ರ, ನಾಗೇಂದ್ರ ಅರಸ್, ನಟನ ಪ್ರಶಾಂತ್, ಬಲ ರಾಜವಾಡಿ ಮುಂತಾದವರು ಇತರ ಸಿನಿಮಾಕ್ಕೆ ನಿರ್ದೇಶಕ ಶಿವು ಜಮಖಂಡಿ ಅವರೇ ಸಂಗೀತವನ್ನೂ ಸಂಯೋಜಿಸುತ್ತಿದ್ದು, ಮೊಹ ಮ್ಮದ್ ಹಸೀಬ್ ಛಾಯಾಗ್ರಹಣವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.