‘ಕನಕ ಮಾರ್ಗ’ದ ಮೂಲಕ ಮಕ್ಕಳಿಗೆ ಸನ್ಮಾರ್ಗ
Team Udayavani, Jun 14, 2023, 12:12 PM IST
ಹೊರಪೇಟೆ ಮಲೇಶಪ್ಪ ಅವರ “ಕನಕನ ಹೆಜ್ಜೆ’ ಕಾದಂಬರಿಯನ್ನು ಆಧರಿಸಿ ನಿರ್ಮಾಣವಾಗಿರುವ “ಕನಕ ಮಾರ್ಗ’ ಚಿತ್ರ ತೆರೆಗೆ ಬರಲು ಸಿದ್ಧವಾಗುತ್ತಿದೆ. ಕೆಂಪೇಗೌಡ ಪಾಟಿಲ್ ನಿರ್ಮಾಣದಲ್ಲಿ, ವಿಶಾಲ್ ರಾಜ್ ನಿರ್ದೇಶನದಲ್ಲಿ ಮೂಡಿ ಬಂದಿರುವ “ಕನಕ ಮಾರ್ಗ’ ಸಿನಿಮಾದ ಪತ್ರಿಕಾಗೋಷ್ಠಿ ಹಾಗೂ ಪ್ರದರ್ಶನ ಇತ್ತೀಚಿಗೆ ನಡೆಯಿತು.
ಕಾಗಿನೆಲೆ ಕನಕಪೀಠದ ಶ್ರೀನಿರಂಜನಾ ನಂದ ಪುರಿ ಸ್ವಾಮೀಜಿ ಸೇರಿದಂತೆ ಅನೇಕ ಸ್ವಾಮೀಜಿಗಳು ಹಾಗೂ ರಾಜಕೀಯ ಮುಖಂಡರಾದ ಹೆಚ್. ಎಂ ರೇವಣ್ಣ ಸೇರಿದಂತೆ ಅನೇಕ ಗಣ್ಯರು ಈ ಸಮಾರಂಭದಲ್ಲಿ ಹಾಜರಿದ್ದು, “ಕನಕ ಮಾರ್ಗ’ ಸಿನಿಮಾಕ್ಕೆ ಶುಭ ಹಾರೈಸಿದರು.
ಇದೇ ವೇಳೆ ಮಾತನಾಡಿದ ನಿರ್ದೇಶಕ ವಿಶಾಲ್ ರಾಜ್, “ಕರ್ನಾಟಕ ದಾಸರ, ಶರಣರ ನೆಲೆವೀಡು. ಕನಕದಾಸರು ದಾಸಶ್ರೇಷ್ಠರು. ತಮ್ಮ ಸಾಹಿತ್ಯದ ಮೂಲಕ ಜ್ಞಾನ ದೀವಿಗೆ ಬೆಳಗಿದವರು. ಅಂತಹ ದಾಸಶ್ರೇಷ್ಠರ ಜೀವನವನ್ನು ಆದರ್ಶವಾಗಿ ತೆಗೆದುಕೊಂಡಾಗ ನಾವು ಸನ್ಮಾರ್ಗದಲ್ಲಿ ಸಾಗಬಹುದು. ಅದರಲ್ಲೂ ಈಗಿನ ಮಕ್ಕಳು ಕನಕದಾಸರು ಮೊದಲಾದ ದಾರ್ಶನಿಕರ ಬಗ್ಗೆ ತಿಳಿದುಕೊಳ್ಳಬೇಕು ಎಂಬುದನ್ನು ಈ ಚಿತ್ರದ ಮೂಲಕ ತೋರಿಸಿದ್ದೇವೆ. ಹೊರಪೇಟೆ ಮಲೇಶಪ್ಪ ಅವರ ಕಾದಂಬರಿ ನನಗೆ ಚಿತ್ರ ಮಾಡಲು ಸ್ಪೂರ್ತಿಯಾಯಿತು’ ಎಂದರು.
“ಕನಕ ಮಾರ್ಗ’ ಸಿನಿಮಾವನ್ನು ಕಾಗಿನೆಲೆ, ಬಾಡ ಮುಂತಾದ ಕಡೆ ಚಿತ್ರೀಕರಣ ಮಾಡಲಾಗಿದೆ. ಸುಚೇಂದ್ರ ಪ್ರಸಾಸ್, ಮಾ. ಸ್ಕಂದ, ಗಿರೀಶ್ ಜತ್ತಿ, ಮಾ. ವಿಶ್ವ, ಬೇಬಿ ಸಾನ್ವಿ ಮುಂತಾದವರು ಈ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇನ್ನು ಕಾಗಿನೆಲೆ ಕನಕಪೀಠದ ಶ್ರೀನಿರಂಜನಾನಂದ ಪುರಿ ಸ್ವಾಮೀಜಿ ಕೂಡ ಈ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಸದ್ಯ “ಕನಕ ಮಾರ್ಗ’ ಸಿನಿಮಾದ ಪ್ರಚಾರ ಕಾರ್ಯದಲ್ಲಿ ನಿರತವಾಗಿರುವ ಚಿತ್ರತಂಡ, ಶೀಘ್ರದಲ್ಲೇ ಸಿನಿಮಾವನ್ನು ತೆರೆಗೆ ತರುವ ಯೋಜನೆಯಲ್ಲಿದೆ.
ಚಿತ್ರದಲ್ಲಿ ಅಭಿನಯಿಸಿರುವ ಕಲಾವಿದರಾದ ಮಾ. ಸ್ಕಂದ, ಬೇಬಿ ಸಾನ್ವಿ, ನಿರ್ಮಾಪಕ ಕೆಂಪೇಗೌಡ ಪಾಟೀಲ್ ಸೇರಿದಂತೆ ಸಿನಿಮಾದ ಕಲಾವಿದರು ಮತ್ತು ತಂತ್ರಜ್ಞರು ಚಿತ್ರೀಕರಣದ ಅನುಭವಗಳನ್ನು ಹಂಚಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
Adhipatra Movie: ರೂಪೇಶ್ ಅಧಿಪತ್ರ ಫೆ.7ಕ್ಕೆ ಬಿಡುಗಡೆ
ShivaRajkumar: ಅಮೆರಿಕಾಕ್ಕೆ ತೆರಳುವ ಮುನ್ನ ಶಿವಣ್ಣನ ಮನೆಯಲ್ಲಿ ವಿಶೇಷ ಪೂಜೆ; ಕಿಚ್ಚ ಭಾಗಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.