ಚಿತ್ರವಾಗುತ್ತಿದೆ ಕನಕದಾಸರ ರಾಮಧಾನ್ಯ
Team Udayavani, Jun 24, 2017, 10:15 AM IST
ಈ ಹಿಂದೆ “ಒಲವೇ ವಿಸ್ಮಯ’ ಮುಂತಾದ ಚಿತ್ರಗಳನ್ನು ಮಾಡಿದ್ದ ಟಿ.ಎನ್. ನಾಗೇಶ್, ಇದೀಗ ಇನ್ನೊಂದು ಚಿತ್ರದ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ಈ ಬಾರಿ ಅವರು ಕನಕದಾಸರ “ರಾಮಧಾನ್ಯ’ವನ್ನು ಒಂದಿಷ್ಟು ರೂಪಾಂತರ ಮಾಡಿ, ತೆರೆಯ ಮೇಲೆ ತರುವುದಕ್ಕೆ ಸಜ್ಜಾಗಿದ್ದಾರೆ.
ಕನಕದಾಸರ ಜನಪ್ರಿಯ ಸಾಹಿತ್ಯದಲ್ಲಿ “ರಾಮಧಾನ್ಯ ಚರಿತೆ’ ಸಹ ಒಂದು. ಅದನ್ನು ಮೂಲವಾಗಿಟ್ಟುಕೊಂಡು ರೂಪಾಂತರ ತಂಡದವರು “ರಾಮಧಾನ್ಯ’ ನಾಟಕವನ್ನು ಮಾಡುತ್ತಾ ಬಂದಿದ್ದಾರೆ. ಕೆ.ಎಸ್.ಡಿ.ಎಲ್ ಚಂದ್ರು ನಿರ್ದೇಶನದ ಈ ನಾಟಕ ಈಗಾಗಲೇ ಹಲವು ನಾಟಕಗಳನ್ನು ಕಂಡಿದೆ. ಒಮ್ಮೆ ಈ ನಾಟಕ ನೋಡಿದ ನಾಗೇಶ್ ಅವರಿಗೆ, ಅದನ್ನಿಟ್ಟುಕೊಂಡು ಚಿತ್ರ ಮಾಡಬೇಕು ಎಂದನಿಸಿತಂತೆ.
ಆ ನಾಟಕಕ್ಕೆ ಕೆಲಸ ಮಾಡಿದ್ದ ಬಸವರಾಜ್ ಸೂಳೇರಿಪಾಳ್ಯ ಜೊತೆಗೆ ಸೇರಿ, ಈ ನಾಟಕವನ್ನು ಸಿನಿಮಾ ಮಾಡುವುದಕ್ಕೆ ಸಿದ್ಧತೆ ನಡೆಸಿದ್ದಾರೆ. ಈ ಚಿತ್ರದಲ್ಲಿ ಮೂರು ವಿಭಿನ್ನ ಕಾಲಘಟ್ಟಗಳನ್ನು ತೆರೆದಿಡುವ ಪ್ರಯತ್ನವನ್ನು ಅವರು ಮಾಡುವುದಕ್ಕೆ ಹೊರಟಿದ್ದಾರೆ. ಚಿತ್ರದಲ್ಲಿ ಯಶಸ್ ಸೂರ್ಯ ಮೂರು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಅದರಲ್ಲಿ ಕನಕದಾಸರ ಪಾತ್ರವೂ ಒಂದು ಎಂಬುದು ವಿಶೇಷ.
ಈ ಚಿತ್ರವನ್ನು ನಾಗೇಶ್ ಸೇರಿದಂತೆ ಹತ್ತು ಜನ ಸೇರಿ ದಶಮುಖ ವೆಂಚರ್ ಸಂಸ್ಥೆಯಡಿ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಬೆನಕ ರಾಜು ಅವರು ಛಾಯಾಗ್ರಹಣ ಮಾಡಿದರೆ, ದೇಸಿ ಮೋಹನ್ ಸಂಗೀತ ಸಂಯೋಜಿಸುತ್ತಿದ್ದಾರೆ. ಇನ್ನು ಬಸವರಾಜ್ ಸೂಳೇರಿಪಾಳ್ಯ ಚಿತ್ರಕಥೆ ಹಾಗೂ ಸಂಭಾಷಣೆಯ ಜವಾಬ್ದಾರಿ ಹೊತ್ತಿದ್ದಾರೆ. ಸದ್ಯಕ್ಕೆ ಚಿತ್ರದ ಕೆಲಸಗಳು ಆರಂಭವಾಗಿದ್ದು, ಶ್ರಾವಣದಿಂದ ಚಿತ್ರೀಕರಣ ಶುರುವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Upendra: ʼಯುಐʼಗೆ ಸ್ಯಾಂಡಲ್‌ವುಡ್ ಸಾಥ್; ಉಪೇಂದ್ರ ಚಿತ್ರ ನೋಡಲು ಕಾತುರ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.