ಅಂಬಿ ನೆನಪಲ್ಲಿ ಚಂದನವನ…ಮರೆಯಾದ ಮಾಣಿಕ್ಯನಿಗೆ ಜನ್ಮದಿನದ ಶುಭಾಶಯ
Team Udayavani, May 29, 2021, 1:27 PM IST
ಬೆಂಗಳೂರು : ಕರುನಾಡಿನ ಕರ್ಣ ಅಂಬರೀಶ್ ನಮ್ಮೊಂದಿಗಿದ್ದಿದ್ದರೆ ಇಂದು ಅವರ 69ನೇ ಜನ್ಮ ದಿನವನನ್ನು ಸಂಭ್ರಮದಿಂದ ಆಚರಿಸುತ್ತಿದ್ದೇವು. ಆದರೆ, ವಿಧಿಯಾಟ ತಡೆಯೋರು ಯಾರು? ಇಂದು ರೆಬೆಲ್ ಸ್ಟಾರ್ ಅಂಬಿಯವರ ಜನ್ಮ ದಿನಾಚರಣೆ. ಇದು ಅವರ ಕಾಲವಾದ ನಂತರ ಆಚರಿಸಲಾಗುತ್ತಿರುವ ಮೂರನೆ ಹುಟ್ಟು ಹಬ್ಬ.
ಕನ್ನಡ ಚಿತ್ರರಂಗಕ್ಕೆ ಹಿರಿಯಣ್ಣನಂತಿದ್ದ ಅಂಬರೀಶ್ ಅವರನ್ನು ಇಂದು ಇಡೀ ಚಂದನವನ ನೆನಪು ಮಾಡಿಕೊಳ್ಳುತ್ತಿದೆ. ನಮ್ಮೊಂದಿಗೆ ಅವರಿಲ್ಲ ಎನ್ನುವ ನೋವಿನಲ್ಲಿಯೇ ಅಂಬಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸುತ್ತಿದೆ. ಸ್ಯಾಂಡಲ್ವುಡ್ ನ ಹಿರಿಯ-ಕಿರಿಯ ನಟರು, ನಿರ್ದೇಶಕರು, ನಿರ್ಮಾಪಕರಾದಿಯಾಗಿ ಎಲ್ಲರೂ ಅಂಬರೀಶ್ ಅವರನ್ನು ನೆನೆದು ವಿಶ್ ಮಾಡುತ್ತಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ‘ ಎಂದಿಗೂ ಮಾಸದ ಅಂಬಿ ಅಪ್ಪಾಜಿಯ ಸವಿನೆನಪು, ಅವರ ಭಾಷಾಭಿಮಾನ, ಖಡಕ್ ಜೀವನ ಶೈಲಿ ಎಲ್ಲರಿಗೂ ಸ್ಫೂರ್ತಿಯಾಗಿರುತ್ತದೆ. ಮತ್ತೊಮ್ಮೆ ಕರುನಾಡಲ್ಲೇ ಹುಟ್ಟಿ ಬರಲಿ ನಮ್ಮ ನೆಚ್ಚಿನ ಮಂಡ್ಯದ ಗಂಡು ಎಂದು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
ಎಂದಿಗೂ ಮಾಸದ ಅಂಬಿ ಅಪ್ಪಾಜಿಯ ಸವಿನೆನಪು. ಅವರ ಭಾಷಾಭಿಮಾನ, ಖಡಕ್ ಜೀವನ ಶೈಲಿ ಎಲ್ಲರಿಗೂ ಸ್ಫೂರ್ತಿಯಾಗಿರುತ್ತದೆ. ಮತ್ತೊಮ್ಮೆ ಕರುನಾಡಲ್ಲೇ ಹುಟ್ಟಿಬರಲಿ ನಮ್ಮ ನೆಚ್ಚಿನ ಮಂಡ್ಯದ ಗಂಡು @sumalathaA pic.twitter.com/r8jrJarA0v
— Darshan Thoogudeepa (@dasadarshan) May 29, 2021
ಅಂಬರೀಶ್ ಅವರ 69ನೇ ಜಯಂತಿಯಂದು ಟ್ವೀಟ್ ಮೂಲಕ ನೆನಪಿಸಿಕೊಂಡಿರುವ ಸುದೀಪ್, ನಿಜವಾಗಿಯೂ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ ಮಾಮ ಎಮದು ಬರೆದುಕೊಂಡಿದ್ದಾರೆ.
You are TRUELY missed Mama.
??????♥️?????? pic.twitter.com/2IFomjLwsE— Kichcha Sudeepa (@KicchaSudeep) May 29, 2021
ಅಂಬರೀಷ್ ಅಣ್ಣನ ಸರಳತೆ, ಭಾಷಾಭಿಮಾನ, ಖಡಕ್ ಜೀವನ ಶೈಲಿ, ಇನ್ನಷ್ಟು ಗುಣಗಳು ನಮ್ಮೆಲ್ಲರಿಗೂ ಸ್ಫೂರ್ತಿಯಾಗಿ ಉಳಿಯುತ್ತದೆ. ನಮ್ಮ ಮಂಡ್ಯದ ಗಂಡು ಅಂಬರೀಷ್ ಅಣ್ಣನವರಿಗೆ ಜನ್ಮ ವಾರ್ಷಿಕೋತ್ಸವದ ಶುಭಾಶಯಗಳು ಎಂದು ನಟ ಸತೀಶ್ ನೀನಾಸಂ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಹಿರಿಯ ನಟ ರಮೇಶ್ ಅರವಿಂದ್, ಹಾಸ್ಯ ನಟ ಶರಣ್, ನೆನಪಿರಲಿ ಪ್ರೇಮ್, ಧ್ರುವ ಸರ್ಜಾ, ಸೃಜನ್ ಲೋಕೇಶ್, ಸಿಂಪಲ್ ಸುನಿ, ಶಶಾಂಕ್, ನಟಿ ರಚಿತಾ ರಾಮ್ ಸೇರಿದಂತೆ ಕನ್ನಡ ಚಿತ್ರರಂಗದ ಅನೇಕರು ಅಂಬರೀಶ್ ಅವರು ಜನ್ಮದಿನಕ್ಕೆ ಶುಭಕೋರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್
Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
Mangaluru: ಪರಿಶಿಷ್ಟ ಜಾತಿ ಪಟ್ಟಿಗೆ ಮರುಸೇರ್ಪಡೆ ಆಗ್ರಹಿಸಿ ಕುಡುಬಿ ಸಮಾಜದವರಿಂದ ಜಾಥಾ
Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.